ಬಿ-ಟೌನ್‌ನ ಫೇಮಸ್ ದಂಪತಿಗಳಲ್ಲಿಅನುಪಮ್ ಖೇರ್ ಮತ್ತು ಕಿರಣ್ ಖೇರ್ ಒಬ್ಬರು. ಕಾಶ್ಮೀರಕ್ಕೆ ಸೇರಿದ ಅನುಪಮ್ ಖೇರ್ ಅವರನ್ನು ಭೇಟಿಯಾಗಿ ಕಿರಣ್ ಮದುವೆಯಾದ ಕಥೆ ಬಹಳ ಇಂಟರೆಸ್ಟಿಂಗ್ ಆಗಿದೆ.
ಥೇಯಟರ್ ಗ್ರೂಪ್‌ನಲ್ಲಿದ್ದ ಇಬ್ಬರೂ ಚಂಡೀಗಡದಲ್ಲಿ ಭೇಟಿಯಾದರು ಮತ್ತು ಉತ್ತಮ ಸ್ನೇಹಿತರಾದರು. ಸಿನಿಮಾದಲ್ಲಿ ಕೆಲಸ ಮಾಡಲು ಕಿರಣ್ 1980ರಲ್ಲಿ ಮುಂಬೈ ತಲುಪಿದರು.
ಆ ಸಮಯದಲ್ಲಿ ಕಿರಣ್ ಒಬ್ಬ ದೊಡ್ಡ ಉದ್ಯಮಿ ಗೌತಮ್ ಬೆರ್ರಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ವರ್ಷದ ನಂತರ ಕಿರಣ್ ಮಗ ಸಿಕಂದರ್‌ಗೆ ಜನ್ಮ ನೀಡಿದರು. ನಾಲ್ಕೈದು ವರ್ಷಗಳ ನಂತರ, ಕಿರಣ್-ಗೌತಮ್ ಅವರ ಮದುವೆಯಲ್ಲಿ ಬಿರುಕು ಬಿಡಲು ಶುರುವಾಯಿತು.ಆಗ ಮತ್ತೆ ಕಿರಣ್ ರಂಗಭೂಮಿಯಲ್ಲಿ ಸಕ್ರಿಯರಾದರು.
ಕಿರಣ್ ಮತ್ತು ಅನುಪಮ್ ಅವರು ನಾದಿರಾ ಬಬ್ಬರ್ ನಾಟಕಕ್ಕಾಗಿ ಕೋಲ್ಕತ್ತಾಗೆ ಹೋದಾಗ ಮತ್ತೆ ಇಬ್ಬರೂ ಭೇಟಿಯಾದರು. ನಾನು ಅನುಪಮ್ ಅವರನ್ನು ಮತ್ತೆ ಭೇಟಿಯಾದಾಗ, ಅವರು ಸಂಪೂರ್ಣವಾಗಿ ಬದಲಾಗಿರುವಂತೆ ಕಂಡರು. ತಲೆ ಬೋಳಿಸಿಕೊಂಡಿದ್ದರು ಎಂದು ಕಿರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ನಾಟಕ ಮುಗಿದ ನಂತರ ಅನುಪಮ್ ಅವರಿಗೆ ಬೈ ಹೇಳಲು ಕಿರಣ್ ಕೋಣೆಗೆ ಹೋಗಿ ಹಿಂದಿರುಗಿ ಬರುವಾಗ, ಅವರಿಬ್ಬರ ನಡುವೆ ಇರುವ ಭಾವನೆಯನ್ನು ಇಬ್ಬರೂ ತಕ್ಷಣ ಅರಿತುಕೊಂಡರು. ಕೋಲ್ಕತ್ತಾದಲ್ಲಿ ಭೇಟಿಯಾದ ನಂತರ ಕಿರಣ್ ಮತ್ತು ಅನುಪಮ್ ಪರಸ್ಪರ ಪ್ರೀತಿಸಲು ಆರಂಭಿಸಿದರು.
ಅನುಪಮ್ ಅವರ ಪ್ರೀತಿಯನ್ನು ಮೊದಲು ವ್ಯಕ್ತಪಡಿಸಿದರು. ಒಂದು ದಿನ ಅನುಪಮ್, ಕಿರಣ್ ಮನೆಗೆ ಹೋಗಿ,ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ ಎಂದು ನನಗೆ ಅನಿಸುತ್ತದೆ ಎಂದು ಹೇಳಿದರು
ಕಿರಣ್ ಸಂದರ್ಶನವೊಂದರಲ್ಲಿ ಅನುಪಮ್ ಅವರ ಮಾತನ್ನು ತಮಾಷೆ ಎಂದುಕೊಂಡಿದ್ದೆ. ಅವನು ಇತರೆ ಹುಡುಗಿಯರಿಗೆ ಮಾಡಿದಂತೆ, ನನಗೂ ಮಾಡುತ್ತಿದ್ದಾನೆ ಎಂದು ಭಾವಿಸಿದ್ದೆ. ಆದರೆ ನಂತರ ಅವನು ಸೀರಿಯಸ್ ಆಗಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಂಡೆ,ಎಂದು ಇಂಟರ್‌ವ್ಯೂವ್‌ನಲ್ಲಿ ಹೇಳಿದ್ದಾರೆ ಕಿರಣ್ ಖೇರ್.
ಇದರ ನಂತರ, ಅವರ ಭೇಟಿ ಹೆಚ್ಚಾಗತೊಡಗಿತು. ಈ ಸಮಯದಲ್ಲಿ, ಇಬ್ಬರೂ ತಮ್ಮ ವೈಯಕ್ತಿಕ ಜೀವನದಸಮಸ್ಯೆಗಳನ್ನು ಹಂಚಿಕೊಂಡರು. ಇಬ್ಬರೂ ತಮ್ಮ ಪಾರ್ಟನರ್‌ಗಳಿಂದ ಡಿವೋರ್ಸ್ ಪಡೆದು 1985ರಲ್ಲಿ ವಿವಾಹವಾದರು. ಅನುಪಮ್ ಕಿರಣ್ ಅವರ ಮಗ ಸಿಕಂದರ್ ಅವರನ್ನು ದತ್ತು ಪಡೆದರು.
1983ರಲ್ಲಿ ಪಂಜಾಬಿ ಚಿತ್ರ ಆಸ್ರಾ ಪ್ಯಾರ್ ಡಾ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿದ ಕಿರಣ್ 1996ರಲ್ಲಿ ಶ್ಯಾಮ್ ಬೆನೆಗಲ್ ಅವರ ಸರ್ದಾರಿ ಬೇಗಂ ಚಿತ್ರದಲ್ಲಿ ಕಾಣಿಸಿಕೊಂಡರು.
ದೇವದಾಸ್, ಮೇನ್ ಹೂ ನಾ, ಹಮ್ ತುಮ್, ವೀರ್-ಜಾರಾ, ಮಂಗಲ್ ಪಾಂಡೆ, ರಂಗ್ ದೇ ಬಸಂತಿ, ಬ್ಯೂಟಿಫುಲ್, ದೋಸ್ತಾನಾ, ಫನಾ, ಓಂ ಶಾಂತಿ ಓಂ ಮುಂತಾದವುಗಳು ಕಿರಣ್ ಖೇರ್ ನಟಿಸಿರುವ ಪ್ರಮುಖ ಸಿನಿಮಾಗಳು.