ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈಗೆ ನೆಗೆಟಿವ್‌ ರೋಲ್‌!

Published : Aug 08, 2021, 01:06 PM ISTUpdated : Aug 08, 2021, 01:28 PM IST

ಬಾಲಿವುಡ್‌ ನಟಿ ಐಶ್ವರ್ಯಾ ರೈ ಬಹುಕಾಲದ ನಂತರ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಭಾರಿ ಐಶ್ವರ್ಯಾ ದಕ್ಷಿಣದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮಣಿರತ್ನಂ ಅವರ 500 ಕೋಟಿ ಬಜೆಟ್‌ನ  ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಐಶ್ವರ್ಯಾ ರೈ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.  ಈ ಚಿತ್ರದಲ್ಲಿ ರೈ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ. ಪೊನ್ನಿನ್ ಸೆಲ್ವನ್ (Ponniyin Selvan) ಮತ್ತು ಐಶ್ವರ್ಯಾ ರೈ ಚಿತ್ರಕ್ಕೆ ಸಂಬಂಧಿಸಿದ ಇನ್ನೂ ಕೆಲವು ಶಾಕಿಂಗ್‌ ಮಾಹಿತಿಗಳು ಇಲ್ಲಿವೆ. 

PREV
113
ಮಣಿರತ್ನಂ ಸಿನಿಮಾದಲ್ಲಿ ಐಶ್ವರ್ಯಾ ರೈಗೆ ನೆಗೆಟಿವ್‌ ರೋಲ್‌!

ಪೊನ್ನಿನ್ ಸೆಲ್ವನ್ ಸಿನಮಾದ ಕಾಸ್ಟಿಂಗ್‌ ಕ್ರಿವ್ತೂ ಮತ್ತು ಪಾತ್ರಗಳ ಪಟ್ಟಿ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿವೆ.  ಚಿತ್ರಕ್ಕೆ ಸಂಬಂಧಿಸಿದ ಸಂಪೂರ್ಣ ತಂಡದ ಹೆಸರುಗಳನ್ನು ಒಳಗೊಂಡಿದೆ.

213

ಅದೇ ಸಮಯದಲ್ಲಿ, ಈ ಸಿನಿಮಾದಲ್ಲಿ  ಐಶ್ವರ್ಯಾ ರೈ ವಿಲನ್‌ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಗೊಂಡಿದೆ.

313

ಐಶ್ವರ್ಯಾರ ಪಾತ್ರದ ಹೆಸರು ನಂದಿನಿ/ಮಂದಾಕಿನಿ ಎಂದು ಅವರ ಹೆಸರಿನ ಪಕ್ಕದಲ್ಲಿ ಬರೆಯಲಾಗಿದೆ. ಅಲ್ಲದೆ, ನಕಾರಾತ್ಮಕ ಪಾತ್ರಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ. 

413

ಆದರೆ  ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆಯನ್ನು ಫಿಲ್ಮ್‌ ಮೇಕರ್‌ ಮಾಡಿಲ್ಲ. 

513

ಸೋಶಿಯಲ್‌ ಮಿಡೀಯಾದಲ್ಲಿ ಪಟ್ಟಿ ಕಾಣಿಸಿಕೊಂಡ ನಂತರ, ಐಶ್ವರ್ಯಾ ರೈ ಈ ಚಿತ್ರದಲ್ಲಿ ಎರಡು ವಿಭಿನ್ನ  ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. 

613

ಅಮಿತಾಬ್ ಬಚ್ಚನ್ ಸಹ   ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು  ಮಾಹಿತಿಯೂ ಹೊರಬಂದಿತು. ಆದರೆ ಕೆಲವು ಕಾರಣಗಳಿಂದಾಗಿ, ಅವರ ಸ್ಥಾನದಲ್ಲಿ ಸೌತ್ ಸ್ಟಾರ್ ಪ್ರಕಾಶ್ ರಾಜ್‌ರನ್ನು ತೆಗೆದುಕೊಳ್ಳಲಾಯಿತು.

713

1955 ರಲ್ಲಿ ಪೊನ್ನಿಯಿನ್ ಸೆಲ್ವನ್ ಹೆಸರಿನಲ್ಲಿ ಒಂದು ಕಾದಂಬರಿಯನ್ನು ಪ್ರಕಟಿಸಲಾಗಿತು, ಈಗ ಈ ಕಥೆಯ ಮೇಲೆ ಒಂದು ದೊಡ್ಡ ಬಜೆಟ್ ಚಲನಚಿತ್ರವನ್ನು ತಯಾರಿಸಲಾಗುತ್ತಿದೆ. 

813

ಈ ಕಾದಂಬರಿ ತಮಿಳು ಭಾಷೆಯಲ್ಲಿದ್ದು. ಇದರ 5 ಭಾಗಗಳನ್ನು ಬೇರೆ ಬೇರೆ ಪುಸ್ತಕಗಳಾಗಿ ವಿಂಗಡಿಸಲಾಗಿದೆ. ಮಣಿರತ್ನಂ ಮೊದಲ ಭಾಗವನ್ನು ಸಿನಿಮಾ ರೂಪದಲ್ಲಿ ತರುತ್ತಿದ್ದಾರೆ ಮತ್ತು ಅದರ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.

913

ಇತ್ತೀಚೆಗೆ, ಐಶ್ವರ್ಯಾ ರೈ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡು 'ಸುವರ್ಣಯುಗ ಜೀವಂತವಾಗಲಿದೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ' ಎಂದು ಕ್ಯಾಪ್ಷನ್‌ ನೀಡಿದ್ದಾರೆ.

1013

ಪೊನ್ನಿಯಿನ್ ಸೆಲ್ವನ್ ಅನ್ನು ಎರಡು ಭಾಗಗಳಲ್ಲಿ ಮಾಡಲಾಗುವುದು ಮತ್ತು ಅದರ ಮೊದಲ ಭಾಗವನ್ನು 2022 ರಲ್ಲಿ ಬಿಡುಗಡೆ ಮಾಡಲಾಗುವುದು. 

1113

ಮಣಿರತ್ನಂ ಅವರ ಈ ಡ್ರೀಮ್‌ ಪ್ರಾಜೆಕ್ಟ್‌ನಲ್ಲಿ  ಐಶ್ವರ್ಯಾ ರೈ ಜೊತೆಗೆ ವಿಕ್ರಮ್, ಕೀರ್ತಿ, ಜಯಂ ರವಿ, ತ್ರಿಷಾ ಕೃಷ್ಣನ್ ಮತ್ತು ಮೋಹನ್ ಬಾಬು ಕಾಣಿಸಿಕೊಳ್ಳಲಿದ್ದಾರೆ. 

1213

ರಾಮೋಜಿ ಫಿಲ್ಮ್ ಸಿಟಿಯಲ್ಲಿ ತ್ರಿಷಾ ಸೇರಿದಂತೆ 250 ನಟರೊಂದಿಗೆ ಚಿತ್ರೀಕರಿಸಿದ್ದಾರೆ. ವರದಿಗಳ ಪ್ರಕಾರ, ಚಿತ್ರದ ಚಿತ್ರೀಕರಣವು 11 ಡಿಸೆಂಬರ್ 2019 ರಂದು ಥೈಲ್ಯಾಂಡ್‌ನಿಂದ ಆರಂಭವಾಯಿತು, 40 ದಿನಗಳ ಕಾಲ ಶೂಟಿಂಗ್‌ ನಂತರ ತಂಡವು ಎರಡನೇ ಶೆಡ್ಯೂಲ್‌ನ್ನು ಚೆನ್ನೈನಲ್ಲಿ ಚಿತ್ರೀಕರಿಸಲು ಯೋಜಿಸಿ  6 ದಿನಗಳಲ್ಲಿ ಪುದುಚೇರಿಯಲ್ಲಿ ಪೂರ್ಣಗೊಳಿಸಲಾಯಿತು. ಫಿಲ್ಮ್ ಸಿಟಿಯಲ್ಲಿ ಮೂರನೇ ಶೆಡ್ಯೂಲ್ ಮುಗಿಸಿದ್ದಾರೆ. 

1313

ಐಶ್ವರ್ಯಾ ರೈ ಕೊನೆಯ ಬಾರಿ  ಅನಿಲ್ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಜೊತೆ ಫನ್ನಿ ಖಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಐಶ್ವರ್ಯ ರೈಗೆ ಯಾವುದೇ ಸಿನಿಮಾ ಆಫರ್ ಬಂದಿರಲಿಲ್ಲ.

click me!

Recommended Stories