ಘಾಟಿ ಚಿತ್ರವನ್ನು ಕೃಷ್ ಜಾಗರ್ಲಮೂಡಿ ನಿರ್ದೇಶಿಸಿದ್ದಾರೆ. ಉತ್ತರಾಂಧ್ರದಲ್ಲಿ ಗಾಂಜಾ ಕೃಷಿ ಹಿನ್ನೆಲೆಯಲ್ಲಿ ನಿರ್ಮಾಣವಾದ ಈ ಪ್ಯಾನ್ ಇಂಡಿಯಾ ಸಿನಿಮಾ, ಅನುಷ್ಕಾ ವೃತ್ತಿಜೀವನದಲ್ಲಿ ಇದುವರೆಗೆ ಮಾಡದ ವಿಭಿನ್ನ ಚಿತ್ರವಾಗಲಿದೆ. ಈಗಾಗಲೇ ಈ ಚಿತ್ರದಿಂದ ಬಿಡುಗಡೆಯಾದ ಟೀಸರ್, ಪೋಸ್ಟರ್‌ಗಳಲ್ಲಿ ಅನುಷ್ಕಾ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿರುವುದು ಮಾತ್ರವಲ್ಲ, ಅನುಷ್ಕಾ ಮುಂದಿನ ಯೋಜನೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿರುವುದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಹಿಂದೆ ಅರುಂಧತಿ, ಬಾಹುಬಲಿ ಮುಂತಾದ ಚಿತ್ರಗಳಲ್ಲಿ ಪ್ರಬಲ ಪಾತ್ರಗಳಲ್ಲಿ ಕಾಣಿಸಿಕೊಂಡ ಈ ಸ್ಟಾರ್ ನಟಿ ನಂತರದ ಚಿತ್ರಗಳು ಹೆಚ್ಚು ಗುರುತಿಸಿಕೊಂಡಿಲ್ಲ.