22 ವರ್ಷ ಹಳೆಯ ಸ್ಮೀಮ್‌ಸೂಟ್‌ ಫೋಟೋ ಶೇರ್‌ ಮಾಡಿದ Priyanka Chopra ಗುರುತೇ ಸಿಗೋಲ್ಲ!

First Published | Jun 10, 2022, 6:34 PM IST

ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯವಾಗಿರುವ ತಾರೆಗಳಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ಕೂಡ ಒಬ್ಬರು. ಕೆಲವು ಗಂಟೆಗಳ ಹಿಂದೆ, ಅವರು Instagram ನಲ್ಲಿ ತಮ್ಮ  22 ವರ್ಷದ ಹಿಂದಿನ  ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರನ್ನು  ಗುರುತಿಸಲು ಸಹ ಕಷ್ಟ. ಈ ಫೋಟೋಶೂಟ್ ಮಾಡುವಾಗ ಆಕೆಗೆ ಕೇವಲ 18 ವರ್ಷ ವಯಸ್ಸಾಗಿತ್ತು.  ಅವರ ಫೋಟೋಗೆ ಅಭಿಮಾನಿಗಳ ಜೊತೆಗೆ ಸೆಲೆಬ್ರಿಟಿಗಳು ಕೂಡ ತೀವ್ರವಾಗಿ  ಕಮೆಂಟ್ ಮಾಡುತ್ತಿದ್ದಾರೆ.

ಫೋಟೋವನ್ನು ಹಂಚಿಕೊಳ್ಳುತ್ತಾ, 'Circa November 2000. Presenting my 18 yr old 'smolder' 'ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ 22 ವರ್ಷದ ಹಳೆಯ ಶೂಟಿಂಗ್‌ನ ಫೋಟೋಗಳನ್ನು  ರಣವೀರ್ ಸಿಂಗ್ ಶಾಕ್ ಆಗಿ ಕಾಮೆಂಟ್ ಮಾಡಿದ್ದಾರೆ.

'ಇದರಲ್ಲಿ ಭಾಗ್ಯಶ್ರೀಯಂತೆ ಕಾಣುತ್ತಿದ್ದೀರಿ, ಏಕೆ ಎಂದು ನನಗೆ ಗೊತ್ತಿಲ್ಲ' ಎಂದು ಒಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. ಇದರ ಹೊರತಾಗಿ, ಹೆಚ್ಚಿನವರು ಹೃದಯ ಮತ್ತು ಬೆಂಕಿಯಿಡುವ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

Tap to resize

ಫೋಟೋದಲ್ಲಿ, ಪ್ರಿಯಾಂಕಾ ಚೋಪ್ರಾ ಬಿಕಿನಿಯೊಂದಿಗೆ ಕೈಯಲ್ಲಿ ಕಪ್ಪು ಬಳೆಗಳನ್ನು ಧರಿಸಿದ್ದಾರೆ. ಅವರ ಕೂದಲು ತೆರೆದಿರುತ್ತದೆ ಮತ್ತು ಅವರ ಹಣೆಯ ಮೇಲೆ ಬಿಂದಿಯನ್ನು ಕೂಡ ಇರಿಸಲಾಗುತ್ತದೆ.

18ರ ಹರೆಯದ ಪ್ರಿಯಾಂಕಾ ಚೋಪ್ರಾ ತುಂಬಾ ಮುಗ್ಧರಾಗಿ ಕಾಣುತ್ತಿದ್ದಾರೆ. ಈ ಫೋಟೋದಲ್ಲಿ ಅವರು  ಮರದ ಮೇಲೆ ಕೈಯಿಟ್ಟು ಸಮುದ್ರತೀರದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

ಅವರು 2000 ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ. ಕಾಲಕ್ಕೆ ತಕ್ಕಂತೆ ಪ್ರಿಯಾಂಕಾ ಚೋಪ್ರಾ ಲುಕ್ ಬದಲಾಗಿದೆ.  ಸಮಯದೊಂದಿಗೆ, ಪ್ರಿಯಾಂಕಾ ಹೆಚ್ಚು ಗ್ಲಾಮರಸ್ ಮತ್ತು ಬೋಲ್ಡ್ ಆಗಿದ್ದಾರೆ.  

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ, ಅವರು ಕಿತ್ತಳೆ ಬಣ್ಣದ ಹೊಳೆಯುವ ಕ್ಲೀವೇಜ್ ಶೋ ಮಾಡುವ ಗೌನ್ ಧರಿಸಿ ಕಾಣಿಸಿಕೊಂಡರು.

ಪ್ರಿಯಾಂಕಾ ಚೋಪ್ರಾ ಅನೇಕ ಬೋಲ್ಡ್ ಫೋಟೋಶೂಟ್‌ಗಳನ್ನು ಸಹ ಮಾಡಿದ್ದಾರೆ, ಅವರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ  ಹಂಚಿಕೊಳ್ಳುತ್ತಿರುತ್ತಾರೆ. ಆಗಾಗ ಅವರ ಹಾಟ್‌ ಪೋಟೋಗಳು ವೈರಲ್‌ ಆಗುತ್ತವೆ.

ಪ್ರಿಯಾಂಕಾ ಅವರು ಸದ್ಯ ಬಾಲಿವುಡ್‌ನಿಂದ ದೂರವಾಗಿ ಹಾಲಿವುಡ್ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಲಿವುಡ್ ಚಿತ್ರಗಳತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ 2018 ರಲ್ಲಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರನ್ನು ವಿವಾಹವಾದರು. ಈ ವರ್ಷ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ದಂಪತಿಗಳು ಮಗಳ ಪೋಷಕರಾಗಿದ್ದರು.

Latest Videos

click me!