ನಿಮಗೆ ಸಾಯಿ ಪಲ್ಲವಿ ಇಷ್ಟಾನಾ? ಇಲ್ಲಿದೆ ನಿಮಗೆ ಗೊತ್ತಿರದ ವಿಷಯಗಳು

First Published Jun 11, 2020, 6:33 PM IST

ಸೌತ್‌ ಇಂಡಿಯಾದ ಸುಂದರಿ ಸಾಯಿ ಪಲ್ಲವಿ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಸಹಜ ಸೌಂದರ್ಯ, ನಟನೆ ಮತ್ತು ಡ್ಯಾನ್ಸ್‌ ಮೂಲಕ ಮೂಲಕ ಫುಲ್‌ ಫೇಮಸ್‌. ಈ ನಟಿ. ತೆಲಗು, ತಮಿಳು ಹಾಗೂ ಮಲೆಯಾಳಿ ಚಿತ್ರಗಳಲ್ಲಿ ನಟಿಸುತ್ತಾರೆ ಈಕೆ. ನ್ಯಾಚರಲ್‌ ಬ್ಯೂಟಿ ಸೌತ್‌ನ ಮಾಧುರಿ  ದೀಕ್ಷಿತ್‌ ಎಂದೇ ಜನಪ್ರಿಯವಾಗಿರುವ ಈ ನಟಿಯ ಬಗ್ಗೆ ಕೆಲವು ಗೊತ್ತಿರದ ವಿಷಯಗಳು ಬಹಿರಂಗ ಗೊಂಡಿದೆ. ನಿಮಗೆ ಸಾಯಿ ಪಲ್ಲವಿ  ಇಷ್ಷನಾ? ಹಾಗಿದ್ದರೆ  ಇಲ್ಲಿದೆ  ನಿಮಗೆ ಗೊತ್ತಿರದ ಅವರ ಬಗ್ಗೆಯ ಅನ್‌ನೋನ್‌ ಫಾಕ್ಟ್‌ಗಳು.

ಪ್ರೇಮಂ ನಟಿ ತನ್ನ ನಟನೆ ಹಾಗೂ ಡ್ಯಾನ್ಸ್‌ನಿಂದ ಹೆಸರುವಾಸಿಯಾಗಿದ್ದಾರೆ. ಅವರ ಬಗ್ಗೆ ಇಲ್ಲಿರುವ ಕೆಲವು ಆಸಕ್ತಿದಾಯಕ ಸಂಗತಿಗಳು ನಿಮಗೆ ಬಹುಶಃ ತಿಳಿದಿಲ್ಲ.
undefined
ಪಲ್ಲವಿ ಆರಂಭದಲ್ಲಿ ತುಂಬಾ ನಾಚಿಕೆ ಮತ್ತು ಅಂಜುಬುರುಕವಾಗಿರುವ ಹುಡುಗಿ. ಕ್ಯಾಮೆರಾ ಮುಂದೆ ಪದೇ ಪದೇ ಕಾಣಿಸಿಕೊಂಡ ನಂತರ ಅವಳ ವ್ಯಕ್ತಿತ್ವ ಬದಲಾಯಿತು.
undefined
ಧೀ ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ಅಮ್ಮನನ್ನು ಪಲ್ಲವಿ ಮನವೊಲಿಸಬೇಕಾಯಿತು, ಏಕೆಂದರೆ ಮಗಳಿನ ಓದಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಪಲ್ಲವಿ ತಾಯಿ ಟಿವಿ ಶೋನಲ್ಲಿ ಭಾಗವಹಿಸುವುದನ್ನು ವಿರೋಧಿಸಿದ್ದರು.
undefined
ಪ್ರೇಮಂ ಪಲ್ಲವಿ ಮೊದಲ ಚಿತ್ರವಲ್ಲ. ಕಂಗನಾ ರಣಾವತ್ ಜೊತೆ ಧ್ಯಾಮ್ ಧೂಮ್‌ ಸಿನಮಾದಲ್ಲಿ ಫ್ರೆಂಡ್‌ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು.
undefined
ತನ್ನ ಲುಕ್‌ ಬಗ್ಗೆ ಎಂದಿಗೂ ವಿಶ್ವಾಸ ಹೊಂದಿರಲಿಲ್ಲ ಹಾಗೂ ಚರ್ಮದಿಂದ ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಕೇರ್‌ ಮಾಡುತ್ತಿದ್ದೆ ಎಂದು ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ.
undefined
ಸೌತ್‌ನ ಮಾಧುರಿ ದೀಕ್ಷಿತ್‌ ಎಂದೇ ಫೇಮಸ್‌ ಆಗಿರುವ ಇವರು ಟ್ರೈನ್ಡ್‌ ಡ್ಯಾನ್ಸರ್‌ ಅಲ್ಲವಂತೆ. ಐಶ್ವರ್ಯಾ ರೈ ಮತ್ತು ಮಾಧುರಿ ದೀಕ್ಷಿತ್‌ರ ನೃತ್ಯ ವೀಡಿಯೊಗಳನ್ನು ನೋಡುವ ಮೂಲಕ ನೃತ್ಯವನ್ನು ಕಲಿತರಂತೆ.
undefined
ಕಪಲ್‌ ಡ್ಯಾನ್ಸ್‌ ಶೋ ಧೀ ಪ್ರೋಮೋ ಮೂಲಕ ಚಿತ್ರರಂಗದ ಗಮನ ಸೆಳೆದರು.
undefined
ಇತ್ತೀಚೆಗೆ ಜಾರ್ಜಿಯಾದ ಟಿಬಿಲಿಸಿಯಿಂದ ವೈದ್ಯಕೀಯದಲ್ಲಿ ಪದವಿ ಪಡೆದ ಇವರ ಮೊದಲ ಕೆರಿಯರ್‌ ಆಯ್ಕೆ ಡಾಕ್ಟರ್‌ ಹಾಗೂ ಹೃದ್ರೋಗ ತಜ್ಞರಾಗಲು ಬಯಸುತ್ತಾರೆ ಎಂದು ಹೇಳಿದರು ಸಾಯಿ ಪಲ್ಲವಿ.
undefined
ಹಿಟ್‌ ಸಾಂಗ್‌ ಮಲಾರೆ ತನ್ನ ಮೇಲೆ ಚಿತ್ರಿಸಲ್ಪಟ್ಟಿದೆ ಎಂದು ಆರಂಭದಲ್ಲಿ ತಿಳಿದಿರಲಿಲ್ಲವಂತ, ನಂತರ ನಿಜ ತಿಳಿದಾಗ ತುಂಬಾ ಸಂತೋಷಪಟ್ಟೆ ಎಂದು ಹೇಳಿಕೊಂಡಿದ್ದಾರೆ ನ್ಯಾಚುರಲ್‌ ಬ್ಯೂಟಿ ಸಾಯಿ.
undefined
ಪ್ರೇಮಂ‌ಗಾಗಿ ಅಲ್ಫೋನ್ಸ್ ಪಲ್ಲವಿಯನ್ನು ಸಂಪರ್ಕಿಸಿದಾಗ, ಯಾರೋ ಹಿಂಬಾಲಕನೆಂದು ಭಾವಿಸಿದ್ದರಂತೆ.
undefined
ಪಲ್ಲವಿ ತಮಿಳುನಾಡಿನ ಕೊಟಗಿರಿಯ ಬಡಗ ಸಮುದಾಯದವರು. ಬಡಗ ಸಮುದಾಯದಿಂದ ಸ್ಟಾರ್ಡಮ್ ಸಾಧಿಸಿದ ಮೊದಲ ನಟಿ.
undefined
ಕೇರಳದವಳಲ್ಲದಿದ್ದರೂ, ನಟಿ ಓಣಂ ಆಚರಿಸಲು ಮತ್ತು ಹೂವುಗಳಿಂದ ರಂಗೋಲಿ ಬಿಡಿಸಲು ಇಷ್ಟ ಪಡುತ್ತಾರೆ.
undefined
click me!