ಫೋಟೋ ಶೇರ್ ಮಾಡಿ 'ಮನೆಯಲ್ಲಿ ಮಾಡಿರುವ ಪಿಜ್ಜಾ ಯಾರಿಗೆ ಬೇಕು? ನನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಶೀಘ್ರದಲ್ಲೇ ಬರಲಿದೆ. ನಿಮ್ಮ ಫೆವರೇಟ್ ಡಿಶ್ ಯಾವುದು? ಎಂದು ಬರೆದಿದ್ದಾರೆ ಶ್ರೀರಾಮ್ ನೆನೆ.
undefined
ಮಾಧುರಿ ದೀಕ್ಷಿತ್ ಮತ್ತು ಶ್ರೀರಾಮ್ ನೆನೆ ಅವರ ಈ ಫೋಟೋಗೆ ಫ್ಯಾನ್ಸ್ ಸಖತ್ ಲೈಕ್ ಹಾಗೂ ಕಾಮೆಂಟ್ ಮಾಡಿದ್ದಾರೆ.
undefined
'ನೀವು ಒಳ್ಳೆಯ ಕುಕ್, ಮಾಧುರಿ ಜಿ ತುಂಬಾ ಅದೃಷ್ಟಶಾಲಿ' ಎಂದು ಒಬ್ಬ ಯೂಸರ್ ಕಾಮೆಂಟ್ ಮಾಡಿದರೆ, 'ನೀವಿಬ್ಬರು ಸಂತೋಷದಿಂದ ಇರುವುದು ನೋಡಿ ಖುಷಿಯಾಗುತ್ತದೆ. ಯಾರ ದೃಷ್ಟಿಯೂ ಬೀಳದಿರಲಿ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
undefined
ತಮಗೆ ಸ್ವಲ್ಪಅಡುಗೆ ಮಾಡಲು ಬರುತ್ತಿತ್ತು. ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಚೆನ್ನಾಗಿ ಅಡುಗೆ ಕಲಿಯಲು ಸಾಧ್ಯವಾಗಲಿಲ್ಲ. ಆದರೆ ಮದುವೆಯ ನಂತರ ಅವರು ಬಹಳಷ್ಟು ಅಡುಗೆ ಕಲಿತರು ಎಂದು ಸಂದರ್ಶನವೊಂದರಲ್ಲಿ ಮಾಧುರಿ ಹೇಳಿದರು
undefined
'ಯುಎಸ್ ಅಲ್ಲಿ ರಾಮ್ ಮನೆಯಲ್ಲಿ ಫ್ರೆಂಚ್ ಕುಕ್ ಇದ್ದರು. ಅವರಿಂದ ಕಾಂಟಿನೆಂಟಲ್, ಫ್ರೆಂಚ್, ಇಟಾಲಿಯನ್ ಅಡುಗೆಗಳನ್ನು ಕಲಿತೆ ಹಾಗೂ. ನನ್ನ ತಾಯಿಯಿಂದ ಭಾರತೀಯ ಆಹಾರವನ್ನು ಕಲಿತಿದ್ದೇನೆ. ನಾನು ಇಂದಿಗೂ ತಯಾರಿಸುವುದು ನನ್ನ ತಾಯಿಯ ರೆಸಿಪಿ. ರಾಮ್ ನನಗಿಂತ ಒಳ್ಳೆಯ ಕುಕ್, ಆದರೆ ನಾನೂ ಕೆಟ್ಟ ಕುಕ್ ಅಲ್ಲ' ಎಂದು ಹೇಳಿದ್ದರು ಮಾಧುರಿ.
undefined
ಮಾಧುರಿ ಫ್ರೀ ಟೈಮ್‌ನಲ್ಲಿ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಅವರು ಕೆಲವೊಮ್ಮೆ ಪುತ್ರರೊಂದಿಗೆ ಡ್ಯಾನ್ಸ್ ಮಾಡುವುದು, ಕೆಲವೊಮ್ಮೆ ಹಾಡುಗಳನ್ನು ರೆಕಾರ್ಡಿಂಗ್ ಮಾಡುವುದು ಕಂಡುಬರುತ್ತದೆ.
undefined
ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಂತರ ಮಾಧುರಿಯ ಅನೇಕ ಸಿನಿಮಾಗಳು ಫ್ಲಾಪ್ ಆಗಿದ್ದವು. ತೇಜಾಬ್ ಚಿತ್ರದಿಂದ ಮಾಧುರಿ ಗುರುತಿಸಲ್ಪಟ್ಟರು. ಅದರ ನಂತರ, ಅವರು ಹಿಂದೆ ತಿರುಗಿ ನೋಡಲಿಲ್ಲ.
undefined
ಮಾಧುರಿ ಡಾ. ಶ್ರೀರಾಮ್ ಮಾಧವ್ ನೆನೆ ಅವರನ್ನು 17 ಅಕ್ಟೋಬರ್ 1999 ರಂದು ವಿವಾಹವಾದರು.
undefined
ಶ್ರೀರಾಮ್ ನೆನೆ ಹಾಗೂ ನಟಿಯ ಭೇಟಿ ಆಕೆಯ ಸಹೋದರನ ಮನೆಯ ಪಾರ್ಟಿಯಲ್ಲಿ (ಲಾಸ್ ಏಂಜಲೀಸ್) ಆಯಿತು. ಆದರೆ ಮಾಧುರಿ ಬಾಲಿವುಡ್‌ನ ಫೆಮಸ್ ನಟಿ ಎಂಬ ವಿಷಯ ನೆನೆ ಅವರಿಗೆ ತಿಳಿದಿರಲಿಲ್ಲ.ಸ್ವಲ್ಪ ಸಮಯದ ನಂತರ ಅವರು ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿ ಮದುವೆಯಾಗಲು ನಿರ್ಧರಿಸಿದ್ದರು ಎಂದು ಮಾಧುರಿ ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದರು.
undefined
ಅವರು ತಮ್ಮ ಕೆರಿಯರ್‌ನ ಟಾಪ್‌ನಲ್ಲಿದ್ದಾಗ ಮದುವೆಯಾಗಲು ನಿರ್ಧರಿಸಿದರು. ನೆನೆ ವೃತ್ತಿಯಲ್ಲಿ ವೈದ್ಯರಾಗಿದ್ದು, ಲಾಸ್ ಏಂಜಲೀಸ್‌ನಲ್ಲಿ ಕಾರ್ಡಿಯೊವವಾಸ್ಕುಲರ್ ಸರ್ಜನ್ ಆಗಿದ್ದಾರೆ.
undefined
ಮದುವೆಯ ನಂತರ, ಮಾಧುರಿ ತನ್ನ ಪತಿಯೊಂದಿಗೆ ಅಮೆರಿಕಕ್ಕೆ ತೆರಳಿದರು. ಈ ದಂಪತಿಗೆ ಅರಿನ್ ಮತ್ತು ರಯಾನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
undefined
ನಂತರ ಮಾಧುರಿ ದೀಕ್ಷಿತ್ 2007 ರಲ್ಲಿ ಆಜಾ ನಾಚ್ಲೆ ಚಿತ್ರದ ಮೂಲಕ ಬಾಲಿವುಡ್‌ಗೆ ಮತ್ತೆ ಎಂಟ್ರಿ ಕೊಟ್ಟರು. ಪ್ರಸ್ತುತ, ಯಾವುದೇ ಸಿನಿಮಾದ ಆಫರ್ ಹೊಂದಿರದ ಅವರು ಕೊನೆಯ ಬಾರಿಗೆ 'ಕಲಾಂಕ್' ಚಿತ್ರದಲ್ಲಿ ಕಾಣಿಸಿಕೊಂಡರು.
undefined
ಮಾಧುರಿ 1984 ರಲ್ಲಿ ವೃತ್ತಿಜೀವನವನ್ನು ಪ್ರಾರಂಭಿಸಿದ ಅಬೋಧ್ ಸಿನಿಮಾ ಸೂಪರ್ ಫ್ಲಾಪ್ ಆಗಿತ್ತು. ನಂತರ 1988 ರ ತೇಜಾಬ್ ಸಿನಿಮಾ ಮಾಧುರಿಯನ್ನು ರಾತ್ರೋರಾತ್ರಿ ಸ್ಟಾರ್ ಆಗಿ ಮಾಡಿತು.
undefined
ರಾಮ್ ಲಖನ್, ತ್ರಿದೇವ್, ಸಾಜನ್, ತೇಜಾಬ್, ಥನೇದಾರ್, ಸನ್, ಖಲ್ನಾಯಕ್, ಕಿಶನ್ ಕನ್ಹಯ್ಯ, ಅಂಜಾಮ್, ರಾಜಾ, ದಿಲ್, ಅರ್ಜು, ಹಮ್ ಆಪ್ಕೆ ಹೈ ಕೌನ್, ದಿಲ್ ತೋ ಪಾಗಲ್ ಹೈ, ದೇವದಾಸ್ ಮುಂತಾದ ಅನೇಕ ಸೂಪರ್‌ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ಮಾಧುರಿ ದೀಕ್ಷಿತ್.
undefined