ಚೆನ್ನೈನಲ್ಲಿರುವ 150 ಕೋಟಿಯ ಐಷಾರಾಮಿ ಬಂಗಲೆ
ಧನುಷ್ ಅವರ ಆಸ್ತಿಯಲ್ಲಿ ಪ್ರಮುಖವಾಗಿ ಗಮನ ಸೆಳೆಯುವುದು ಚೆನ್ನೈನಲ್ಲಿ ಅವರು ನಿರ್ಮಿಸಿರುವ ಅರಮನೆಯಂತಹ ಮನೆ. ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮನೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಸದಾ ಸಿಂಪ್ಲಿಸಿಟಿಗೆ ಒತ್ತು ನೀಡುವ ಧನುಷ್, ತಮ್ಮ ವೈಯಕ್ತಿಕ ಜೀವನದಲ್ಲಿ ರಾಜವೈಭೋಗವನ್ನು ಅನುಭವಿಸುತ್ತಿದ್ದಾರೆ.
ಕಾರುಗಳ ಕ್ರೇಜ್: ಗ್ಯಾರೇಜ್‌ನಲ್ಲಿವೆ ದುಬಾರಿ ಗಾಡಿಗಳು!
ಧನುಷ್ ಅವರಿಗೆ ವೇಗದ ಮತ್ತು ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣ. ಅವರ ಕಾರ್ ಕಲೆಕ್ಷನ್ ನೋಡಿದರೆ ಯಾರೂ ಕೂಡ ಬೆರಗಾಗುವುದು ಖಚಿತ. ಅವರ ಬಳಿ ಅತ್ಯಂತ ದುಬಾರಿ 'ರೋಲ್ಸ್ ರಾಯ್ಸ್ ಘೋಸ್ಟ್' (Rolls-Royce Ghost) ಕಾರಿದೆ. ಇದರ ಜೊತೆಗೆ ಬೆಂಟ್ಲಿ (Bentley), ಜಾಗ್ವಾರ್ (Jaguar) ಮತ್ತು ಆಡಿ (Audi) ನಂತಹ ಬ್ರ್ಯಾಂಡ್‌ಗಳ ಲಕ್ಸುರಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಅಂದವಾಗಿ ಸಾಲುಗಟ್ಟಿ ನಿಂತಿವೆ. ಕಾರುಗಳ ಒಡೆತನದಲ್ಲಿ ಕೂಡ ನಟ ಧನುಷ್ ಭಾರೀ ಶ್ರೀಮಂತರು ಎನ್ನಬಹುದು.