ಚಂಡೀಗಡದ ಭಾರತೀಯ ಜನತಾ ಪಕ್ಷದ ಸಂಸದೆ ಮತ್ತು ಖ್ಯಾತ ನಟಿ ಕಿರಣ್ ಖೇರ್ ಅವರು ಮಲ್ಟಿಪಲ್ ಮೈಲೋಮಾದಿಂದ ಬಳಲುತ್ತಿದ್ದಾರೆ.
ಇದು ಒಂದು ರೀತಿಯ ರಕ್ತ ಕ್ಯಾನ್ಸರ್ ಆಗಿದ್ದು, ಮತ್ತು ಪ್ರಸ್ತುತ ಮುಂಬೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಂಡೀಗಡ ಬಿಜೆಪಿ ಅಧ್ಯಕ್ಷ ಮತ್ತು ಕಿರಣ್ ಅವರ ಸಹೋದ್ಯೋಗಿ ಅರುಣ್ ಸೂದ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
68 ವರ್ಷದ ಬಾಲಿವುಡ್ ನಟಿ-ರಾಜಕಾರಣಿ ಕಳೆದ ವರ್ಷ ಈ ಕಾಯಿಲೆಗೆ ಚಿಕಿತ್ಸೆ ಪ್ರಾರಂಭಿಸಿದ ನಂತರ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಸೂದ್ ಹೇಳಿದ್ದಾರೆ.
ಸುದ್ದಿ ಖಚಿತಪಡಿಸಲು ಕಿರಣ್ ಖೇರ್ ಅವರ ಪತಿ ಅನುಪಮ್ ಖೇರ್ ಕೂಡ ಟ್ವೀಟ್ ಮಾಡಿದ್ದಾರೆ.
ವೆಬ್‌ನಲ್ಲಿ ಹರಿದಾಡುತ್ತಿರುವ ಎಲ್ಲಾ ವದಂತಿಗಳಿಗೆ ಅಂತ್ಯ ಹಾಡಿದ ಅನುಪಮ್ ಖೇರ್ ಟ್ವಿಟರ್‌ನಲ್ಲಿ ಕಿರಣ್ ಖೇರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾಋಎ ಎಂದು ದೃಢಪಡಿಸಿದ ಟ್ವೀಟ್ ಮಾಡಿದ್ದಾರೆ.
ಅವಳು ಎಲ್ಲ ಹೃದಯದಲ್ಲಿದ್ದಾಳೆ. ಅವಳನ್ನು ಪ್ರೀತಿಸುವ ಅನೇಕ ಜನರನ್ನು ಹೊಂದಿದ್ದಾಳೆ. ನಿಮ್ಮ ಪ್ರೀತಿಯನ್ನು ಅವಳಿಗೆ ಕಳುಹಿಸುತ್ತಾ ಇರಿ. ಅವಳು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾಳೆ. ಬೆಂಬಲ ಮತ್ತು ಪ್ರೀತಿಗಾಗಿ ಎಲ್ಲರಿಗೂ ಧನ್ಯವಾದಗಳು. ಅನುಪಮ್ ಮತ್ತು ಸಿಕಂದರ್ (ಸಿಕ್), ಎಂದು ಟ್ವೀಟ್ ಮಾಡಿದ್ದಾರೆ.
ಕಿರಣ್ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗದಿದ್ದರೂ, ನಿಯಮಿತ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ ಎಂದು ಅರುಣ್ ಸೂದ್ ಹೇಳಿದ್ದಾರೆ.