ದಂಗಲ್-ಸಂಜು-ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ, 100 ಕೋಟಿ ಕ್ಲಬ್‌ಗೆ ರಣಬೀರ್ ಕಪೂರ್ ಸಿನಿಮಾ!

Published : Sep 12, 2022, 05:54 PM IST

ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್  (Alia Bhatt) ಅಭಿನಯದ ಬ್ರಹ್ಮಾಸ್ತ್ರ (Brahmastra) ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರದ ಮೊದಲ ವಾರಾಂತ್ಯದ ಗಳಿಕೆಯ ಅಂಕಿಅಂಶಗಳು ಬಹಿರಂಗವಾಗಿವೆ. ಈ ಚಿತ್ರ ಕೇವಲ 3 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ ಎಂದು ವರದಿಗಳು ಹೇಳುತ್ತಿವೆ. ವರದಿಗಳ ಪ್ರಕಾರ, ಮೊದಲ ವಾರಾಂತ್ಯದಲ್ಲಿ ಚಿತ್ರ ಸುಮಾರು 122.58 ಕೋಟಿ ಗಳಿಸಿದೆ. ಮೊದಲ ವಾರಾಂತ್ಯದ ಗಳಿಕೆಗೆ ಸಂಬಂಧಿಸಿದಂತೆ, ರಣಬೀರ್ ಅವರ ಚಿತ್ರವು ಆಮೀರ್ ಖಾನ್ ಅವರ ದಂಗಲ್-ಧೂಮ್ 3 ಮತ್ತು ಅವರ ಸ್ವಂತ ಚಿತ್ರ ಸಂಜು ಹಿಂದೆ ಉಳಿದಿದೆ.

PREV
17
ದಂಗಲ್-ಸಂಜು-ಧೂಮ್ 3 ಹಿಂದಿಕ್ಕಿದ ಬ್ರಹ್ಮಾಸ್ತ್ರ, 100 ಕೋಟಿ ಕ್ಲಬ್‌ಗೆ ರಣಬೀರ್ ಕಪೂರ್ ಸಿನಿಮಾ!

ಬಹಿಷ್ಕಾರದ ಟ್ರೆಂಡ್‌ ನಡುವೆ, ಬ್ರಹ್ಮಾಸ್ತ್ರವು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿದಂತಹ ಒಂದು ಚಿತ್ರವಾಗಿದೆ. ಚಿತ್ರದ ಗಳಿಕೆಯ ವೇಗವನ್ನು ಗಮನಿಸಿದರೆ ಶೀಘ್ರದಲ್ಲೇ 200 ಕೋಟಿ ಗಡಿ ದಾಟಲಿದೆ ಎನ್ನುತ್ತಾರೆ ಟ್ರೇಡ್ ವಿಶ್ಲೇಷಕರು.


 

27

ಸೆಪ್ಟೆಂಬರ್ 9 ರಂದು ತೆರೆಕಂಡ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಯಾದ ಮೊದಲ ದಿನವೇ ಭರ್ಜರಿ ಗಳಿಕೆ ಮಾಡಲಾರಂಭಿಸಿದೆ. ಕಳೆದ 3 ದಿನಗಳಿಂದ ಚಿತ್ರವು ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ.

37

ಮೊದಲ ದಿನದ ಗಳಿಕೆ ವಿಚಾರದಲ್ಲಿ ಹಲವು ದಿಗ್ಗಜರ ಚಿತ್ರಗಳನ್ನು ಹಿಂದೆ ಹಾಕಿದೆ ಬ್ರಹ್ಮಾಸ್ತ್ರ. ಮುಂಗಡ ಕಾಯ್ದಿರಿಸುವಿಕೆಯಿಂದ ಚಿತ್ರವು ಅಪಾರ ಲಾಭವನ್ನು ಪಡೆದುಕೊಂಡಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. 

47
brahmastra two day global box office gross collection ranbir kapoor alia bhatt ayan mukerji

ಭಾನುವಾರ ಚಿತ್ರ 44.80 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ಮೊದಲ ದಿನ ಅಂದರೆ ಶುಕ್ರವಾರ 36.42 ಕೋಟಿ ಗಳಿಸಿದ್ದರೆ, ಎರಡನೇ ದಿನವಾದ ಶನಿವಾರ 41.36 ಕೋಟಿ ಗಳಿಸಿದೆ  ಮೂರರ ಕಲೆಕ್ಷನ್ ಸೇರಿದಂತೆ ಮೊದಲ ವಾರಾಂತ್ಯದಲ್ಲಿ ಚಿತ್ರ ಸುಮಾರು 122.58 ಕೋಟಿ ಗಳಿಸಿದೆ. 

57

 ಆದಾಗ್ಯೂ, ಮೊದಲ ವಾರಾಂತ್ಯದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ದಾಖಲೆಯನ್ನು ಇನ್ನೂ ಸೌತ್ ಸ್ಟಾರ್ ಯಶ್ ಅವರ ಚಿತ್ರ ಕೆಜಿಎಫ್ 2 ಹೊಂದಿದೆ. ಈಚಿತ್ರದ ಹಿಂದಿ ಆವೃತ್ತಿ ಮೊದಲ ವಾರಾಂತ್ಯದಲ್ಲಿ 193.99 ಕೋಟಿ ಗಳಿಸಿತ್ತು.


 

67

ಮೊದಲ ವಾರಾಂತ್ಯದ ಗಳಿಕೆಯಲ್ಲಿ ರಣಬೀರ್ ಕಪೂರ್ ಅವರ ಬ್ರಹ್ಮಾಸ್ತ್ರ ಆಮೀರ್ ಖಾನ್ ಅವರ ದಂಗಲ್-ಧೂಮ್ 3 ಮತ್ತು ಸಲ್ಮಾನ್ ಖಾನ್ ಅವರ ಏಕ್ ಥಾ ಟೈಗರ್ ಅನ್ನು ಮೀರಿಸಿದೆ. ಇಷ್ಟೇ ಅಲ್ಲ, ರಣಬೀರ್ ತಮ್ಮದೇ ಆದ ಸಂಜು ಚಿತ್ರವನ್ನೂ ಸೋಲಿಸಿದ್ದಾರೆ. ಮೊದಲ ವಾರಾಂತ್ಯದಲ್ಲಿ ದಂಗಲ್ 106.95 ಕೋಟಿ ಗಳಿಸಿತ್ತು. ಮತ್ತೊಂದೆಡೆ, ಧೂಮ್ 3 97.25 ಕೋಟಿ, ಸಂಜು 120.05 ಕೋಟಿ ಮತ್ತು ಟೈಗರ್ ಜಿಂದಾ ಹೈ 114.93 ಕೋಟಿ ಗಳಿಸಿದೆ. 

77

ಮತ್ತೊಂದೆಡೆ, ಬ್ರಹ್ಮಾಸ್ತ್ರ ಚಿತ್ರದ ಕಲೆಕ್ಷನ್‌ನಿಂದ ಸಂತಸಗೊಂಡಿರುವ ಟ್ರೇಡ್ ವಿಶ್ಲೇಷಕರು, ವಾರಾಂತ್ಯ ಮುಗಿದು ಕೆಲಸದ ದಿನಗಳು ಪ್ರಾರಂಭವಾಗಿರುವುದರಿಂದ ಚಿತ್ರದ ನಿಜವಾದ ಪರೀಕ್ಷೆ ಸೋಮವಾರದಿಂದ ಪ್ರಾರಂಭವಾಗಲಿದೆ ಎಂದು ಹೇಳುತ್ತಾರೆ.

Read more Photos on
click me!

Recommended Stories