ಮಹೇಶ್ ಬಾಬು ನಿರ್ಮಾಣದ ಮೇಜರ್ ಚಿತ್ರದಲ್ಲಿ ಶೋಭಿತಾ ನಟಿಸಿದ್ದಾರೆ. ಹೀಗಾಗಿ, ಸಂದರ್ಶನವೊಂದರಲ್ಲಿ ಮಹೇಶ್ ಬಾಬು, ಅಡಿವಿ ಶೇಶ್ ಮತ್ತು ಶೋಭಿತಾ ಎಲ್ಲರೂ ಒಂದೇ ಸ್ಥಳದಲ್ಲಿ ಕುಳಿತು ಮೇಜರ್ ಚಿತ್ರದ ಬಗ್ಗೆ ಚರ್ಚಿಸುತ್ತಿದ್ದಾರೆ. ಎಲ್ಲರೂ ಮಾತನಾಡುತ್ತಿರುವಾಗಲೇ ಶೋಭಿತಾ ಇಂಗ್ಲೀಷಿನಲ್ಲಿ ಮಾತನಾಡಲು ಮುಂದಾದರು. ಕೂಡಲೇ ತೆಲುಗಿನಲ್ಲಿ ಮಾತನಾಡಿ ಎಂದು ಮಹೇಶ್ ಬಾಬು ವ್ಯಂಗ್ಯವಾಡಿದ್ದಾರೆ. ಇದನ್ನು ಕೇಳಿ ಅಲ್ಲಿದ್ದವರೆಲ್ಲ ನಕ್ಕರು.