ಸಿನೆಮಾಗಳ ಹೀನಾಯ ಸೋಲು, ಮೋಸದ ಮದುವೆ! ಎಲ್ಲಾ ಬಿಟ್ಟು ಯಶಸ್ವಿ ಉದ್ಯಮಿಯಾದ ಸ್ಟಾರ್ ನಟ!

Published : Apr 25, 2025, 10:47 AM ISTUpdated : Apr 25, 2025, 10:53 AM IST

ತಮಿಳು ಚಿತ್ರರಂಗದ ನಟ ಪ್ರಶಾಂತ್ ತ್ಯಾಗರಾಜನ್ ಈಗ ಭಾರತದ ಅತಿದೊಡ್ಡ ಆಭರಣ ಶಾಪಿಂಗ್ ತಾಣವಾದ ಪ್ರಶಾಂತ್ ರಿಯಲ್ ಗೋಲ್ಡ್ ಟವರ್‌ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಚಲನಚಿತ್ರಗಳಿಂದ ವ್ಯಾಪಾರಕ್ಕೆ ಪರಿವರ್ತನೆಗೊಂಡ ಅವರ ಯಶೋಗಾಥೆ ಗಮನಾರ್ಹ.

PREV
15
ಸಿನೆಮಾಗಳ  ಹೀನಾಯ ಸೋಲು, ಮೋಸದ ಮದುವೆ! ಎಲ್ಲಾ ಬಿಟ್ಟು ಯಶಸ್ವಿ ಉದ್ಯಮಿಯಾದ ಸ್ಟಾರ್ ನಟ!

ತಮಿಳು ಚಿತ್ರರಂಗದಲ್ಲಿ "ಜೀನ್ಸ್" (1998) ಸೇರಿದಂತೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳಲ್ಲಿ ನಟನೆಯ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದ ನಟ ಪ್ರಶಾಂತ್ ತ್ಯಾಗರಾಜನ್, ಇಂದು ಭಾರತದ ಅತಿದೊಡ್ಡ ಆಭರಣ ಶಾಪಿಂಗ್ ತಾಣವೆನಿಸಿರುವ ಪ್ರಶಾಂತ್ ರಿಯಲ್ ಗೋಲ್ಡ್ ಟವರ್‌ನ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ ಎಂಬುದನ್ನು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂನಲ್ಲಿ ಹೈಲೈಟ್ ಮಾಡಲಾಗಿದೆ. ಇದು ಅವರು ಆಧುನಿಕ ಮಾರುಕಟ್ಟೆಯಲ್ಲಿ ಯಶಸ್ವಿ ವ್ಯವಹಾರಗಳನ್ನು ಹೇಗೆ ರೂಪಿಸುತ್ತಾರೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

25

ಪ್ರಶಾಂತ್ ಅವರ ಚಲನಚಿತ್ರ ಜೀವನದ ಉಜ್ವಲ ಆರಂಭ ತಮಿಳು ಚಿತ್ರರಂಗದಲ್ಲಾಗಿದ್ದು, ಅವರು ಐಶ್ವರ್ಯಾ ರೈ ಅವರೊಂದಿಗೆ "ಜೀನ್ಸ್" ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಟನೆಯಿಂದ ದೂರ ಉಳಿದು ಅವರು ಹೊಸ ಸವಾಲಾಗಿ ವ್ಯವಹಾರದ ಜಗತ್ತನ್ನು ಆಯ್ದುಕೊಂಡರು. ಪ್ರಶಾಂತ್ ರಿಯಲ್ ಗೋಲ್ಡ್ ಟವರ್‌ನ ರೂಪದಲ್ಲಿ ಅವರು ದೇಶದ ಅತಿದೊಡ್ಡ ಆಭರಣ ಶಾಪಿಂಗ್  ಅನ್ನು ಸ್ಥಾಪಿಸಿದರು. ಇದು ನಟನ ಯಶಸ್ವಿ ವ್ಯವಹಾರಗಳನ್ನು ನಿರ್ಮಿಸುವ ಅವರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. 

35

ಪ್ರಶಾಂತ್ ರಿಯಲ್ ಗೋಲ್ಡ್ ಟವರ್:
ಭಾರತದ ಅತಿದೊಡ್ಡ ಆಭರಣ ಶಾಪಿಂಗ್ ತಾಣ ಪ್ರಶಾಂತ್ ರಿಯಲ್ ಗೋಲ್ಡ್ ಟವರ್ ಚೆನ್ನೈನ ಕೇಂದ್ರದಲ್ಲಿ 10 ಅಂತಸ್ತಿನ ಮಾಲ್, 1.7 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿದ್ದು, ಪ್ರತಿಷ್ಠಿತ ಆಭರಣ ಬ್ರ್ಯಾಂಡ್‌ಗಳಿಗೆ ಆಶ್ರಯವಾಗಿದೆ. ಫುಡ್ ಕೋರ್ಟ್, ಎಟಿಎಂಗಳು, ಮತ್ತು ವಿಶಾಲವಾದ ಪಾರ್ಕಿಂಗ್ ಸೌಲಭ್ಯವನ್ನೂ ಒಳಗೊಂಡಿದೆ. ಈ ಮಾಲ್‌ನ ನಿರ್ವಹಣೆಯಲ್ಲಿ ಪ್ರಶಾಂತ್ ಅವರ ಸಹೋದರಿ, ಖ್ಯಾತ ರತ್ನಶಾಸ್ತ್ರಜ್ಞೆ ಮತ್ತು ಆಭರಣ ವಿನ್ಯಾಸಕಿಯಾಗಿರುವ ಪ್ರೀತಿ ತ್ಯಾಗರಾಜನ್ ಪ್ರಮುಖ ಪಾತ್ರವಹಿಸಿದ್ದಾರೆ.
 

45

ಪ್ರಶಾಂತ್  ಒಬ್ಬ ಭಾರತೀಯ ನಟ, ಉದ್ಯಮಿ, ಹಿನ್ನೆಲೆ ಗಾಯಕ ಮತ್ತು ಚಲನಚಿತ್ರ ನಿರ್ಮಾಪಕ, ಮುಖ್ಯವಾಗಿ ತಮಿಳು ಚಿತ್ರರಂಗದಲ್ಲಿ  ಹೆಸರುವಾಸಿಯಾಗಿದ್ದಾರೆ . ತಮಿಳು ಚಲನಚಿತ್ರಗಳಲ್ಲದೆ, ಅವರು ಕೆಲವು ತೆಲುಗು , ಹಿಂದಿ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 1990 ರ ದಶಕದ ಉತ್ತರಾರ್ಧದಲ್ಲಿ ಅವರ ವೃತ್ತಿಜೀವನದ ಉತ್ತುಂಗದಲ್ಲಿತ್ತು. ಆಗ ದಕ್ಷಿಣ ಭಾರತದ ಜನಪ್ರಿಯ ನಟರಲ್ಲಿ ಒಬ್ಬರಾಗಿದ್ದರು . ನಟ-ನಿರ್ದೇಶಕ ತ್ಯಾಗರಾಜನ್ ಅವರ ಮಗ. 17 ನೇ ವಯಸ್ಸಿನಲ್ಲಿ ತಮಿಳು ಚಲನಚಿತ್ರ ವೈಗಾಸಿ ಪೊರಂಥಾಚು (1990) ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆದರೆ  1998ರಲ್ಲಿ ಬಿಡುಗಡೆಯಾದ ಜೀನ್ಸ್  ಹೆಸರು ತಂದುಕೊಟ್ಟಿತು. 2005ರ ಬಳಿಕ ಅವರಿಗೆ ಯಾವುದೇ ಯಶಸ್ಸು ಸಿಗದ ಕಾರಣ ಚಿತ್ರರಂಗದಿಂದ ದೂರಾದರು. ಸತತ ಸೋಲಿನಿಂದ ಅವರು ಅಭರಣ ವ್ಯಾಪಾರದಲ್ಲಿ ತೊಡಗಿಕೊಂಡರು. ದೀರ್ಘಕಾಲದ ವೃತ್ತಿಜೀವನದ ಹಿನ್ನಡೆಯ ನಂತರ ಬರೋಬ್ಬರಿ 20 ವರ್ಷಗಳ ನಂತರ ಅಂಧಗನ್ (2024) ಮತ್ತು ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (2024) ಚಿತ್ರಗಳ ಮುಖಾಂತರ ಮತ್ತೆ ಪುನರಾಗಮನ ಮಾಡಿದರು.

55

ತಮಿಳು ಚಲನಚಿತ್ರಗಳಲ್ಲಿ ನಟ ಮತ್ತು ನಿರ್ದೇಶಕರಾದ ತ್ಯಾಗರಾಜನ್ ಅವರ ಮಗನಾದ ಪ್ರಶಾಂತ್ ಗೆ ಕಲಾ ಕುಟುಂಬದ ಹಿನ್ನೆಲೆ ಇತ್ತು. ಅವರ ತಾಯಿಯ ಅಜ್ಜ ಪೆಕೇಟಿ ಶಿವರಾಮ್ ತೆಲುಗು ಮತ್ತು ಕನ್ನಡ ಚಲನಚಿತ್ರಗಳ ನಟ ಮತ್ತು ನಿರ್ದೇಶಕರಾಗಿದ್ದರು. ಅವರ ತಾಯಿಯ ಸೋದರಸಂಬಂಧಿ ಸಹ ಚಲನಚಿತ್ರ ನಟರಾಗಿದ್ದಾರೆ ಅವರೇ ನಟ ವಿಕ್ರಮ್. ಪ್ರಶಾಂತ್ ಪಾಣಗಲ್ ಪಾರ್ಕ್‌ನಲ್ಲಿ ಬಹುಮಹಡಿ ಆಭರಣ ಮಾರುಕಟ್ಟೆಯನ್ನು ಹೊಂದಿದ್ದಾರೆ . ಅವರು ತರಬೇತಿ ಪಡೆದ ಪಿಯಾನೋ ವಾದಕರೂ ಆಗಿದ್ದಾರೆ. 2005 ರಲ್ಲಿ ವಿ.ಡಿ. ಗ್ರಹಲಕ್ಷ್ಮಿ ಎಂಬಾಕೆಯ ಜೊತೆಗೆ ಮದುವೆ ಆಯ್ತು. 2006 ರಲ್ಲಿ ಒಬ್ಬ ಮಗ ಜನಿಸಿದ.ಮೂರು ವರ್ಷಗಳ ನಂತರ ಪತ್ನಿಗೆ ಈಗಾಗಲೇ ಮದುವೆಯಾಗಿತ್ತು. ಅದನ್ನು ತನ್ನಿಂದ ಮುಚ್ಚಿಡಲಾಗಿತ್ತು ಎಂಬುದು  ತಿಳಿಯಿತು. ಬಳಿಕ 2009ರಲ್ಲಿ ವಿಚ್ಚೇಧನ ಪಡೆದರು.

Read more Photos on
click me!

Recommended Stories