ಕತ್ರೀನಾ ಕಳುಹಿಸಿದ್ದ ಬ್ರೇಕಪ್‌ ಮೆಸೇಜ್‌ಗೆ ಸಿಟ್ಟಾದ ಸಲ್ಮಾನ್‌ ಮಾಡಿದ್ದೇನು?

First Published | May 25, 2021, 1:55 PM IST

ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್‌ ಖಾನ್‌ ಹಾಗೂ ಕತ್ರಿನಾ ಕೈಫ್ ಆಫೇರ್‌ ಹೊಂದಿದ್ದ ವಿಷಯ ಎಲ್ಲರಿಗೂ ತಿಳಿದೇ ಇದೆ. ಹಾಗೇ ಈಗ ಇಬ್ಬರೂ ಬೇರೆ ಸಹ ಆಗಿದ್ದಾರೆ. ಕತ್ರಿನಾ ಬ್ರೇಕಪ್‌ ಹೇಗೆ ಆನೌನ್ಸ್‌ ಮಾಡಿದರು ಗೊತ್ತಾ? ನಂತರ ಅದಕ್ಕೆ ಸಲ್ಮಾನ್‌ ರಿಯಾಕ್ಷನ್‌ ಹೇಗಿತ್ತು ಎಂಬ ವಿವರ ಇಲ್ಲಿದೆ.

ಬಾಲಿವುಡ್‌ನಲ್ಲಿ ಕತ್ರಿನಾ ಕೈಫ್ ಮತ್ತು ಸಲ್ಮಾನ್ ಖಾನ್ ಅವರ ಸಂಬಂಧದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು.
ಆದರೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಬಹಳ ಹಿಂದೆಯೇ ಬೇರೆಯಾಗಿದ್ದಾರೆಂದು ವರದಿಯಾಗಿದೆ.
Tap to resize

ಸಲ್ಮಾನ್ ಕತ್ರಿನಾರಿಗೆ ವೃತ್ತಿ ಜೀವನದಲ್ಲಿ ಮುಂದುವರಿಯಲು ಸಹಾಯ ಮಾಡಿದರು ಮತ್ತು ನಟಿಯ ಕೆರಿಯರ್‌ನ ಶುರುವಿನಲ್ಲಿಹಲವಾರು ನಿರ್ಮಾಪಕರು ಮತ್ತು ನಿರ್ದೇಶಕರಿಗೆಶಿಫಾರಸು ಮಾಡಿದ್ದರು ಸಲ್ಮಾನ್‌.
ಒಂದೆರಡು ವರ್ಷಗಳ ಕಾಲ ರಿಲೆಷನ್‌ಶಿಪ್‌ನಲ್ಲಿದ್ದ ಈ ಕಪಲ್‌ ಮದುವೆಯಾಗಬಹುದೆಂದು ಫ್ಯಾನ್ಸ್‌ ಭಾವಿಸಿದ್ದರು. ಆದರೆ ಸ್ವಲ್ಪ ದಿನಗಳಲ್ಲಿಯೇಅವರ ಬ್ರೇಕಪ್‌ ಸುದ್ದಿ ಹರಿದಾಡಲು ಪ್ರಾರಂಭಿಸಿತು.
ಇಬ್ಬರು ಬೇರೆಯಾದರೂ ಸಾಕಷ್ಟು ಕ್ಲೋಸ್‌ ಆಗಿದ್ದರು.ಸಲ್ಮಾನ್ ಮೂವ್‌ ಆನ್‌ ಆಗಲು ತುಂಬಾ ಕಷ್ಟಪಟ್ಟರು ಎಂದು ಹೇಳಲಾಗುತ್ತದೆ.
ಸಲ್ಮಾನ್‌ ಜೊತೆಯ ಸಂಬಂಧವನ್ನು ಕತ್ರಿನಾ ಎಸ್‌ಎಂಎಸ್ ಮೂಲಕ ಕೊನೆಗೊಳಿಸಿದ್ದರು ಎಂದು ನಟಿಯ ಫ್ರೆಂಡ್‌ ಬಹಿರಂಗಪಡಿಸಿದರೆಂಬ ವಿಷಯ ಹಲವಾರು ಮನೋರಂಜನಾ ವೆಬ್‌ಸೈಟ್‌ಗಳಲ್ಲಿ ವರದಿಯಾಗಿದೆ.
'ಇದು ಸಂಭವಿಸಿದಾಗ ಅವಳು ರಣಬೀರ್ ಜೊತೆ ಊಟಿಯಲ್ಲಿ ಶೂಟಿಂಗ್ ಮಾಡುತ್ತಿದ್ದಳು. ವಾಪಸ್ಸು ಮನೆಗೆ ಹಿಂದಿರುಗುವವರೆಗೂ ಕಾಯಲು ಸಹ ಅವಳು ಬಯಸಲಿಲ್ಲ. ತನ್ನ ಕಡೆಯಿಂದ ಸಂಬಂಧ ಮುಗಿದಿದೆ ಎಂದುಸಲ್ಮಾನ್‌ನಿಗೆ ಮೆಸೇಜ್‌ ಕಳುಹಿಸಿದಳು,' ಎಂದು ಕ್ಯಾಟ್‌ನ ಫ್ರೆಂಡ್‌ ಹೇಳಿದ್ದರು.
ಕೋಪಗೊಂಡ ಸಲ್ಮಾನ್‌ ನೇರವಾಗಿ ಸಿನಿಮಾ ಸೆಟ್‌ಗೆ ಹೋಗಲು ನಿರ್ಧರಿಸಿದ್ದರು. ಕತ್ರಿನಾ ಸಲ್ಮಾನ್‌ನನ್ನು ಎದುರಿಸಲು ಹೆದರಿದ್ದರು. ಕುಟುಂಬ ಮತ್ತು ಫ್ರೆಂಡ್ಸ್‌ ಅವರಿಗೆ ಸಲ್ಮಾನ್‌ರನ್ನು ತಡೆದ ಕಾರಣದಿಂದಕತ್ರಿನಾ ಬಚಾವ್‌ ಆದರು.
ಭಾರಿ ಸಂಭಾವನೆಯ ದೊಡ್ಡ ಸಿನಿಮಾಗಳು ಕತ್ರೀನಾ ಕೈಯಲ್ಲಿದ್ದವು.ಕತ್ರಿನಾ ಸಲ್ಮಾನ್‌ ತಮ್ಮವೃತ್ತಿ ಜೀವನವನ್ನು ನಾಶಪಡಿಸುತ್ತಾನೆ ಎಂದು ಹೆದರುತ್ತಿದ್ದಳು,ಎಂದು ಹೇಳಿದ್ದರು ಕತ್ರಿನಾರ ಫ್ರೆಂಡ್‌.
ಆದರೆ ಸಲ್ಮಾನ್ ಖಾನ್ ಅವರ ಕುಟುಂಬದ ಸದಸ್ಯರೊಬ್ಬರು ಕತ್ರಿನಾರಿಗೆ ಚಿಂತಿಸಬೇಕಾಗಿಲ್ಲ ಮತ್ತು ಅವರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಿಲ್ಲ ಎಂದು ಧೈರ್ಯ ಹೇಳಿದ್ದರು ಎನ್ನಲಾಗುತ್ತದೆ.

Latest Videos

click me!