ಇನ್‌ಸ್ಟಾನಲ್ಲಿ 50, ಫೇಸ್‌ಬುಕ್‌ನಲ್ಲಿ 40 ಲಕ್ಷ ಫಾಲೋವರ್ಸ್; ಬಿಗ್‌ಬಾಸ್ ಸ್ಪರ್ಧಿಗೆ ಚುನಾವಣೆಯಲ್ಲಿ NOTAಗಿಂತ ಕಡಿಮೆ ವೋಟ್

First Published | Nov 23, 2024, 4:33 PM IST

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವರ್ಸೋವಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟ ಎಜಾಜ್ ಖಾನ್ ಸೋಲು ಕಂಡಿದ್ದಾರೆ. ಅಜಾದ್ ಸಮಾಜ ಪಕ್ಷದಿಂದ ಸ್ಪರ್ಧಿಸಿದ್ದ ಅವರು ಕೆಲವೇ  ಮತಗಳನ್ನು ಪಡೆದುಕೊಂಡು ಠೇವಣಿಯನ್ನು ಕಳೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತರೂಢ  ಮಿತ್ರಪಕ್ಷದ ಸಂಘಟನೆ ಗೆಲುವು  ಕಂಡಿದ್ದು, ಮತ್ತೊಮ್ಮೆ ಸರ್ಕಾರ ರಚನೆಗೆ ಮುಂದಾಗಿದೆ. ಮಹಾಯುತಿ ಘಟಬಂಧನ್ ಮೂರಂಕಿ ಗಡಿ ದಾಟಿ ಮುನ್ನುಗಿದೆ.

ಈ ಬಾರಿ ಮಹಾರಾಷ್ಟ್ರ ಚುನಾವಣೆಯಲ್ಲಿ ವರ್ಸೋವಾ ವಿಧಾನಸಭಾ ಕ್ಷೇತ್ರ ಭಾರೀ ಚರ್ಚೆಯಲ್ಲಿತ್ತು. ಕಾರಣ ಈ ಕ್ಷೇತ್ರದಿಂದ ನಟ ಮತ್ತು ಸ್ವತಃ ಮುಂಬೈನ ಭಾಯಿ ಎಂದು ಕರೆದುಕೊಳ್ಳುತ್ತಿದ್ದ ಎಜಾಜ್ ಖಾನ್ ಸ್ಪರ್ಧೆ ಮಾಡಿದ್ದರು.

Tap to resize

ಮಹಾರಾಷ್ಟ್ರದ ವರ್ಸೋವಾ ವಿಧಾನಸಭಾ ಕ್ಷೇತ್ರದಿಂದ ಎಜಾಜ್  ಖಾನ್ ಅವರು ನಾಗಿನಾ ಸಂಸದ ಚಂದ್ರಶೇಖರ್ ಅಜಾದ್ ಅವರ  ಅಜಾದ್ ಸಮಾಜ ಪಕ್ಷ (ಕಾಂಶಿರಾಮ್) ದಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡಿದ್ದರು.  10 ಸುತ್ತಿನ ಮತ ಎಣಿಕೆಯಲ್ಲಿ ಎಜಾಜ್ ಕೇವಲ 79 ಮತಗಳನ್ನು  ಪಡೆದುಕೊಂಡಿದ್ದಾರೆ.

2024ರ ಲೋಕಸಭಾ ಚುನವಾಣೆಯಲ್ಲಿ ಉತ್ತರ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರದಿಂದಲೂ ಎಜಾಜ್ ಖಾನ್ ಸ್ಪರ್ಧೆ ಮಾಡಿದ್ದರು. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಜಾಜ್ ಖಾನ್ ಇಲ್ಲಿಯೂ ಸೋತಿದ್ದರು. ಇದೀಗ  ವಿಧಾನಸಭಾ ಚುನಾವಣೆಯಲ್ಲಿಯೂ ಅದೃಷ್ಟ ಪರೀಕ್ಷೆಗೆ ಎಜಾಜ್ ಖಾನ್ ಮುಂದಾಗಿ ಸೋತಿದ್ದಾರೆ.

ಈ ಬಾರಿ ಅಜಾದ್ ಸಮಾಜ ಪಕ್ಷದಿಂದ ಟಿಕೆಟ್ ಪಡೆದುಕೊಂಡು ಸ್ಪರ್ಧಿಸಿದ್ದ ಎಜಾಜ್ ಕೊನೆ ಸುತ್ತಿನ ಮತ ಎಣಿಕೆಯಲ್ಲಿ 118 ಮತಗಳು ಸಿಕ್ಕಿವೆ ಎಂದು ವರದಿಯಾಗಿವೆ.  ಸಂಸದ ಚಂದ್ರಶೇಖರ್ ಅಜಾದ್ ಅವರು ವರ್ಸೋವಾ ಕ್ಷೇತ್ರದಲ್ಲಿ ಎಜಾಜ್ ಖಾನ್ ಪರವಾಗಿ ಮತಯಾಚನೆ ಮಾಡಿದ್ದರು.

ವರ್ಸೋವಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ, ನೀವು ನಮ್ಮ ಜೊತೆಯಲ್ಲಿದ್ದರೆ ನಾವು  ಗೆದ್ದೇ ಗೆಲ್ಲುತ್ತೇವೆ. ನನ್ನ ಮೇಲೆ ನಂಬಿಕೆ ಇರಿಸಿ  ಟಿಕೆಟ್ ನೀಡಿರುವುದಕ್ಕೆ ಚಂದ್ರಶೇಖರ್ ಅಜಾದ್ ಸೋದರನಿಗೆ ಧನ್ಯವಾದಗಳು. ಇಲ್ಲಿಯವರೆಗೆ ಏಕಾಂಗಿಯಾಗಿ ಹೋರಾಡುತ್ತಿದ್ದೆ. ಮೊದಲ ಬಾರಿಗೆ ಒಬ್ಬರ ಕೈಯನ್ನು ಹಿಡಿದಿದ್ದೇನೆ. ಈ ಸತ್ಯದ ಹೋರಾಟದಲ್ಲಿ ಗೆಲುವು ಸಿಗುತ್ತೆ ಎಂಬ ವಿಶ್ವಾಸ ಹೊಂದಿದ್ದೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ಎಜಾಜ್ ಖಾನ್ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿಯೂ ಸ್ಪರ್ಧಿಸಿದ್ದರು. ಎಜಾಜ್ ಖಾನ್ ಇನ್‌ಸ್ಟಾಗ್ರಾಂನಲ್ಲಿ 56 ಲಕ್ಷ ಮತ್ತು ಫೇಸ್‌ಬುಕ್‌ನಲ್ಲಿ 41 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಎಜಾಜ್ ಖಾನ್ ಪ್ರತಿ ಪೋಸ್ಟ್‌ಗೂ ಲಕ್ಷಕ್ಕೂ ಅಧಿಕ ಲೈಕ್ಸ್ ಬರುತ್ತವೆ.

Latest Videos

click me!