ಈಗ ಜನ ಸುತ್ತಲಿನ ಆಗುಹೋಗುಗಳನ್ನು ಗಮನಿಸುವಲ್ಲಿ ಹಿಂದೆಂದಿಗಿಂತಲೂ ಶಾರ್ಪ್ ಆಗಿದ್ದಾರೆ. ಅಷ್ಟೇ ಅಲ್ಲ, ಅವಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಲೂ ವೇದಿಕೆ ಕಂಡುಕೊಳ್ಳುತ್ತಿದ್ದಾರೆ. ಇದಕ್ಕೊಂದು ಉತ್ತಮ ಉದಾಹರಣೆ ಸಡಕ್ 2 ಚಿತ್ರದ ಟ್ರೇಲರ್‌ಗೆ ಸಿಕ್ಕ ಡಿಸ್‌ಲೈಕ್ಸ್. ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ನೆಪೋಟಿಸಂ ವಿರುದ್ಧ ಎದ್ದಿರುವ ಗಲಾಟೆಯ ಬಿಸಿ ಸಡಕ್ 2ಗೆ ತಗುಲಿದೆ. ಇದೀಗ ಈ ಚಿತ್ರದ ಟ್ರೇಲರ್ ಅತಿ ಹೆಚ್ಚು ಡಿಸ್‌ಲೈಕ್‌ಗೊಳಗಾದ ಟ್ರೇಲರ್ ಎಂಬ ಕಾರಣಕ್ಕೆ ಸುದ್ದಿಯಲ್ಲಿದೆ.
ಟ್ರೇಲರ್ ಹರಿಬಿಟ್ಟ ಕೆಲವೇ ಗಂಟೆಯಲ್ಲಿ 40 ಸಾವಿರ ಲೈಕ್ಸ್ ಬಂದರೆ, 9 ಲಕ್ಷ ಡಿಸ್‌ಲೈಕ್ಸ್ ಬಂದಿವೆ. ಇದು ಯೂಟ್ಯೂಬ್ ಇತಿಹಾಸದಲ್ಲೇ ಅತಿ ಹೆಚ್ಚು ಡಿಸ್‌ಲೈಕ್ ಪಡೆದ ಟ್ರೇಲರ್ ಎಂಬ ಕುಖ್ಯಾತಿಗೆ ಗುರಿಯಾಗಿದೆ.
ಟ್ರೇಲರ್ ಹರಿಬಿಟ್ಟ ಕೆಲವೇ ಗಂಟೆಯಲ್ಲಿ 40 ಸಾವಿರ ಲೈಕ್ಸ್ ಬಂದರೆ, 9 ಲಕ್ಷ ಡಿಸ್‌ಲೈಕ್ಸ್ ಬಂದಿವೆ. ಇದು ಯೂಟ್ಯೂಬ್ ಇತಿಹಾಸದಲ್ಲೇ ಅತಿ ಹೆಚ್ಚು ಡಿಸ್‌ಲೈಕ್ ಪಡೆದ ಟ್ರೇಲರ್ ಎಂಬ ಕುಖ್ಯಾತಿಗೆ ಗುರಿಯಾಗಿದೆ.
78
ಈ ರೀತಿಯ ನೆಗೆಟಿವ್ ವಿಷಯಕ್ಕಾಗಿ ಸಡಕ್ 2 ಸುದ್ದಿಯಾಗುತ್ತಿರುವುದಕ್ಕೆ ನೆಟ್ಟಿಗರು ಖುಷಿಯಾಗಿದ್ದಾರೆ. ಸುಶಾಂತ್ ಅಭಿನಯದ ಕಡೆಯ ಚಿತ್ರ ದಿಲ್ ಬೇಚಾರಾಕ್ಕೆ ಬಂದ ಲೈಕ್‌ಗಳೊಂದಿಗೆ ಈ ಚಿತ್ರದ ಲೈಕ್‌ಗಳನ್ನು ಹೋಲಿಸಿ ಮಾತನಾಡುತ್ತಿದ್ದಾರೆ.
ಈ ರೀತಿಯ ನೆಗೆಟಿವ್ ವಿಷಯಕ್ಕಾಗಿ ಸಡಕ್ 2 ಸುದ್ದಿಯಾಗುತ್ತಿರುವುದಕ್ಕೆ ನೆಟ್ಟಿಗರು ಖುಷಿಯಾಗಿದ್ದಾರೆ. ಸುಶಾಂತ್ ಅಭಿನಯದ ಕಡೆಯ ಚಿತ್ರ ದಿಲ್ ಬೇಚಾರಾಕ್ಕೆ ಬಂದ ಲೈಕ್‌ಗಳೊಂದಿಗೆ ಈ ಚಿತ್ರದ ಲೈಕ್‌ಗಳನ್ನು ಹೋಲಿಸಿ ಮಾತನಾಡುತ್ತಿದ್ದಾರೆ.
88
ಬಾಲಿವುಡ್‌ನಲ್ಲಿ ನೆಪೋಟಿಸಂ ನಡೆಸುತ್ತಿರುವವರಿಗೆ ಸಾಮಾನ್ಯ ಜನರ ಶಕ್ತಿ ಬಗ್ಗೆ ಅನುಮಾನ ಪಡಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಈ ಡಿಸ್‌ಲೈಕ ಅನ್ನು ಸುಶಾಂತ್ ಸಾವಿನ ವಿರುದ್ಧದ ಆಕ್ರೋಶವಾಗಿ ಜನ ಹೊರ ಹಾಕುತ್ತಿದ್ದಾರೆ.
ಬಾಲಿವುಡ್‌ನಲ್ಲಿ ನೆಪೋಟಿಸಂ ನಡೆಸುತ್ತಿರುವವರಿಗೆ ಸಾಮಾನ್ಯ ಜನರ ಶಕ್ತಿ ಬಗ್ಗೆ ಅನುಮಾನ ಪಡಬೇಡಿ ಎಂದು ಎಚ್ಚರಿಸುತ್ತಿದ್ದಾರೆ. ಈ ಡಿಸ್‌ಲೈಕ ಅನ್ನು ಸುಶಾಂತ್ ಸಾವಿನ ವಿರುದ್ಧದ ಆಕ್ರೋಶವಾಗಿ ಜನ ಹೊರ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.