ಸ್ಟಾರ್ ನಟಿಯರ ಜೊತೆ ಡೇಟಿಂಗ್, ಫ್ಲರ್ಟಿಂಗ್ ಮಾಡಿದ್ದ ಅಕ್ಷಯ್ ಕುಮಾರ್ ಕೊನೆಗೆ ಟ್ವಿಂಕಲ್ ಖನ್ನಾರನ್ನ ಮದ್ವೆಯಾಗಿದ್ದೇಕೆ?

First Published | Aug 12, 2024, 3:54 PM IST

ಬಾಲಿವುಡ್‌ನ ಸ್ಟಾರ್ ನಟಿಯರ ಜೊತೆ ಡೇಟಿಂಗ್, ಫ್ಲರ್ಟಿಂಗ್ ಮಾಡಿ ಸುದ್ದಿಯಾಗಿದ್ದ ನಟ ಅಕ್ಷಯ್ ಕುಮಾರ್, ಕೊನೆಗೆ ಟ್ವಿಂಕಲ್ ಖನ್ನಾರನ್ನ ಮದ್ವೆಯಾಗಿದ್ದು ಯಾಕೆ? ಇಲ್ಲಿದೆ ಈ ಜೋಡಿಯ ಕುರಿತು ಇಂಟ್ರೆಸ್ಟಿಂಗ್ ಮಾಹಿತಿ. 
 

ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ಟ್ವಿಂಕಲ್ ಖನ್ನಾ ಮೊದಲ ಬಾರಿ ಭೇಟಿಯಾಗಿದ್ದು ಫಿಲಂ ಫೇರ್ ಜೊತೆಯಾಗಿ ಫೋಟೋ ಶೂಟ್ ಮಾಡೋ ಸಂದರ್ಭದಲ್ಲಿ. ಮೊದಲ ಬಾರಿಗೆ ಟ್ವಿಂಕಲ್ ನ ನೋಡಿದ ಕೂಡಲೇ ಅಕ್ಷಯ್ ಕುಮಾರ್ ಗೆ ಕ್ರಶ್ ಆಯ್ತಂತೆ. 
 

ಟ್ವಿಂಕಲ್ (Twinkle Khanna) ಭೇಟಿಯಾಗೋ ಮುನ್ನ ಅಕ್ಷಯ್ ಕುಮಾರ್ ರವೀನಾ ಟಂಡನ್ ಜೊತೆ ಡೇಟಿಂಗ್ ಮಾಡ್ತಿದ್ರು, ಆದರೆ ಹೊಂದಾಣಿಕೆ ಸಮಸ್ಯೆಯಿಂದಾಗಿ ಇಬ್ಬರು ಬ್ರೇಕ್ ಅಪ್ ಮಾಡಿಕೊಂಡಿದ್ದರು. ಆ ಕಾಲದಲ್ಲಿ ಅಕ್ಷಯ್ ಹೆಸರು ಹಲವಾರು ಜನ ಟಾಪ್ ಹೀರೋಯಿನ್ ಗಳ ಜೊತೆ ಕೇಳಿ ಬಂದಿದ್ದರಿಂದ ಇವರನ್ನ ಬಾಲಿವುಡ್‌ನ ಕ್ಯಾಸನೋವಾ ಅಂತಾನೂ ಕರೆಯುತ್ತಿದ್ದರು ಜನ. 
 

Tap to resize

ಆದ್ರೆ ಟ್ವಿಂಕಲ್ ಖನ್ನಾರನ್ನ ಯಾವಾಗ ಭೇಟಿಯಾದ್ರೂ ಅವರ ಜೀವನದಲ್ಲಿ ಎಲ್ಲನೂ ಬದಲಾಯ್ತು. ಆದರೆ ಟ್ವಿಂಕಲ್ ಖನ್ನಾಗೆ ಮಾತ್ರ ಆ ಟೈಮಲ್ಲಿ ಲವ್ವಲ್ಲಿ ಬೀಳೋದಕ್ಕೆ ಇಷ್ಟಪಡ್ಲಿಲ್ವಂತೆ, ಆದ್ರೆ ಅಕ್ಷಯ್ ಕುಮಾರ್ ಪ್ರೀತಿ ನೋಡಿ, ಅದನ್ನ ಬಿಟ್ಟುಕೊಡೋದನ್ನ ಮನ್ಸಿಲ್ಲದೇ ಲವ್ ಮಾಡಿದ್ರಂತೆ ಟ್ವಿಂಕಲ್. 
 

ಇನ್ನು ಇಂಟರ್ ನ್ಯಾಷನಲ್ ಕಿಲಾಡಿ (International Khiladi) ಸಿನಿಮಾದ ಶೂಟಿಂಗ್ ವೇಳೆ ಈ ಜೋಡಿ ಒಬ್ಬರನ್ನೊಬ್ಬರ ಲವ್ ಮಾಡೋದಕ್ಕೆ, ಡೇಟ್ ಮಾಡೋದಕ್ಕೆ ಆರಂಭಿಸಿದ್ರು. ಇವರಿಬ್ಬರು ಎಷ್ಟೊಂದು ಲವ್ ಮಾಡ್ತಿದ್ರು ಅಂದ್ರೆ ಅಕ್ಷಯ್ ಈಕೆಯನ್ನಲ್ಲದೇ ಬೇರೆ ಯಾರನ್ನೂ ಮದ್ವೆ ಆಗೋದಿಲ್ಲ ಅಂತ ನಿರ್ಧರಿಸಿದ್ರಂತೆ. 
 

ಆದ್ರೆ ಟ್ವಿಂಕಲ್ ಖನ್ನಾ ಒಂದು ಕಂಡೀಷನ್ ಹಾಕಿದ್ರಂತೆ, ಒಂದು ವೇಳೆ ಆಕೆ ನಟಿಸುತ್ತಿರೋ ಮೇಳ ಸಿನೆಮಾ ಫ್ಲಾಪ್ ಆದ್ರೆ ಮಾತ್ರ ಆಕೆ ಅಕ್ಷಯನ್ನು ಮದ್ವೆ ಆಗೋದಾಗಿ ಹೇಳಿದ್ಲಂತೆ. ಯಾಕಂದ್ರೆ ಅಮೀರ್ ಖಾನ್ ಜೊತೆಗಿನ ಮೇಳ ಸಿನಿಮಾ ಹಿಟ್ ಆಗಿತ್ತೆಂಬ ನಂಬಿಕೆ ಟ್ವಿಂಕಲ್ ಗಿತ್ತು. 
 

ಆದರೆ ಅಕ್ಷಯ್ ಕುಮಾರ್ ರ ಅದೃಷ್ಟವೇನೋ ಎನ್ನುವಂತೆ, ಮೇಳ ಸಿನಿಮಾ ಫ್ಲಾಪ್ ಆಯ್ತು. ಟ್ವಿಂಕಲ್ ಖನ್ನಾ ಬೆಟ್ ನಲ್ಲಿ ಸೋತು ಹೋಗಿದ್ದರು. ಕೊನೆಗೆ ಈ ಜೋಡಿ 2001ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು. 
 

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಈಗ ಮದ್ವೆಯಾಗಿ 23 ವರ್ಷಗಳ ಸುಂದರ ದಾಂಪತ್ಯ ಜೀವನವನ್ನ (married life) ಕಳೆದಿದ್ದಾರೆ. ಇಬ್ಬರಿಗೆ ಆರವ್ ಮತ್ತು ನಿತಾರ ಎನ್ನುವ ಇಬ್ಬರು ಮಕ್ಕಳು ಕೂಡ ಇದ್ದಾರೆ. 
 

ಟ್ವಿಂಕಲ್ ಖನ್ನಾ ತಮ್ಮ ಸಿನಿಮಾ ಕರಿಯರ್ ಅನ್ನು ಮೊಟಕುಗೊಳಿಸಿ, ಸಂಸಾರದಲ್ಲಿ ಬ್ಯುಸಿಯಾಗಿದ್ದು, ಸದ್ಯಕ್ಕೆ ಲೇಖಕಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಅಕ್ಷಯ್ ಕುಮಾರ್ ಇವತ್ತಿಗೂ ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರಾಗಿ ಮೆರೆಯುತ್ತಾರೆ. ಇಬ್ಬರು ಒಬ್ಬರಿಗೊಬ್ಬರು ಬೆಂಬಲ ನೀಡುತ್ತಾ ಉತ್ತಮ ರೀತಿಯಲ್ಲಿ ಜೀವನ ಸಾಗಿಸ್ತಿದ್ದಾರೆ ಈ ಜೋಡಿ. 
 

Latest Videos

click me!