ನಟಿ ದಿಯಾ ಮಿರ್ಝಾ ಮತ್ತು ಉದ್ಯಮಿ ವೈಭವ್ ರೇಖಿ ವಿವಾಹ ಹಲವು ಕಾರಣದಿಂದ ಟ್ರೆಂಡಿಂಗ್ನಲ್ಲಿದೆ.
undefined
ಮುಂಬೈನಲ್ಲಿ ಖಾಸಗಿ ಸಮಾರಂಭದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
undefined
ಇವರ ವಿವಾಹ ವಿಡಿಯೋದಲ್ಲಿ ಪುಟ್ಟ ಬಾಲಕಿಯೊಬ್ಬಳನ್ನು ನೋಡಿದ್ದೀರಾ..? ಈಕೆ ವೈಭವ್ ರೇಖಿಯ ಮಗಳು ಸಮೈರಾ ರೇಖಿ.
undefined
ಆಕೆಯ ದಿಯಾ ಮಿರ್ಝಾ ಜೊತೆ ಪಾಪ್ಪಾಸ್ ಗರ್ಲ್ ಎನ್ನುವ ಫಲಕ ಹಿಡಿದುಕೊಂಡು ಹೆಜ್ಜೆ ಹಾಕಿದ್ದಳು.
undefined
ಇದೀಗ ವೈಭವ್ ರೇಖಿಯ ಮೊದಲ ಪತ್ನಿ ಸುನೈನಾ ರೇಖಿ ತನ್ನ ಪತಿ ಮತ್ತು ದಿಯಾ ಮಿರ್ಝಾ ಮದುವೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
undefined
ಇವರ ಮದುವೆ ಸಂದರ್ಭ ತಮಗೆ ಬಂದ ಮೆಸೇಜ್ಗಳಿಗೆ ಧನ್ಯವಾದ ತಿಳಿಸಿ ತಾನು ಹಾಗು ಮಗಳು ಸುನೈರಾ ಖುಷಿಯಾಗಿರುವುದಾಗಿ ಹೇಳಿದ್ದಾರೆ. ಸುನೈರಾ ಹೆಚ್ಚು ಖುಷಿಯಾಗಿದ್ದಳು ಎನ್ನುವುದನ್ನು ತಿಳಿಸಿದ್ದಾರೆ.
undefined
ತನ್ನ ಮಗಳಿಗೆ ಇನ್ನಷ್ಟು ದೊಡ್ಡ ಫ್ಯಾಮಿಲಿ ಸಿಕ್ಕಿರುವ ಖುಷಿ ನನಗೆ ಇದೆ ಎಂದಿದ್ದಾರೆ ಆಕೆ. ಸಮೈರಾಳ ತಂದೆ ಮತ್ತು ದಿಯಾ ಮದುವೆ ಬಗ್ಗೆ ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ ಆಕೆ.
undefined
ನಮಗೆ ಬಾಂಬೆಯಲ್ಲಿ ಯಾವುದೇ ಫ್ಯಾಮಿಲಿ ಇಲ್ಲ. ಹಾಗಾಗಿ ಸಮೈರಾಗೆ ದೊಡ್ಡ ಫ್ಯಾಮಿಲಿ ಸಿಕ್ಕಿದೆ. ಮಕ್ಕಳು ತಂದೆ ತಾಯಿಯ ನಡುವಿನ ಪ್ರೀತಿ ನೋಡಿ ಬೆಳೆಯಬೇಕು. ಇದು ತನ್ನ ಮಗಳಿಗೆ ಸಾಧ್ಯವಾಗಲಿದ ಎಂದಿದ್ದಾರೆ.
undefined
ದಿಯಾ ಹಾಗೂ ವೈಭವ್ ಮದುವೆಯಲ್ಲಿ ಆಪ್ತರಷ್ಟೇ ಭಾಗಿಯಾಗಿದ್ದರು. ದಿಯಾ ತಮ್ಮ ವಿವಾಹದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
undefined