ಪಿಂಕ್‌ ಸೀರೆಯಲ್ಲಿ ಕಿಸ್‌ ಬೆಡಗಿ ಸೆಕ್ಸಿ ಲುಕ್: ಸ್ವಲ್ಪ ಕನ್ನಡ ಕಡೆ ಬನ್ನಿ ಶ್ರೀಲೀಲಾ ಎಂದ ಫ್ಯಾನ್ಸ್‌!

First Published | Dec 21, 2023, 9:32 AM IST

ಸ್ಯಾಂಡಲ್‌ವುಡ್‌ನ ನಟಿ ಶ್ರೀಲೀಲಾ ಸಧ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ.

ಟಾಲಿವುಡ್​ನಲ್ಲಿ ಕನ್ನಡದ ಭರಾಟೆ ಬ್ಯೂಟಿಯ ಅಬ್ಬರ ಜೋರಾಗಿದೆ. ಶ್ರೀಲೀಲಾ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗ್ತಿದೆ. ಶ್ರೀಲೀಲಾ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗ್ತಿದೆ. ಭಗವಂತ ಕೇಸರಿ ಹಿಟ್ ಬಳಿಕ ಶ್ರೀಲೀಲಾಗೆ ಫುಲ್ ಡಿಮ್ಯಾಂಡ್​ ಆಗಿದೆ.

ಧಮಾಕಾ ಸಿನಿಮಾ ಮೂಲಕ ಟಾಲಿವುಡ್ ಇಂಡಸ್ಟ್ರಿಯಲ್ಲಿ ಫೇಮಸ್​ ಆದ ಶ್ರೀಲೀಲಾ ಈ ಚಿತ್ರಕ್ಕಾಗಿ ಅತ್ಯುತ್ತಮ ನಟಿ ಸೈಮಾ ಪ್ರಶಸ್ತಿಯನ್ನು ಪಡೆದರು. ಇತ್ತೀಚೆಗಷ್ಟೇ ಆಕೆ ನಟಿಸಿದ ಸ್ಕಂದ ಬಾಕ್ಸ್ ಆಫೀಸ್​ನಲ್ಲಿ ಆವರೇಜ್ ಹಿಟ್​ ಆಗಿತ್ತು.

Tap to resize

ಇದೀಗ ಶ್ರೀಲೀಲಾ ಪಿಂಕ್‌ ಸೀರೆಯಲ್ಲಿ ಹಾಟ್‌ ಟ್ರೀಟ್‌ ನೀಡಿದ್ದು, ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡಿದ್ದಾರೆ. ಹೌದು! ಶ್ರೀಲೀಲಾ ಗುಲಾಬಿ ಬಣ್ಣದ ಸೀರೆ ತೊಟ್ಟು ತಮ್ಮ ಸೌಂದರ್ಯದ ಮೂಲಕ ನೆಟ್ಟಿಗರನ್ನು ಹುಚ್ಚೆಬ್ಬಿಸುತ್ತಿದ್ದಾರೆ.

ಪಿಂಕ್‌ ಸೀರೆಯಲ್ಲಿ ಶ್ರೀಲೀಲಾರನ್ನು ನೋಡಿದ ನೆಟ್ಟಿಗರು, ಬ್ಯೂಟಿಫುಲ್, ಹಾಟ್, ಸೂಪರ್, ರೆಡ್ ಹಾರ್ಟ್ ಎಮೋಜಿ, ಪಿಂಕ್ ಡ್ರೆಸ್ ಪ್ರಿನ್ಸೆಸ್ ಬೊಂಬೆ ಸಿಂಡ್ರೆಲ್ಲಾ ಮುದ್ದಾದ ಹುಡುಗಿ ಸೇರಿದಂತೆ ಸ್ವಲ್ಪ ಕನ್ನಡ ಕಡೆ ಬನ್ನಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಬಾಲಯ್ಯ ಜೊತೆ ಶ್ರೀಲೀಲಾ ಭಗವಂತ ಕೇಸರಿ ಸಿನಿಮಾ ಮಾಡಿದ್ದಾರೆ. ದತ್ತು ಮಗಳ ಪಾತ್ರಕ್ಕೆ ಬಾಲಯ್ಯ ಜೊತೆ ಶ್ರೀಲೀಲಾ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಸ್ಟಾರ್ ಹೀರೋ ಸಿನಿಮಾದಲ್ಲಿ ನಟಿಸಿದ್ದರೂ ತನ್ನ ನಟನೆಯಿಂದ ಶ್ರೀಲೀಲಾ ಇಂಪ್ರೆಸ್ ಮಾಡಿದ್ದಾರೆ.

ಭಗವಂತ ಕೇಸರಿ ಚಿತ್ರದ ಯಶಸ್ಸಿನೊಂದಿಗೆ ಶ್ರೀಲೀಲಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಒಂದೂವರೆ ಕೋಟಿ ವರೆಗೆ ತೆಗೆದುಕೊಂಡ ಶ್ರೀಲೀಲಾ, ಮುಂದಿನ ಚಿತ್ರಗಳಿಗೆ ರೂ. 3 ಕೋಟಿವರೆಗೂ ಸಂಭಾವನೆ ಪಡೆಯುತ್ತಿದ್ದಾರೆ.

ನಟ ನಿತಿನ್ ಅವರ 'ಎಕ್ಸ್ಟ್ರಾ ಆರ್ಡಿನರಿ ಮ್ಯಾನ್' ಡಿಸೆಂಬರ್ 23ರಂದು ರಿಲೀಸ್ ಆಗಿದೆ. ನಟ ನಿತಿನ್ ಹಾಗೂ ಶ್ರೀಲೀಲಾ ಜೋಡಿಯನ್ನು ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾಗೆ ಶ್ರೀಲೀಲಾ ಜೋಡಿಯಾಗಿದ್ದು, ಜನವರಿ 12ರಂದು 'ಗುಂಟೂರು ಕಾರಮ್' ಸಿನಿಮಾ ರಿಲೀಸ್ ಆಗಲಿದೆ. ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಶ್ರೀಲೀಲಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Latest Videos

click me!