ನಟಿ ಶಹಾನಾ ನಿಗೂಢ ಸಾವಿನ ಬಳಿಕ ವೈರಲ್ ಆದ ಫೋಟೋಗಳು

Published : May 14, 2022, 02:03 PM ISTUpdated : May 14, 2022, 02:46 PM IST

ಕಾಸರಗೋಡು ಮೂಲದ ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢ ಸಾವು ಸಂಚಲನ ಮೂಡಿಸಿದೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಯಿಕ್ಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಮೇ 13ರಂದು ಶವವಾಗಿ ಪತ್ತೆಯಾಗಿದ್ದರು(Found Dead in her Kozhikode flat). ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ.  

PREV
18
ನಟಿ ಶಹಾನಾ ನಿಗೂಢ ಸಾವಿನ ಬಳಿಕ ವೈರಲ್ ಆದ ಫೋಟೋಗಳು

ಕಾಸರಗೋಡು ಮೂಲದ ಖ್ಯಾತ ರೂಪದರ್ಶಿ ಮತ್ತು ನಟಿ ಶಹಾನಾ(Shahana) ನಿಗೂಢ ಸಾವು ಸಂಚಲನ ಮೂಡಿಸಿದೆ. ಕೇರಳ ಮೂಲದ 20 ವರ್ಷದ ನಟಿ ಶಹಾನಾ ಕೋಯಿಕ್ಕೋಡ್ ನಲ್ಲಿರುವ ತನ್ನ ಫ್ಲಾಟ್ ನಲ್ಲಿ ಮೇ 13ರಂದು ಶವವಾಗಿ ಪತ್ತೆಯಾಗಿದ್ದರು(Found Dead in her Kozhikode flat). ಶಹಾನಾ ಕಾಸರಗೋಡಿನ ಚೆರುವತ್ತೂರು ನಿವಾಸಿ ಅಲ್ತಾಫ್ ಎಂಬುವವರ ಪುತ್ರಿ.

 

28

ರಾತ್ರಿ 11 ಗಂಟೆಗೆ ಪರಂಬಿಲ್ ಬಜಾರ್ ನಲ್ಲಿರುವ ಬಾಡಿಗೆ ಫ್ಲಾಟ್ ನಲ್ಲಿ ಶಹಾನಾ ಶವ ಕಿಟಕಿಯ ಗ್ರಿಲ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ.

 

38

ಶಹಾನಾ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದರು. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.

 

48

ಚೇವಾಯೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇದು ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದಾರೆ. ಸದ್ಯ ಶಹಾನಾ ಪತಿ ಪರಂಬಿಲ್ ಬಜಾರ್ ಮೂಲದ ಸಾಜದ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

58

ಒಂದೂವರೆ ವರ್ಷದ ಹಿಂದೆ ಸಾಜದ್ ಮತ್ತು ಶಹಾನಾ ವಿವಾಹವಾಗಿದ್ದರು. ಇಬ್ಬರ ನಡುವೆ ಆಗಾಗ ನಡೆಯುತ್ತಿತ್ತು ಎನ್ನಲಾಗಿದ್ದು ಕೌಂಟುಬಿಕ ದೌರ್ಜನ್ಯ ಹಾಗೂ ಕೊಲೆಯ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

 

68

ಶಹಾನಾ ಕುಟುಂಬದವರು ಇದು ಕೊಲೆ ಎಂದು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಹಾನಾ ತಾಯಿ ನನ್ನ ಮಗಳು ಯಾವಾಗಲೂ ತನ್ನ ಪತಿಯಿಂದ ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿದ್ದರು ಎಂದು ದೂರುತ್ತಿದ್ದಳು. ಅವಳು ಎಂದಿಗೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಆಕೆಯ ಪತಿ ಕುಡಿದು ಹಿಂಸೆ ನೀಡುತ್ತಿದ್ದ. ಆತನ ಕುಟುಂಬದವರು ಸಹ ಹಿಂಸೆ ಮಾಡುತ್ತಿದ್ದರು ಎಂದು ಆರೋಪಿಸಿದ್ದಾರೆ.

 

78

ಅಲ್ಲದೆ ಇತ್ತೀಚಿಗಷ್ಟೆ ಶಹಾನಾ ತನ್ನ 20ನೇ ವರ್ಷದ ಹುಟ್ಟುಹಬ್ಬಕ್ಕೆ ಕುಟುಂಬದವರಿಗೆ ಆಹ್ವಾನ ನೀಡಿದ್ದರು. ಈ ಬಗ್ಗೆ ಶಹಾನಾ ತಾಯಿ ಬಹಿರಂಗ ಪಡಿಸಿದ್ದಾರೆ.

 

88

ಸದ್ಯ ಶಾಹಾನಾ ಪತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದುಇದು  ಕೊಲೆಯೋ ಅಥವಾ ಆತ್ಮಹತ್ಯೆಯೊ ಎನ್ನುವ ತನಿಖೆ ನಡೆಯುತ್ತಿದೆ. ಶಹಾನಾ ರೂಪದರ್ಶಿಯಾಗಿ ಖ್ಯಾತಿ ಗಳಿಸಿದ್ದರು. ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಹಾನಾ ದೊಡ್ಡ ನಟಿಯಾಗುವ ಕನಸು ಕಂಡದ್ದರು. ಆದರೆ ಕನಸು ನನಸಾಗುವ ಮೊದಲೇ ಸಹಾನಾ ಇಹಲೋಕ ತ್ಯಜಿಸಿದ್ದಾರೆ.

click me!

Recommended Stories