ಕಮಲ್, ಅಕ್ಷಯ್, ಮೊಹನ್‌ಲಾಲ್, ಆಮೀರ್, ಕರಣ್; ಅದ್ದೂರಿ ಮದ್ವೆಲಿ ಸೌತ್-ಬಾಲಿವುಡ್ ಸ್ಟಾರ್‌ಗಳ ಸಮಾಗಮ

First Published Feb 11, 2023, 2:47 PM IST

ಜೈಪುರದ ಅದ್ದೂರಿ ಮದುವೆ ಸಮಾರಂಭದಲ್ಲಿ ಬಾಲಿವುಡ್ ಮತ್ತು ಸೌತ್‌ನ ಅನೇಕ ಸ್ಟಾರ್ ಕಲಾವಿದರು ಭಾಗಿಯಾಗಿದ್ದರು. ಕಮಲ್ ಹಾಸನ್, ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಸರೇದಂತೆ ಅನೇಕರು ಭಾಗಿಯಾಗಿದ್ದಾರೆ. 

ಸೌತ್ ಮತ್ತು ಬಾಲಿವುಡ್ ಎನ್ನುವ ಚರ್ಚೆ ಆಗಾಗ ಕೇಳಿ ಬರುತ್ತಿರುತ್ತದೆ.  ಬಾಲಿವುಡ್ ಸ್ಟಾರ್ಸ್, ಸೌತ್ ಸ್ಟಾರ್‌ಗಳ ಜೊತೆ ಹೆಚ್ಚು ಬಾಂಧವ್ಯ ಹೊಂದಿಲ್ಲ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೀಗ ಕಾಲ ಬದಲಾಗಿದೆ. ಸೌತ್ ಮತ್ತು ಬಾಲಿವುಡ್ ಮಂದಿ ಒಟ್ಟಿಗೆ ಸಮಾರಂಭದಲ್ಲಿ ಭಾಗಿಯಾಗಿ ಸಂಭ್ರಮಿಸುವ ಕಾಲ ಬಂದಿದೆ. 

ಇತ್ತೀಚಿಗೆ ಅನೇಕ ಸ್ಟಾರ್ ಕಲಾವಿದರು ಜೈಪುರದ ಅದ್ದೂರಿ ಮದುವೆಯಲ್ಲಿ ಭಾಗಿಯಾಗಿದ್ದರು. ಮದುವೆಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಬಾಲಿವುಡ್ ಮತ್ತು ಸೌತ್ ಸ್ಟಾರ್ಸ್ ಯಾರ ಮದುವೆ ಸಮಾರಂಭದ, ಎಲ್ಲಿ ಹೀಗೆ ಒಟ್ಟಿಗೆ ಸೇರಿದ್ದಾರೆ ಎಂದು ಯೋಚಿಸುತ್ತಿದ್ದಾರಾ? ಎಲ್ಲರೂ ದಿ ವಾಲ್ಟ್ ಡಿಸ್ನಿ ಕಂಪನಿ ಇಂಡಿಯಾ ಮತ್ತು ಸ್ಟಾರ್ ಇಂಡಿಯಾ ಅಧ್ಯಕ್ಷ ಕೆ ಮಾಧವನ್ ಅವರ ಪುತ್ರನ ಮದುವೆಯಲ್ಲಿ. 

Latest Videos


ಕೆ.ಮಾಧವನ್ ಪುತ್ರನ ಮದುಗೆ ದೊಡ್ಡ ದೊಡ್ಡ ಸ್ಟಾರ್ಸ್ ಭಾಗಿಯಾಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಬಾಲಿವುಡ್ ಸ್ಟಾರ್ ಗಳಾದ ಆಮೀರ್ ಖಾನ್, ಅಕ್ಷಯ್ ಕುಮಾರ್, ಕರಣ್ ಜೋಹರ್ ಹಾಗೂ ಸೌತ್ ಸ್ಟಾರ್ ಕಮಲ್ ಹಾಸನ್, ಮೋಹನ್ ಲಾಲ್, ಪೃಥ್ವಿರಾಜ್ ಸುಕುಮಾರ್, ದಿಲ್ ರಾಜು ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

ಘಟಾನುಘಟಿ ಸ್ಟಾರ್ ಕಲಾವಿದರೆಲ್ಲರೂ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಅಂದಹಾಗೆ ಎಲ್ಲಾ ಸ್ಟಾರ್ಸ್ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಗ್ರ್ಯಾಂಡ್ ಶೇರ್ವಾನಿ ಧರಿಸಿ ಕಾಣಿಸಿಕೊಂಡಿದ್ದಾರೆ. 
 

ಅಕ್ಷಯ್ ಕುಮಾರ್, ಮೋಹನ್ ಲಾಲ್ ಎಲ್ಲರೂ ಮಸ್ತ್ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಮೋಹನ್ ಲಾಲ್ ಜೊತೆ ಡಾನ್ಸ್ ಮಾಡಿದ್ದ ವಿಡಿಯೋವನ್ನು ಅಕ್ಷಯ್ ಕುಮಾರ್ ಹಂಚಿಕೊಂಡಿದ್ದರು. ಅದ್ಭುತ ಕ್ಷಣ ಎಂದು ಹೇಳಿದ್ದರು.

ಅಕ್ಷಯ್ ಕುಮಾರ್ ವಿಡಿಯೋ ಶೇರ್ ಮಾಡಿ, 'ನಿಮ್ಮ ಜೊತೆಗಿನ ಈ ಡಾನ್ಸ್ ಶಾಶ್ವತವಾಗಿ ನೆನಪಿನಲ್ಲಿರುತ್ತದೆ ಮೋಹನ್ ಲಾಲ್ ಸರ್. ಇದು ಸಂಪೂರ್ಣವಾಗಿ ಸ್ಮರಣೀಯ ಕ್ಷಣವಾಗಿದೆ' ಎಂದು ಹೇಳಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

ಕಮಲ್ ಹಾಸನ್ ಮತ್ತು ಅಕ್ಷಯ್ ಕುಮಾರ್ ಪಕ್ಕದಲ್ಲಿ ಕುಳಿತಿದ್ದಾರೆ. ಒಂದಿಷ್ಟು ಸಮಯ ಮಾತುಕತೆ ನಡೆಸಿದ್ದಾರೆ. ಇನ್ನೂ ಆಮೀರ್ ಖಾನ್ ವಾಕಿಂಗ್ ಸ್ಟಿಕ್ ಹಿಡಿದು ಮದುವೆಗೆ ಎಂಟ್ರಿ ಕೊಟ್ಟಿದ್ದಾರೆ. ಆಮೀರ್ ಖಾನ್ ಅವರಿಗೆ ಏನಾಗಿದೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. 

click me!