ಇತ್ತೀಚೆಗೆ ಅಭಿಮಾನಿಗಳು ಮಾಡುವ ಕೆಲಸಗಳು ಒಂದೊದಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನಾದರೂ ವಿಶೇಷವಾದದ್ದನ್ನು ಮಾಡಬೇಕೆಂಬ ಹಂಬಲದಲ್ಲಿ ವಿಚಿತ್ರ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದಾರೆ. ಆದರೆ ಕೆಲವರು ಮಾತ್ರ ಹೀಗೆ ಯೋಚಿಸುತ್ತಾರೆ. ಡೈ ಹಾರ್ಡ್ ಫ್ಯಾನ್ಸ್‌ಗಳು ಹಚ್ಚೆ ಹಾಕಿಸಿಕೊಳ್ಳುವುದು, ಫ್ಯಾಷನ್ ಅನುಸರಿಸುವುದು, ಪಾದಯಾತ್ರೆ ಮಾಡುವುದು, ವಿಗ್ರಹಗಳನ್ನು ನಿರ್ಮಿಸಿ ಗುಡಿ ಕಟ್ಟಿ ಪೂಜಿಸುವುದು ಮುಂತಾದವುಗಳನ್ನು ಮಾಡುತ್ತಾರೆ. ಈಗಾಗಲೇ ರಜನಿಕಾಂತ್, ಸೋನು ಸೂದ್, ಖುಷ್ಬೂ, ನಮಿತಾ ಮುಂತಾದ ಅನೇಕ ನಟರಿಗೆ ಗುಡಿ ಕಟ್ಟಿ ಪೂಜಿಸುವುದನ್ನು ನೋಡಿದ್ದೇವೆ.