ಒಕ ಮನಸು, ಹ್ಯಾಪಿ ವೆಡ್ಡಿಂಗ್ ಮತ್ತು ಸೂರ್ಯಕಾಂತಂ ಸಿನಿಮಾದಲ್ಲಿ ನಟಿಸಿರುವ ನಿಹಾರಿಕಾ ಕೊನಿಡೆಲಾ...ನಾಗ ಬಾಬು ಅವರ ಮುದ್ದಿನ ಪುತ್ರಿ.
ಕೆಲವು ದಿನಗಳ ಹಿಂದೆ 27ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ನಿಹಾರಿಕಾ ಕೊನಿಡೆಲಾ ಸಖತ್ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ.
ಪಿಂಕ್ ಟಾಪ್‌ಗೆ ಡೆನಿಮ್ ಸ್ಕರ್ಟ್ ಧರಿಸಿ ಅದಕ್ಕೆ ಮ್ಯಾಚ್ ಮಾಡಲು Gucci ಬ್ರ್ಯಾಂಡ್‌ನ ಪಿಂಕ್ ಹೀಲ್ಸ್ ಧರಿಸಿದ್ದಾರೆ. ಇದರ ಬೆಲೆ 21, 600 ರೂಪಾಯಿ ಎನ್ನಲಾಗಿದೆ.
ಸಖತ್ ಸಿಂಪಲ್ ಆಗಿ ಕಾಣಿಸಲು ಇಷ್ಟ ಪಡುವ ಸೆಲೆಬ್ರಿಟಿಗಳು ಅದರಲ್ಲೂ ಚಿರಂಜೀವಿ ಕುಟುಂಬದವರು..ಚಪ್ಪಲಿ ಮತ್ತು ಬ್ಯಾಗ್‌ಗೆ ಇಷ್ಟೊಂದು ಹಣ ಇಡುವುದು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ರಾಮ್ ಚರಣ್, ಉಪಾಸನಾ, ಶ್ರೀಜಾ, ವರುಣ್ ತೇಜ್...ಈಗ ನಿಹಾರಿಕಾ..ದುಬಾರಿ ವಸ್ತುಗಳನ್ನು ಖರೀದಿಸುತ್ತಾರೆ..ದುಡ್ಡಿಗೆ ಬೆಲೆ ಇಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
2020ರಲ್ಲಿ ರಾಜಸ್ಥಾನದಲ್ಲ ಅದ್ಧೂರಿಯಾಗಿ ಉದ್ಯಮಿ ಚೈತ್ಯರನ್ನು ಮದುವೆ ಮಾಡಿಕೊಂಡರು. 2023ರಲ್ಲಿ ಭಿನ್ನಾಭಿಪ್ರಾಯದಿಂದ ವಿಚ್ಛೇದನ ಪಡೆದರು.
Vaishnavi Chandrashekar