ಸ್ಯಾಂಡಲ್‌ವುಡ್‌ನ ನಟಿ ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾಗಳ ನಂತರ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ.
ಈ ದಿನಗಳಲ್ಲಿ ಹಿಂದಿಯಲ್ಲೂ ರಶ್ಮಿಕಾ ಮಂದಣ್ಣರ ಬೇಡಿಕೆ ಹೆಚ್ಚುತ್ತಿದೆ.
ಆದರೆ ಅವರು ಶಾಹಿದ್ ಕಪೂರ್ ಅವರ ಜರ್ಸಿ ಸಿನಿಮಾವನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ನಿಮಗೆ ತಿಳಿದಿದೆಯೇ?
ಸದ್ಯಕ್ಕೆ ರಶ್ಮಿಕಾ ಸಿದ್ಧಾರ್ಥ್ ಮಲ್ಹೋತ್ರಾರ ಮಿಷನ್ ಮಜ್ನು ಮತ್ತು ಅಮಿತಾಬ್ ಬಚ್ಚನ್ ಜೊತೆ ಗುಡ್‌ಬಾಯ್ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
ಅದಕ್ಕೂ ಮೊದಲು, ಶಾಹಿದ್ ಕಪೂರ್ ಅವರ ಜೊತೆ ಜರ್ಸಿ ಸಿನಿಮಾ ಆಫರ್ ಕಿರಿಕ್ ಚೆಲುವೆಗೆ ನೀಡಲಾಯಿತು. ನಟಿ ಚಿತ್ರದ ಭಾಗವಾಗಬೇಕಿತ್ತು. ಆದರೆ ಹಿಂದೆ ಸರಿದರು ಎಂದು ಹೇಳಲಾಗಿದೆ. ಈಗ ಮೃಣಾಲ್ ಠಾಕೂರ್ ಆ ಪಾತ್ರವನ್ನು ಪಡೆದಿದ್ದಾರೆ.
ತೆಲುಗುವಿನಲ್ಲಿ ಶ್ರದ್ಧಾ ಶ್ರೀನಾಥ್ ನಿರ್ವಹಿಸಿದ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಭಾವಿಸಿ ರಶ್ಮಿಕಾ ಸ್ವತಃ ಜರ್ಸಿ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದರು ಎಂದು ವರದಿಗಳು ಹೇಳಿವೆ.
ಗೌತಮ್ ಟಿನ್ನನುರಿ ಅವರು ಜರ್ಸಿಯನ್ನು ನಿರ್ದೇಶಿಸಲಿದ್ದಾರೆ. ಹಿಂದಿಯಲ್ಲೂ ಸಹ ಪಂಕಜ್ ಕಪೂರ್ ಪ್ರಮುಖ ಪಾತ್ರ ಹೊಂದಿದ್ದಾರೆ.
ಈ ಚಿತ್ರ ಸಿಕ್ಕಾಪಟ್ಟೆ ಭರವಸೆ ಸೃಷ್ಟಿಸಿದೆ.
ಓರಿಜಿನಲ್ ತೆಲುಗು ಚಿತ್ರದಲ್ಲಿ ನಾನಿ ಮತ್ತು ಶ್ರದ್ಧಾ ಶ್ರೀನಾಥ್ ಲೀಡ್ ರೋಲ್‌ನಲ್ಲಿದ್ದರು.
19 ಏಪ್ರಿಲ್ 2019ರಂದು ಬಿಡುಗಡೆಯಾದ ಜರ್ಸಿ ಸಿನಿಮಾ ಎರಡು ನ್ಯಾಷನಲ್ ಆವಾರ್ಡ್‌ಪಡೆದಿವೆ. ತೆಲುಗಿನ ಅತ್ಯುತ್ತಮ ಚಲನಚಿತ್ರ ಮತ್ತು ಬೆಸ್ಟ್ ಎಡಿಟಿಂಗ್ ಆವಾರ್ಡ್ ಪಡೆದಿದೆ.