Sai Pallavi: ನಟಿ ಸಾಯಿ ಪಲ್ಲವಿಯಿಂದ ಹೆಣ್ಣು ಮಕ್ಕಳು ಕಲಿಯಬೇಕಾದ ಜೀವನ ಪಾಠಗಳು

Published : Apr 25, 2025, 11:43 AM ISTUpdated : Apr 25, 2025, 11:58 AM IST

ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ಸಾಯಿ ಪಲ್ಲವಿಯಿಂದ ನೀವು ಕಲಿಯಬೇಕಾದ ಜೀವನ ಪಾಠ ಹಲವು. ಇಲ್ಲಿದೆ ನೋಡಿ ಒಂದಷ್ಟು ಲೈಫ್ ಲೆಸನ್.   

PREV
18
Sai Pallavi: ನಟಿ ಸಾಯಿ ಪಲ್ಲವಿಯಿಂದ ಹೆಣ್ಣು ಮಕ್ಕಳು ಕಲಿಯಬೇಕಾದ ಜೀವನ ಪಾಠಗಳು

ಮಲಯಾಲಂ ಸಿನಿಮಾ (Malayalam Films) ಪ್ರೇಮಂನಿಂದ ಆರಂಭಿಸಿ, ತಮಿಳು, ತೆಲುಗು, ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ ನಟಿ ಸಾಯಿ ಪಲ್ಲವಿ. ಈ ನ್ಯಾಚುರಲ್ ಬ್ಯೂಟಿಗೆ ಅದೆಷ್ಟೋ ಫ್ಯಾನ್ ಫಾಲೋವರ್ಸ್ ಇದ್ದಾರೆ. ಈ ಸಿಂಪಲ್ ಬ್ಯೂಟಿಯಿಂದ ಪ್ರತಿಯೊಬ್ಬ ಹುಡುಗಿಯರು ಕಲಿಯಬೇಕಾದ ಲೈಫ್ ಲೆಸನ್ ಏನು ನೋಡೋಣ. 
 

28

ನೀನು ನೀವಾಗಿರಿ
ಸಾಯಿ ಪಲ್ಲವಿ (Sai Pallavi) ತಮ್ಮ ನ್ಯಾಚುರಲ್ ಯೂಟಿ ಹಾಗೂ ಸಿನಿಮಾ ಪಾತ್ರಗಳ ಆಯ್ಕೆಯಿಂದಾಗಿ ಜನಪ್ರಿಯತೆ ಪಡೆದಿದ್ದಾರೆ. ಇವರು ಯಾವಾಗ್ಲೂ ತಾವು ಹೇಗಿದ್ದಾರೋ ಹಾಗೆ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ.  ಇವರು ಇಂಡಷ್ಟ್ರಿಗೆ ಫಿಟ್ ಆಗೋದಕ್ಕಿಂತ ಹೆಚ್ಚಾಗಿ ತಮ್ಮ ಮೌಲ್ಯಗಳಿಗೆ ಆದ್ಯತೆ ನೀಡುತ್ತಾರೆ. 

38

ವಿದ್ಯಾಭ್ಯಾಸವೇ ಶಕ್ತಿ
ಸ್ಟಾರ್ ಆಗಿದ್ದರೂ ಸಹ ಸಾಯಿ ಪಲ್ಲವಿ, ವಿಧ್ಯಾಭ್ಯಾಸವನ್ನು ಅರ್ಧದಲ್ಲಿ ಬಿಡಲಿಲ್ಲ. ಇವರು ಎಂಬಿಬಿಎಸ್ (MBBS) ಮಾಡಿದ್ದಾರೆ. ನಟಿಯಾಗಿದ್ದರೂ ವಿದ್ಯಾಭ್ಯಾಸ ಪೂರ್ಣಗೊಳಿಸಿರುವುದನ್ನು ನೋಡಿದ್ರೆ, ಇವರಿಗೆ ಅಕಾಡೆಮಿಕ್ ಜೊತೆಗೆ ಪ್ಯಾಶನ್ ಫಾಲೋ ಮಾಡೋದು ಕೂಡ ಇಷ್ಟ ಅನ್ನೋದು ತಿಳಿದು ಬರುತ್ತೆ. 

48

ತಾವು ನಡೆದು ಬಂದ ಹಾದಿ ಮರೆತಿಲ್ಲ
ಸಾಯಿ ಪಲ್ಲವಿ ದೊಡ್ಡ ಸ್ಟಾರ್ ಆಗಿದ್ರೂ ಸಹ ಅವರು ತಾವು ನಡೆದು ಬಂದ ಹಾದಿ, ತಮ್ಮ ಪುಟ್ಟ ಗ್ರಾಮ ಯಾವುದನ್ನೂ ಸಹ ಮರೆತಿಲ್ಲ. ತಮ್ಮ ವರ್ಕ್ ಎಥಿಕ್ ಹಾಗೂ ಬೆಳವಣಿಗೆಗಾಗಿ ಅವರು ಯಾವಾಗಲೂ ತಾವು ನಡೆದು ಬಂದ ಹಾದಿಯನ್ನು ಸ್ಮರಿಸುತ್ತಿರುತ್ತಾರೆ.

58

ಪ್ಯಾಷನ್ ಫಾಲೋ ಮಾಡಿದ ನಟಿ
ಸಾಯಿ ಪಲ್ಲವಿ ಅತ್ಯುತ್ತಮ ಡ್ಯಾನ್ಸರ್ ಹಾಗೂ ನಟಿ. ಇವರು ತಮ್ಮ ಈ ಅಭ್ಯಾಸಗಳನ್ನು ಶಾಲೆ, ಕಾಲೇಜು ದಿನಗಳು ಹಾಗೂ ರಿಯಾಲಿಟಿ ಶೋಗಳಿಂದಲೇ (reality show) ಮುಂದುವರೆಸಿಕೊಂಡು ಬಂದಿದ್ದಾರೆ. ಅವರು ತಮಗೆ ಸಿಕ್ಕ ಯಾವುದೇ ಅವಕಾಶವನ್ನು ಸಹ ವ್ಯರ್ಥವಾಗೋದಕ್ಕೆ ಬಿಟ್ಟೇ ಇಲ್ಲ. 

68

ಕಾನ್ಫಿಡೆನ್ಸ್ ನಾವು ಬೆಳೆಸಿಕೊಳ್ಳಬೇಕು, ಹುಟ್ಟುವಾಗಲೇ ಇರಲ್ಲ
ವಿಶ್ವಾಸ ಅನ್ನೋದು ಸಾಯಿ ಪಲ್ಲವಿ ಒಂದೇ ಸಲ ಪಡೆದುಕೊಂಡವರಲ್ಲ, ಆರಂಭದಲ್ಲಿ ಸ್ಟೇಜ್ ಫಿಯರ್ ಗಳಿಂದಲೇ ಒಂದೊಂದೇ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಇಂದು ಏನೇ ಬಂದರೂ ಎದುರಿಸಲು ಸಿದ್ಧರು.

78

ಅರ್ಥಪೂರ್ಣ ಪಾತ್ರಗಳು
ಸಾಯಿ ಪಲ್ಲವಿ ಆಯ್ಕೆ ಮಾಡುವ ಪಾತ್ರಗಳಲ್ಲಿ ಎಲ್ಲವೂ ಅರ್ಥಪೂರ್ಣವಾಗಿರುವಂತದ್ದೇ, ಅದು ಪ್ರೇಮಂನ ಮಲರ್ ಇರಲಿ, ಗಾರ್ಗಿ, ರಾಮಾಯಣದ ಸೀತೆ ಹೀಗೆ ಸಾಯಿ ಪಲ್ಲವಿ ನಟಿಸಿದ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ. 

88

ಸೋಲನ್ನು ಮೆಟ್ಟಿ ನಿಂತು ಗೆಲುವು ಸಾಧಿಸಿದರು
ಸಾಯಿ ಪಲ್ಲವಿ ಜನಪ್ರಿಯತೆ ಪಡೆದ ಮೇಲೂ ನಟಿಸಿದ ಎಲ್ಲಾ ಸಿನಿಮಾಗಳು ಹಿಟ್ ಆಗಿರಲಿಲ್ಲ, ಕೆಲವು ಸಿನಿಮಾಗಳಲ್ಲಿ ಸೋಲನ್ನು ಅನುಭವಿಸಿದರು. ಆದರೆ ಆತ್ಮವಿಶ್ವಾಸ ಮಾತ್ರ ಕುಂದಲಿಲ್ಲ. ಸೋಲಲ್ಲಿ ಅಳದೆ ದೃಢ ವಿಶ್ವಾಸ ಹಾಗೂ ಕಠಿಣ ಪರಿಶ್ರಮದಿಂದ ಮುಂದುವರೆದರು ಸಾಯಿ ಪಲ್ಲವಿ,ಇದೇ ಆತ್ಮವಿಶ್ವಾಸ ಪ್ರತಿ ಹುಡುಗಿಯರಲ್ಲೂ ಇರಬೇಕು

Read more Photos on
click me!

Recommended Stories