ಸುಶಾಂತ್ ನಿಂದ ದೂರವಾಗು ಎಂದು ರಿಯಾಗೆ ಮಹೇಶ್‌ ಭಟ್  ಹೇಳಿದ್ರಾ?

First Published | Jul 29, 2020, 10:06 PM IST

ಮುಂಬೈ(ಜು.  29) ಸುಶಾಂತ್ ಸಿಂಗ್ ಅವರಿಂದ ದೂರವಾಗಲು ನಾನು ಯಾವತ್ತೂ ರಿಯಾ ಚಕ್ರವರ್ತಿಗೆ ಹೇಳಿಲ್ಲ ಎಂದು ನಿರ್ದೇಶಕ ಮಹೇಶ್ ಭಟ್ ಹೇಳಿದ್ದಾರೆ. ಇದಕ್ಕೆ ಕಾರಣ ಇದೆ. ಸುಶಾಂತ್ ಪ್ರಿಯತಮೆಯೊಂದಿಗೆ ಭಟ್ ಹೆಸರು ಥಳಕು ಹಾಕಿಕೊಂಡಿತ್ತು. 

ನಾನು ಸುಶಾಂತ್‌ನನ್ನು ಭೇಟಿಯಾಗಿದ್ದೇ 2 ಸಲ, ಬ್ರೇಕ್‌ಅಪ್ ಮಾಡೋಕೆ ರಿಯಾಗೆ ಹೇಳಿಲ್ಲ ಎಂದು ಭಟ್ ಹೇಳಿದ್ದಾರೆ.
undefined
ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ತನಿಖೆಯಲ್ಲಿದೆ. ನಿರ್ದೇಶಕ-ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ, ನಿರ್ಮಾಪಕ ಆದಿತ್ಯ ಚೋಪ್ರಾ, ಮಹೇಶ್ ಭಟ್ ಎಲ್ಲರೂ ವಿಚಾರಣೆ ಎದುರಿಸುತ್ತಿದ್ದಾರೆ.
undefined
Tap to resize

ಮಹೇಶ್ ಭಟ್ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿ ಬಂದಿದ್ದಾರೆ.
undefined
2018 ಮತ್ತು 2020 ಎರಡೇ ಸಾರಿ ನಾನು ಸುಶಾಂತ್ ಅವರನ್ನು ಭೇಟಿ ಮಾಡಿದ್ದೆ ಎಂದು ಭಟ್ ಹೇಳಿದ್ದಾರೆ.
undefined
ನಾನು ಯಾವಗಾಗಲು ನೆಪೋಟಿಸಂ ಸಪೋರ್ಟ್ ಮಾಡಿಲ್ಲ. ನನ್ನ ಚಿತ್ರದಲ್ಲಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ.
undefined
ರಿಯಾ ಸುಶಾಂತ್ ತೊರೆಯಲು ನಾನು ಕಾರಣ ಎಂಬ ಆರೋಪದಲ್ಲಿ ಯಾವ ಹುರುಳಿಲ್ಲ.
undefined
ಸಡಕ್ 2 ದಲ್ಲಿ ಸುಶಾಂತ್ ಜತೆ ಕೆಲಸ ಮಾಡಬೇಕಿತ್ತು ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ರಿಯಾ ಅವರನ್ನು ಆ ಚಿತ್ರದಲ್ಲಿ ನಾಯಕಿಯನ್ನಾಗಿ ಹಾಕಿಕೊಳ್ಳಬೇಕು ಎಂದು ಸುಶಾಂತ್ ಕೇಳಿದ್ದರು ಎಂಬುದರಲ್ಲಿಯೂ ಸತ್ಯ ಇಲ್ಲ ಎಂದು ಭಟ್ ಹೇಳಿದ್ದಾರೆ.
undefined

Latest Videos

click me!