ವಿದೇಶದ ಸೆನ್ಸಾರ್ ಮಂಡಳಿ ಸದಸ್ಯ ಎಂದು ಹೇಳಿಕೊಳ್ಳುವ ಉಮೈರ್ ಸಂದು ಕೂಡ ತಮ್ಮ ರಿವ್ಯೂನಲ್ಲಿ ಹೈಪ್ ಹೆಚ್ಚಿಸಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳಿಗೆ ನೆಗೆಟಿವ್ ರಿವ್ಯೂ ಕೊಡುವ ಅವರು ಈ ಚಿತ್ರಕ್ಕೆ ಮೂರು ರೇಟಿಂಗ್ ಕೊಟ್ಟಿದ್ದಾರೆ. ವೈಫಲ್ಯಗಳ ನಂತರ ವಿಜಯ್ ದೇವರಕೊಂಡ ಭರ್ಜರಿ ಕಮ್‌ಬ್ಯಾಕ್ ಕೊಟ್ಟಿದ್ದಾರೆ ಅಂತ ಹೇಳಿದ್ದಾರೆ. ಇದು ವಿಜಯ್ ಒನ್ ಮ್ಯಾನ್ ಶೋ, ಆಕ್ಷನ್ ದೃಶ್ಯಗಳಲ್ಲಿ ಅದ್ಭುತವಾಗಿದೆ, ಪ್ರೇಕ್ಷಕರನ್ನು ಕಟ್ಟಿ ಹಾಕುತ್ತಾರೆ ಅಂತ ಹೇಳಿದ್ದಾರೆ. ಕಥೆ, ಚಿತ್ರಕಥೆ ಚೆನ್ನಾಗಿದೆ, ಒಟ್ಟಾರೆಯಾಗಿ ಒಳ್ಳೆಯ ಮಾಸ್ ಎಂಟರ್‌ಟೈನರ್ ಅಂತ ಹೇಳಿದ್ದಾರೆ. 'ಕಿಂಗ್‌ಡಮ್'ನಿಂದ ವಿಜಯ್ ದೊಡ್ಡ ಗೆಲುವು ಸಾಧಿಸಲಿದ್ದಾರೆ ಅಂತ ಮಾಹಿತಿ ಇದೆ.