ಪಾಕಿಸ್ತಾನದ ಸಿನಿಮಾ ಮತ್ತು ಶೋಗಳಲ್ಲಿ ಕೆಲಸ ಮಾಡಿದ ಭಾರತೀಯ ಸ್ಟಾರ್ಸ್!

First Published | Apr 1, 2022, 5:39 PM IST

ಕಲೆಯನ್ನು ಯಾವತ್ತೂ ಗಡಿಯಲ್ಲಿ ಬಂಧಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಎರಡು ದೇಶಗಳನ್ನು ಸಂಪರ್ಕಿಸುವ ಕೆಲಸವನ್ನು ಕಲೆ ಮಾತ್ರ ಮಾಡುತ್ತದೆ. ಬಹುಶಃ ಪಾಕಿಸ್ತಾನದೊಂದಿಗಿನ ಸಂಬಂಧ ಹದಗೆಟ್ಟಿದ್ದರೂ, ಕಲಾವಿದರು ಪರಸ್ಪರರ ದೇಶದಲ್ಲಿ ಕೆಲಸ ಮಾಡಿದರು ಮತ್ತು ಜನರಲ್ಲಿ ತಮ್ಮದೇ ಆದ ಸ್ಥಾನವನ್ನು ಗಳಿಸಿದರು. ಇತ್ತೀಚಿನ ದಶಕದಲ್ಲಿ, ಭಾರತದ ಕೆಲವು ನಟರು ಪಾಕಿಸ್ತಾನದ ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ ಕಿರಣ್ ಖೇರ್‌ನಿಂದ ಶ್ವೇತಾ ತಿವಾರಿವರೆಗೆ ಅನೇಕ ನಟರು ಪಾಕಿಸ್ತಾನದ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪಾಕಿಸ್ತಾನದಲ್ಲಿ ಕೆಲಸ ಮಾಡಿದ ಭಾರತೀಯ ಸ್ಟಾರ್ಸ್‌ ವಿವರ ಇಲ್ಲಿದೆ.
 

ತಮ್ಮ ನಟನೆಯಿಂದಲೇ ವಿಭಿನ್ನ ಐಡೆಂಟಿಟಿ ಮೂಡಿಸಿರುವ ಕಿರಣ್ ಖೇರ್ ಪಾಕಿಸ್ತಾನಿ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಬಿಜೆಪಿ ಸಂಸದ ಖೇರ್ 2003ರ ಪಾಕಿಸ್ತಾನಿ ಚಲನಚಿತ್ರ 'ಖಾಮೋಶ್ ಪಾನಿ'ಯಲ್ಲಿ ತಮ್ಮ ನಟನಾ ಕೌಶಲ್ಯವನ್ನು ತೋರಿಸಿದರು. ಈ ಸಿನಿಮಾ ಅಲ್ಲಿನ ಜನರಿಗೆ ತುಂಬಾ ಇಷ್ಟವಾಯಿತು.
 
 

ಶ್ವೇತಾ ತಿವಾರಿ ಕೂಡ ಪಾಕಿಸ್ತಾನಿ ಸಿನಿಮಾದ ಭಾಗವಾಗಿದ್ದಾರೆ. ‘ಸುಲ್ತಾನತೆ’ಸಿನಿಮಾದ ಮೂಲಕ ಶ್ವೇತಾ  ತಮ್ಮ ಅಭಿನಯದ ವೈಭವವನ್ನು ನೆರೆ ರಾಷ್ಟ್ರದಲ್ಲೂ ಪಸರಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಮಾಡಿದ್ದು ಪಾಕಿಸ್ತಾನದಲ್ಲಿ ಅಲ್ಲ ದುಬೈನಲ್ಲಿ. ಆದರೆ, ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಾವುದೇ ವಿಶೇಷ ಪ್ರದರ್ಶನವನ್ನು ತೋರಿಸಲು ಸಾಧ್ಯವಾಗಲಿಲ್ಲ. ಈ ಚಿತ್ರ 2014 ರಲ್ಲಿ ಬಿಡುಗಡೆಯಾಯಿತು.

Tap to resize

ಫೇಮಸ್‌ ಹಾಸ್ಯನಟ ಜಾನಿ ಲಿವರ್ ಪಾಕಿಸ್ತಾನದ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. 2011 ರಲ್ಲಿ, ಅವರು ಅಲ್ಲಿನ 'ಲವ್ ಮೇ ಘೂಮ್' ಚಿತ್ರದಲ್ಲಿ ಕಾಮಿಡಿ ರೋಲ್‌ ಮಾಡುತ್ತಿದ್ದರು.

ಬಾಲಿವುಡ್ ನಟ ಆರ್ಯ ಬಬ್ಬರ್ ಕೂಡ ಪಾಕಿಸ್ತಾನಿ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್ ಬಬ್ಬರ್ ಪುತ್ರ ಆರ್ಯ 2010ರಲ್ಲಿ ತೆರೆಕಂಡ ‘ವೀರ್ಸಾ’ ಚಿತ್ರದಲ್ಲಿ ತಮ್ಮ ನಟನೆಯ ಜಾದೂವನ್ನು ಪಕ್ಕದ ದೇಶಕ್ಕೆ ಪಸರಿಸಿದರು. ಈ ಸಿನಿಮಾ ಪಾಕಿಸ್ತಾನಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿತು.

ನೇಹಾ ಧೂಪಿಯಾ  ಅವರು ಪಾಕಿಸ್ತಾನಿ ಸಿನಿಮಾ 'ಕಭಿ ಪ್ಯಾರ್ ನಾ ಕರ್ನಾ'ದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಡ್ಯಾನ್ಸ್ ನಂಬರ್ ಕೂಡ ಮಾಡಿದ್ದಾರೆ. ಈ ಹಾಡು ಇಂದಿಗೂ ಪಾಕಿಸ್ತಾನದ ಜನರ ಹೃದಯವನ್ನು ಆಳುತ್ತಿದೆ.

ಸಾರಾ ಖಾನ್ ಪಾಕಿಸ್ತಾನಿ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ. ಸಾರಾ ಖಾನ್ ಅವರು 'ತುಜ್ಸೆ ಹಿ ರಾಬ್ತಾ' ಹೆಸರಿನ ಟಿವಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಈ ದಿನಗಳಲ್ಲಿ ಅವರು ಕಂಗನಾ ರಣಾವತ್‌ ಅವರ ಟಿವಿ ರಿಯಾಲಿಟಿ ಶೋ ಲಾಕ್ ಅಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Kirron Kher to Shweta Tiwari these 9 celebs worked in Pakistani movie and show

‘ಕುಸುಮ್’ ಧಾರಾವಾಹಿಯ ಮೂಲಕ ಭಾರತದ ಪ್ರತಿ ಮನೆಯಲ್ಲೂ ಫೇಮಸ್ ಆಗಿದ್ದ ನೌಶೀನ್ ಸರ್ದಾರ್ ಅಲಿ ಪಾಕಿಸ್ತಾನಿ ಜನರ ಮನ ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಅವರು ಪಾಕಿಸ್ತಾನಿ ಚಲನಚಿತ್ರ ಮೈ ಏಕ್ ದಿನ್ ಲೌಟ್ ಕೆ ಆವುಂಗಾದಲ್ಲಿ ಕಾಣಿಸಿಕೊಂಡಿದ್ದಾರೆ.

Kirron Kher to Shweta Tiwari these 9 celebs worked in Pakistani movie and show

'ಬಿಗ್ ಬಾಸ್' ಮತ್ತು 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಯಂತಹ ಶೋಗಳಲ್ಲಿ ಕೆಲಸ ಮಾಡಿದ ನಟ ಆಕಾಶದೀಪ್ ಸೆಹಗಲ್ ಪಾಕಿಸ್ತಾನದಲ್ಲೂ ಕೆಲಸ ಮಾಡಿದ್ದಾರೆ. ಅವರು ಪಾಕಿಸ್ತಾನಿ ಸಿನಿಮಾ 'ಸುಲ್ತಾನೇಟ್'ನಲ್ಲಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.

Kirron Kher to Shweta Tiwari these 9 celebs worked in Pakistani movie and show

ಹಿಂದಿ  'ಜಮೈ ರಾಜಾ' ಧಾರಾವಾಹಿ ಖ್ಯಾತಿಯ ಅಂಚಿತ್ ಕೌರ್ ಹೆಸರೂ ಈ ಪಟ್ಟಿಯಲ್ಲಿ ಸೇರಿದೆ. ‘ಪಿಯಾ ಕಾ ಘರ್’ ಹೆಸರಿನ ಪಾಕಿಸ್ತಾನಿ ಧಾರಾವಾಹಿಯಲ್ಲಿ ನಟಿಸಿದಿದ್ದಾರೆ. ಈ ಧಾರಾವಾಹಿ ಮೂಲಕ ಅಂಚಿತ್ ಕೌರ್ ಪಾಕಿಸ್ತಾನದ ಪ್ರತಿ ಮನೆಯನ್ನು ತಲುಪಿದ್ದರು.

Latest Videos

click me!