ಗ್ಲಾಮರಸ್ & ಮಾಡ್ರನ್ ಲುಕ್‌ನಲ್ಲಿ ಶ್ರೀಲೀಲಾ ಸಖತ್ ಪೋಸ್: ಮುತ್ತು ಕೊಟ್ಟು ನಾಲಿಗೆ ತೋರಿಸಿದ ಕಿಸ್ ಬ್ಯೂಟಿ!

First Published | Aug 10, 2024, 10:22 PM IST

ಕಿಸ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಬೆಂಗಳೂರು ಬೆಡಗಿ ಶ್ರೀಲೀಲಾ ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಯಾವುದೇ ಸಿನಿಮಾಗಳನ್ನು ಒಪ್ಪೊಕೊಂಡಿಲ್ಲ. ಆದರೆ ಟಾಲಿವುಡ್ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಹೊಸ ಫೋಟೋಶೂಟ್‌ನಲ್ಲಿ ಕಂಗೊಳಿಸಿದ್ದಾರೆ.

ಶ್ರೀಲೀಲಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಗ್ಲಾಮರಸ್ & ಮಾಡ್ರನ್ ಡ್ರೆಸ್‌ನಲ್ಲಿ ಮುತ್ತು ಕೊಟ್ಟು, ನಾಲಿಗೆ ತೋರಿಸಿರುವ ರೀತಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

Tap to resize

ಶ್ರೀಲೀಲಾ ಹಂಚಿಕೊಂಡಿರುವ ಫೋಟೋಗಳ ಜೊತೆಗೆ ಒಂದು ಲೈನ್ ಬರೆದಿದ್ದಾರೆ. Not a poser but I’d like to impose this picture on you.  ನಾನು ಪೋಸರ್ ಅಲ್ಲ. ಆದರೆ, ನಿಮ್ಮ ಮೇಲೆ ಈ ಪೋಸ್ ಅನ್ನ ಹೇರಲು ಇಷ್ಟಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಶ್ರೀಲೀಲಾ ಫೋಟೋಸ್ ನೋಡಿದ ನೆಟ್ಟಿಗರು, ಲೈಕ್ಸ್ ಹಾಗೂ ಕಮೆಂಟ್‌ಗಳ ಸುರಿಮಳೆಯನ್ನೆಗೈದಿದ್ದಾರೆ. ನೀವು ಉತ್ತಮವಾದ ಪೋಸರ್, ಸೋ ಬ್ಯೂಟಿಫುಲ್, ನೀವು ಇರುವ ಜಾಗ ಯಾವುದು ಅಂತೆಲ್ಲಾ ಕೇಳಿದ್ದಾರೆ. ಜೊತೆಗೆ ರೆಡ್ ಹಾರ್ಟ್ ಎಮೋಜಿಯನ್ನು ಕಮೆಂಟಿಸಿದ್ದಾರೆ.

ಶ್ರೀಲೀಲಾಗೆ ಟಾಲಿವುಡ್‌ನಲ್ಲಿ ರಾಬಿನ್‌ಹುಡ್ ಚಿತ್ರ ಇದೆ.  ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಜೊತೆಗೆ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲೂ ಶ್ರೀಲೀಲಾ ನಟಿಸಿದ್ದಾರೆ. ಹಾಗೂ RT75 ಅನ್ನೋ ಸಿನಿಮಾ ಕೂಡ ಅವರ ಕೈಯಲ್ಲಿ ಇದೆ. 

'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ಕಿಸ್ ನಟಿ ಶ್ರೀಲೀಲಾ ಟಾಲಿವುಡ್ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ರವಿತೇಜಾ, ಮಹೇಶ್ ಬಾಬು, ಬಾಲಕೃಷ್ಣರಂತಹ ದೊಡ್ಡ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು.

ಚಿಕ್ಕ ವಯಸ್ಸಿನಿಂದಲೇ ಭರತನಾಟ್ಯ ಕಲಿತ ಶ್ರೀಲೀಲಾ ಕೆಲವು ವೇದಿಕೆಗಳಲ್ಲಿ ಪ್ರದರ್ಶನ ನೀಡಿದ್ದರು. ಸ್ಯಾಂಡಲ್‌ವುಡ್‌ನಲ್ಲಿ ಮೊದಲು 'ಕಿಸ್' ಚಿತ್ರದಲ್ಲಿ ನಟಿಸಿದ್ದರು. ಎ.ಪಿ.ಅರ್ಜುನ್ ಸಿನಿಮಾವನ್ನು ನಿರ್ದೇಶಿಸಿದ್ದರು.

Latest Videos

click me!