ನಟಿ ಸಾಯಿ ಪಲ್ಲವಿ ಮತ್ತೊಂದು ಬ್ಲಾಕ್‌ಬಸ್ಟರ್ ಚಿತ್ರದ ಮೂಲಕ ಶೈನ್ ಆಗುತ್ತಿದ್ದಾರೆ. ಇತ್ತೀಚಿನ ಬಿಡುಗಡೆಯಾದ ಅವರ ಸಿನಿಮಾ 'ಲವ್ ಸ್ಟೋರಿ' ಪ್ರಸ್ತುತ ಚರ್ಚೆಯಲ್ಲಿದೆ.
ಭಾರೀ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಈ ರೊಮ್ಯಾಂಟಿಕ್ ಸಿನಿಮಾ ಸೂಪರ್ ಸ್ಟಾರ್ ಮಹೇಶ್ ಬಾಬು ಚಿತ್ರ ನೋಡಿದ ನಂತರ ಟ್ವೀಟ್ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಲವ್ ಸ್ಟೋರಿ(Love Story) ಶೇಖರ್ ಕಮ್ಮುಲಾ ಎಲ್ಲ ತರದಲ್ಲಿ ಸರ್ಫೆಕ್ಟ್ ಆಗಿ ಸಿನಿಮಾ ಕೊಡುತ್ತಾರೆ. ನಾಕ್ ಔಟ್ ಫಿಲಂ ನೀಡುತ್ತಾರೆ !! ನಾಗ ಚೈತನ್ಯ ಅಕ್ಕಿನೇನಿ ಒಬ್ಬ ನಟನಾಗಿ ವಯಸ್ಸಿಗೆ ಬಂದಿದ್ದಾರೆ. ಅವರು ಗೇಮ್ ಚೇಂಜರ್. ಎಂತಹ ಪ್ರದರ್ಶನ ಎಂದು ಕಮೆಂಟಿಸಿದ್ದಾರೆ.
ಟಾಲಿವುಡ್ ಪ್ರಿನ್ಸ್ ನಂತರ 'ಪ್ರೇಮಂ' ನಟಿ ಸಾಯಿ ಪಲ್ಲವಿ(Sai Pallavi) ಎಂದಿನಂತೆ ಸೆನ್ಸೇಷನಲ್. ಆ ಹುಡುಗಿಗೆ ಮೂಳೆ ಇದೆಯೇ ??? ಪರದೆಯಲ್ಲಿ ಈ ರೀತಿ ಡ್ಯಾನ್ಸ್ ಮಾಡುವುದನ್ನು ಯಾರೂ ನೋಡಿಲ್ಲ !!! ಕನಸಿನಂತೆ ಚಲಿಸುತ್ತಾರೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಾಯಿ ಪಲ್ಲವಿ ಉತ್ಸಾಹದಿಂದ ಉತ್ತರಿಸಿದ್ದಾರೆ. ವಾಹ್! ವಾಸ್ತವಕ್ಕೆ ಮರಳಲು ನನಗೆ ಸ್ವಲ್ಪ ಸಮಯ ಹಿಡಿಯಿತು! ನಿಮ್ಮ ಉದಾರವಾದ ಮಾತುಗಳಿಂದ ನಾನು ವಿನಮ್ರನಾಗಿದ್ದೇನೆ. ತುಂಬಾ ಧನ್ಯವಾದಗಳು ಸರ್. Ps: ನನ್ನೊಳಗಿರುವ ವಿದ್ಯಾರ್ಥಿ ನಿಮ್ಮ ಟ್ವೀಟ್ ಅನ್ನು ಈಗಾಗಲೇ ಮಿಲಿಯನ್ ಬಾರಿ ಓದಿದೆ ಎಂದಿದ್ದಾರೆ.
Love story
ಸಾಯಿ ಪಲ್ಲವಿ ನಾಗ ಚೈತನ್ಯ ನಟಿಸಿರುವ ಸಿನಿಮಾ ಹಾಡುಗಳೂ ವೈರಲ್ ಆಗಿದ್ದು ನಟಿಯ ಡ್ಯಾನ್ಸ್ ಪ್ರತಿಭೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.