ಅನಿಮಲ್‌ ಸಿನಿಮಾದಂತಲ್ಲ, ಇವುಪುರುಷತ್ವ ಮರು ವ್ಯಾಖ್ಯಾನಿಸಿದ ಬಾಲಿವುಡ್‌ ಪಾತ್ರಗಳಿವು!

First Published Dec 20, 2023, 4:19 PM IST

ರಶ್ಮಿಕಾ ಮಂದಣ್ಣ (Rashmika Mandanna)  ಮತ್ತು ರಣಬೀರ್‌ ಕಪೂರ್‌ (Ranbir Kapoor) ಅವರು ನಟಿಸಿರುವ ಆನಿಮಲ್‌ (Animal) ಚಿತ್ರ ಸಖತ್‌ ಸದ್ದು ಮಾಡುತ್ತಿದೆ. ಸಿನಿಮಾದಲ್ಲಿರುವ ಅತೀವ  ದ್ವೇಷ ಮತ್ತು ಹಿಂಸೆಯ ಕಾರಣದಿಂದ ಸಾಕಷ್ಷು ಟೀಕೆಗೆ ಗುರಿಯಾಗುತ್ತಿದೆ. ಅನಿಮಲ್ ಚಿತ್ರದಲ್ಲಿನ ದ್ವೇಷ ಮತ್ತು ಸೇಡಿನ ನಡುವೆ ಹಿಂದಿ ಸಿನಿಮಾದ  ಈ ಪಾತ್ರಗಳು ಪುರುಷತ್ವವನ್ನು ಮರು ವ್ಯಾಖ್ಯಾನಿಸಿವೆ ಮತ್ತು ಪ್ರೇಕ್ಷಕರ ಮನಸ್ಸಿಗೆ  ಹತ್ತಿರವಾಗಿವೆ.

ಡಿಯರ್‌ ಜಿಂದಗಿ ಜಹಾಂಗೀರ್:
ಡಿಯರ್ ಜಿಂದಗಿಯಲ್ಲಿ ಸಿನಿಮಾದಲ್ಲಿ ಥೆರಪಿಸ್ಟ್‌  ಜಹಾಂಗೀರ್  ಖಾನ್ ಪಾತ್ರವನ್ನು SRK ನಿರ್ವಹಿಸಿದರು. ಚಿತ್ರದಲ್ಲಿ ಅವರು  ಬ್ರೇಕಪ್‌ ನಂತರ ಬಳಲುತ್ತಿದ್ದ ಆಲಿಯಾಳ ಪಾತ್ರಕ್ಕೆ ಮಾರ್ಗದರ್ಶನ ಮಾಡುವುದನ್ನು ಮತ್ತು ಅವಳ ಮೌಲ್ಯವನ್ನು ಅವಳಿಗೆ ಅರ್ಥಮಾಡಿಕೊಳ್ಳುವಂತೆ ಮಾಡುವುದನ್ನು ನಾವು ನೋಡುತ್ತೇವೆ.
 

ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ರಾಕಿ:
ರಣವೀರ್ ಸಿಂಗ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ, ಅವರು ಪ್ರತಿಯೊಂದು ಸಮಾಜದ ರೂಢಿಗಳನ್ನು ಮುರಿದು, ಪುರುಷ ದುರ್ಬಲರಾಗಬಹುದು ಮತ್ತು ಮಹಿಳೆಯರು ಬಲವಾದ ಮತ್ತು ಸ್ವತಂತ್ರರಾಗಬಹುದು ಎಂದು ಸಾಬೀತುಪಡಿಸಲು ಅವನ ಕುಟುಂಬದ ವಿರುದ್ಧ ಹೋಗುತ್ತಾರೆ.

Latest Videos


Image: Still from the movie

ರಾಝಿ ಇಕ್ಬಾಲ್:
ರಾಝಿ ಚಿತ್ರದಲ್ಲಿ ವಿಕ್ಕಿ ಕೌಶಲ್  ಆಲಿಯಾ ಭಟ್ ನಿರ್ವಹಿಸಿದ ಪತ್ನಿ ಶಹಮತ್ ಅವರನ್ನು ಬೆಂಬಲಿಸುವ ಪಾತ್ರವನ್ನು ನಿರ್ವಹಿಸಿದ್ದಾರೆ.

 ದಿಲ್ ಧಡಕ್ನೆ ದೋ  ಸನ್ನಿ:
ದಿಲ್ ಧಡಕ್ನೆ ದೋ ನಲ್ಲಿ ಪತ್ರಕರ್ತನಾಗಿ ಫರಾನ್ ಅಖ್ತರ್ ಈ ಪಾತ್ರವನ್ನು  ನಿರ್ವಹಿಸಿದ್ದಾರೆ ಮತ್ತು ವಿಷಕಾರಿ ಸಂಬಂಧದಿಂದ ಹೊರಬರಲು ಆವರ ಮಾಜಿ ಪ್ರೇಮಿಗೆ ಸಹಾಯ ಮಾಡುತ್ತಾರೆ.

ಚಪ್ಪಕ್‌  ಅನ್ಮೋಲ್:
ವಿಕ್ರಾಂತ್ ಮೆಸ್ಸಿ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ಆಸಿಡ್ ದಾಳಿಯ ಸಂತ್ರಸ್ತಳನ್ನು ವಿವಾಹವಾಗಿ ದಾಳಿಕೋರರ ವಿರುದ್ಧದ ಪ್ರಕರಣದಲ್ಲಿ ಹೋರಾಡುವಲ್ಲಿ ಆಕೆಯನ್ನು ಬೆಂಬಲಿಸುತ್ತಾರೆ.

ಮನ್ಮಾರ್ಜಿಯಾ ರಾಬಿ:
ಅಭಿಷೇಕ್ ಬಚ್ಚನ್ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರು ತಮ್ಮ ಹೆಂಡತಿಯ ವಿವಾಹೇತರ ಸಂಬಂಧದ ಬಗ್ಗೆ ತಿಳಿದಿದ್ದರೂ ಸಹ ಪ್ರಬುದ್ಧವಾಗಿ ವರ್ತಿಸುತ್ತಾರೆ ಮತ್ತು ಅವರಿಗೆ ಸ್ಪೇಸ್‌ ನೀಡುತ್ತಾರೆ.

click me!