ಬಾಲಿವುಡ್ ನಟಿ ಸನ್ನಿ ಲಿಯೋನ್ ಫ್ಯಾಮಿಲಿ ಜೊತೆ ಕೇರಳದಲ್ಲಿ ಹಾಲಿಡೇಸ್ ಎಂಜಾಯ್ ಮಾಡಿದ್ದಾರೆ. ಫ್ಯಾಮಿಲಿ ಜೊತೆ ಪೂವರ್ನ ರೆಸಾರ್ಟ್ನಲ್ಲಿ ಉಳಿದುಕೊಂಡಿದ್ದರು ಈ ಜೋಡಿ.
ಇದೀಗ ಕೇರಳದಲ್ಲಿ ಸನ್ನಿಯೋನ್ ಕಳೆದ ಕ್ಷಣಗಳ ಫೋಟೋಗಳು ವೈರಲ್ ಆಗಿವೆ.
ಸನ್ನಿ ಲಿಯೋನ್ ಕೇರಳದ ಸಂಪ್ರದಾಯಿಕ ಕಸವು ಸೀರೆಯಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಇನ್ನು ಸನ್ನಿ ಪತಿಯೋ ಕುರ್ತಾ ಧರಿಸಿ ಚಂದನವಿಟ್ಟು ಮಲ್ಲು ಬಾಯ್ ಲುಕ್ನಲ್ಲಿ ಕಾಣಿಸಿಕೊಂಡರು.
ಸನ್ನಿ ಮುದ್ದು ಮಕ್ಕಳು ಮತ್ತು ಪತಿಯ ಜೊತೆ ಸದ್ಯ(ಕೇಳದ ವಿಶೇಷ ಭೋಜನ) ಉಣ್ಣುವ ಫೋಟೋಗಳೂ ವೈರಲ್ ಆಗಿವೆ.
ಪಿಂಕ್ ಬ್ಲೌಸ್ಗೆ ಕಸವು ಸಾರಿ ಉಟ್ಟು, ಮಲ್ಲಿಗೆಯನ್ನೂ ಮುಡಿದಿದ್ದರು ಸನ್ನಿ. ಸನ್ನಿಯ ಮಕ್ಕಳು ಜುಬ್ಬಾದಲ್ಲಿದ್ದರೆ, ಪುಟ್ಟ ಮಗಳು ಲಂಗ ರವಕೆ ಧರಿಸಿದ್ದಳು.
ಎಲ್ಲವನ್ನೂ ಕೇರಳ ಸ್ಟೈಲ್ನಲ್ಲಿ ಮಾಡಿದ ಸನ್ನಿ ಊಟ ಮಾಡೋಕೆ ಮಾತ್ರ ಪರದಾಡಿದ್ದಾರೆ. ನೀಟಾಗಿ ಎಲ್ಎಯಲ್ಲಿ ಬಡಿಸಿದ ಸದ್ಯವನ್ನು ಉಣ್ಣೋಕಾಗದೆ ಸ್ಪೂನ್ ನೆರವು ಪಡೆದಿದ್ದಾರೆ.