ಅನಿಲ್ ಕಪೂರ್ ಯೌವನದ ಗುಟ್ಟು ಸೆಕ್ಸ್ ಅಂತೆ!
First Published | Sep 13, 2022, 5:10 PM ISTಈ ಬಾರಿ ಅನಿಲ್ ಕಪೂರ್ (Anil Kapor) ಮತ್ತು ವರುಣ್ ಧವನ್ (Varun Dhawan) ಕರಣ್ ಜೋಹರ್ (Karan Johar)ಅವರ ಚಾಟ್ ಶೋ ಕಾಫಿ ವಿತ್ ಕರಣ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಪ್ರೋಮೋವನ್ನು ಕರಣ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಚಿಕೆ 11, ಈ ಗುರುವಾರ ಮಧ್ಯಾಹ್ನ 12 ಗಂಟೆಗೆ, Disney Plus Hot Star ನಲ್ಲಿ ಮಾತ್ರ ಸ್ಟ್ರೀಮ್ ಆಗುತ್ತದೆ. ಹೊರಬಿದ್ದ ಪ್ರೋಮೋದಲ್ಲಿ, 65 ವರ್ಷದ ಅನಿಲ್ ಕಪೂರ್ ತನ್ನ ಯಂಗ್ ಲುಕ್‌ನ ರಹಸ್ಯವನ್ನು ಬಹಿರಂಗಪಡಿಸಿದರು.ಅನಿಲ್ ಕಪೂರ್ ಅವರ ಯೌವನ ರಹಸ್ಯ ಏನು ಎಂದು ಕರಣ್ ಪ್ರಶ್ನೆಯನ್ನು ಕೇಳಿದ ತಕ್ಷಣ,ಸೆಕ್ಸ್, ಸೆಕ್ಸ್, ಸೆಕ್ಸ್ ಎಂದು ಅನಿಲ್ ಕಪೂರ್ ಅವರು ಉತ್ತರಿಸಿದರು. ಇದರಿಂದ ಸೆಕ್ಸ್‌ನಿಂದಾಗಿ ಅನಿಲ್ ಕಪೂರ್ ತುಂಬಾ ಯಂಗ್ ಆಗಿ ಕಾಣುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.