ತಪ್ಪಿಸಿಕೊಳ್ಳುವ ಮನಸ್ಥಿತಿ: ನಿಜ ಜೀವನದ ಕಷ್ಟಗಳನ್ನು ಯಾರಿಗೂ ಇಷ್ಟವಿಲ್ಲ. ಕಠಿಣ ಪರಿಸ್ಥಿತಿ, ಸವಾಲುಗಳಿಂದ ಮನಸ್ಸನ್ನು ಹಗುರಗೊಳಿಸಲು ಟಿವಿ, ಮೊಬೈಲ್ ಬಳಕೆ ಜಾಸ್ತಿ ಮಾಡ್ತಾರೆ. ಸಿನಿಮಾ, ಸೀರಿಸ್ ನೋಡೋದೂ ಅದಕ್ಕೇ. ನಿಜ ಜೀವನದಿಂದ ಸ್ವಲ್ಪ ಹೊತ್ತು ತಪ್ಪಿಸಿಕೊಳ್ಳುವುದು ಸಮಾಧಾನ ತರುತ್ತದೆ.
ಕೊರಿಯನ್ ಸೀರಿಸ್ ಅದೇ ಫೀಲಿಂಗ್ ಕೊಡುತ್ತೆ. ಬೇರೆ ಬೇರೆ ಕಲ್ಚರ್‌ಗಳು ಗೊತ್ತಾಗುತ್ತೆ. ಚಿಂತೆ ಮರೆತುಬಿಡ್ತೀರಿ. ಕಣ್ಣಿಗೆ ಹಬ್ಬದ ದೃಶ್ಯಗಳು, ಹೊಸ ಫ್ಯಾಷನ್, ಮ್ಯೂಸಿಕ್ ನಿಮ್ಮನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತೆ.