ತಾನು ಮತ್ತೆ ತಾಯಿಯಾಗಲು ಏಕೆ ಸಾಧ್ಯವಾಗಲಿಲ್ಲ ಬಹಿರಂಗಪಡಿಸಿದ್ದ Mahima Chaudhary
First Published | Jun 10, 2022, 6:39 PM ISTಬಾಲಿವುಡ್ ನಟಿ ಮಹಿಮಾ ಚೌಧರಿ (Mahima Chaudhary) ಇತ್ತೀಚೆಗೆ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದಾರೆ. ಆದರೆ, ಗುರುವಾರದವರೆಗೆ (ಜೂನ್ 9) ಮಹಿಮಾ ಮತ್ತು ಕೆಲವು ಆಪ್ತರನ್ನು ಹೊರತುಪಡಿಸಿ ಈ ವಿಷಯ ಯಾರಿಗೂ ತಿಳಿದಿರಲಿಲ್ಲ. ಈ ಸುದ್ದಿಯನ್ನು ಅನುಪಮ್ ಖೇರ್ ((Anupam Kher) ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದಾಗ, ಮಹಿಮಾರ ಅಭಿಮಾನಿಗಳು ಆಘಾತಕ್ಕೊಳಗಾದರು. ಅಂದಹಾಗೆ, ಮಹಿಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ, ಅವರು ಅನೇಕ ಏಳುಬೀಳುಗಳನ್ನು ಕಂಡಿದ್ದಾರೆ. ಮಹಿಮಾ 15 ವರ್ಷದ ಮಗಳ ತಾಯಿ. ಆದರೆ ಆಕೆಗೆ ಮತ್ತೊಂದು ಮಗುವಿಗೆ ಜನ್ಮ ನೀಡಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕೆ ಕಾರಣವನ್ನು ಮಹಿಮಾ ಅವರೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.