ಕಿಶೋರ್ ಕುಮಾರ್ ಲವ್‌: ಬಾಲಿವುಡ್‌ 4 ಸುಂದರಿಯರ ಮದುವೆಯಾದ ಗಾಯಕ!

Published : Aug 08, 2021, 01:37 PM ISTUpdated : Aug 08, 2021, 01:39 PM IST

ಲೆಜೆಂಡರಿ  ಗಾಯಕ, ನಟ ಮತ್ತು ನಿರ್ಮಾಪಕ ಕಿಶೋರ್ ಕುಮಾರ್ ಹಿಂದಿ ಚಿತ್ರರಂಗದ ಅತ್ಯಂತ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರು. ಅವರು ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಅಭಿನಯ ಹಾಗೂ ಗಾಯನ ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ. ಅಷ್ಟೇ ಇಲ್ಲ  ಕಿಶೋರ್‌ ಕುಮಾರ್‌ ಅವರ  ಪರ್ಸನಲ್‌ ಲೈಫ್‌ ಕೂಡ ಸಖತ್‌ ಇಂಟರೆಸ್ಟಿಂಗ್‌ ಆಗಿದೆ. ಅವರ ಲವ್‌ಲೈಫ್‌ ಇಂದಿಗೂ ಚರ್ಚೆಯಲ್ಲಿದೆ. 

PREV
110
ಕಿಶೋರ್ ಕುಮಾರ್ ಲವ್‌:  ಬಾಲಿವುಡ್‌ 4 ಸುಂದರಿಯರ ಮದುವೆಯಾದ ಗಾಯಕ!

ಕಿಶೋರ್ ಕುಮಾರ್ ಹಿಂದಿ ಚಿತ್ರರಂಗ ಕಂಡ  ಅತ್ಯಂತ ಪ್ರತಿಭಾವಂತ ಕಲಾವಿದ ಏನುವುದರಲ್ಲಿ ಅನುಮಾನವಿಲ್ಲ.

210

ಅವರು ಇಂದು ನಮ್ಮ ನಡುವೆ ಇಲ್ಲದಿದ್ದರೂ, ಅವರ ಜೀವನ ಕಥೆಗಳು, ಸಂಗೀತ ಮತ್ತು ನಟನೆಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

310

 ಅವರ ವೃತ್ತಿಪರ ಜೀವನದ ಹೊರತಾಗಿ, ಕುಮಾರ್ ಅವರ ಲವ್‌ಲೈಫ್‌ ಸಕ್ಕತ್‌ ಸದ್ದು ಮಾಡಿತ್ತು.

410

ಹಲವು ಆಫೇರ್‌ಗಳು ಹಾಗೂ ಬಾಲಿವುಡ್‌ನ 4 ನಟಿಯರ ಜೊತೆಗೆ ಕಿಶೋರ್‌ ಕುಮಾರ್‌ ಮದುವೆಗಳು ಇನ್ನೂ ಚರ್ಚೆಯಾಗುತ್ತಿರುತ್ತವೆ.ಅವರ ಪ್ರೇಮ ಜೀವನವು ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ.

510

21 ವರ್ಷ ವಯಸ್ಸಿನಲ್ಲಿ ಕಿಶೋರ್ ಮೊದಲು ರುಮಾ ದೇವಿಯನ್ನು ವಿವಾಹವಾದರು.  8 ವರ್ಷಗಳ ನಂತರ ಇಬ್ಬರೂ ಬೇರೆಯಾದರು ಮತ್ತು ಈ ಜೋಡಿಗೆ  ಅಮಿತ್ ಕುಮಾರ್ ಎಂಬ ಮಗ  ಜನಿಸಿದರು. 

610

ನಂತರ ಅವರು ಹಿಂದಿ ಚಿತ್ರರಂಗದ ಅತ್ಯಂತ ಸುಂದರ ಮಹಿಳೆ ಮಧುಬಾಲಾಳನ್ನು ವಿವಾಹವಾದರು.

710

ನಟಿಗಾಗಿ  ತನ್ನ ಧರ್ಮವನ್ನು ಸಹ  ಬದಲಾಯಿಸಿ ಕೊಂಡರು. ಆದರೆ  ಕೆಲವು ವರ್ಷಗಳ ನಂತರ, ಮಧುಬಾಲಾ ನಿಧನರಾದರು. 

810

ಕಿಶೋರ್ 1976 ರಲ್ಲಿ ನಟಿ ಯೋಗಿತಾ ಬಾಲಿಯನ್ನು ವಿವಾಹವಾದರು, ಆದರೆ ಮದುವೆ  ಹೆಚ್ಚು ಕಾಲ ಉಳಿಯಲಿಲ್ಲ ಎರಡು ವರ್ಷಗಳ ನಂತರ ಬೇರ್ಪಟ್ಟರು.

910

1980 ರಲ್ಲಿ ಅವರು ಮತ್ತೆ ಲೀನಾ ಚಂದ್ರವರ್ಕರ್ ಅವರನ್ನು ವಿವಾಹವಾದರು. ಲೀನಾ ಕಿಶೋರ್‌ಗಿಂತ 21 ವರ್ಷ ಚಿಕ್ಕವರು.

1010

ಕಿಶೋರ್‌ ಕುಮಾರ್‌ ಅಕ್ಟೋಬರ್ 18, 1987 ರಂದು ಹೃದಯಾಘಾತದಿಂದ ನಿಧನರಾದರು. ಅವರನ್ನು ಅವರ ತಾಯ್ನಾಡಿನ ಖಾಂಡ್ವಾದಲ್ಲಿ ಸಮಾಧಿ ಮಾಡಲಾಯಿತು.
 

click me!

Recommended Stories