ಟೈಟಾನಿಕ್‌ ನಟಿ ಕೇಟ್‌ ಮುಳುಗಿದ್ದು ಸಮುದ್ರದಲ್ಲಲ್ಲ ಬಾತ್‌ಟಬ್‌‌‌ ಒಳಗೆ!

First Published Oct 5, 2020, 7:31 PM IST

ಹಾಲಿವುಡ್‌ನ ಬ್ಲಾಕ್ಬಸ್ಟರ್ ಟೈಟಾನಿಕ್‌ ಸಿನಿಮಾದಲ್ಲಿ ಫೇಮಸ್‌ ಆದ ನಟಿ ಕೇಟ್ ವಿನ್ಸ್ಲೆಟ್‌ಗೆ 45ರ ಸಂಭ್ರಮ. ಅಕ್ಟೋಬರ್ 5, 1975ರಂದು ಯುನೈಟೆಡ್ ಕಿಂಗ್‌ಡಂನ ರೀಡಿಂಗ್‌ನಲ್ಲಿ ಜನಿಸಿದ ಕೇಟ್ ಮೂರು ಮಕ್ಕಳ ತಾಯಿ. ಮೂರು ಬಾರಿ ಮದುವೆಯಾಗಿದ್ದಾರೆ. 23 ವರ್ಷಗಳ ಹಿಂದೆ ಟೈಟಾನಿಕ್ ಚಿತ್ರ ಕೇಟ್‌ರನ್ನು ರಾತ್ರೋರಾತ್ರಿ ಸ್ಟಾರ್‌ ಮಾಡಿತು. ಈ ಸಿನಿಮಾದ ಬಗ್ಗೆ ಕೆಲವು ಇಂಟರೆಸ್ಟಿಂಗ್‌ facts‌ ಇಲ್ಲಿವೆ.

23 ವರ್ಷಗಳ ಹಿಂದೆ ಟೈಟಾನಿಕ್ ಚಿತ್ರ ಕೇಟ್ ವಿನ್ಸ್ಲೆಟ್‌ನನ್ನು ರಾತ್ರೋರಾತ್ರಿ ಸ್ಟಾರ್‌ ಮಾಡಿತು.
undefined
ನಿರ್ದೇಶಕ ಜೇಮ್ಸ್ ಕ್ಯಾಮರೂನ್‌ರ ಟೈಟಾನಿಕ್‌ ಚಿತ್ರ 70ನೇ ಅಕಾಡೆಮಿ ಆವಾರ್ಡ್‌ಗಳಲ್ಲಿ 14 ನಾಮೀನೇಷನ್‌ ಪಡೆಯಿತು. ಈ ಚಿತ್ರವು ಬೆಸ್ಟ್‌ ಫಿಲ್ಮಂ ಹಾಗೂ ಬೆಸ್ಟ್‌ ಡೈರೆಕ್ಟರ್‌ ಸೇರಿ 11 ಪ್ರಶಸ್ತಿಗಳನ್ನು ಗೆದ್ದಿವೆ.
undefined
23 ವರ್ಷಗಳ ಹಿಂದೆ ಬಿಡುಗಡೆಯಾದ ಹಾಲಿವುಡ್‌ನ ಈ ರೊಮ್ಯಾಂಟಿಕ್ ಸಿನಿಮಾದಲ್ಲಿ ಲಿಯೊನಾರ್ಡೊ ಡಿಕಾಪ್ರಿಯೊ ಕೇಟ್ ಜೊತೆ ಮುಖ್ಯ ಪಾತ್ರದಲ್ಲಿದ್ದರು.
undefined
ಅಂದಹಾಗೆ, ಚಿತ್ರದಲ್ಲಿ ಕೇಟ್ ಮುಳುಗುವ ದೃಶ್ಯವನ್ನು ಸಮುದ್ರದಲ್ಲಿ ಅಲ್ಲ ಶೂಟ್‌ ಮಾಡಿಲ್ಲ ಎಂದು ನಿಮಗೆ ಗೊತ್ತಾ?
undefined
ಹೌದು ಟೈಟಾನಿಕ್‌ನ ನಾಯಕಿ ರೋಸ್‌ ಮುಳುಗುವ ಸೀನ್‌ ಸಮುದ್ರದಲ್ಲಿ ಚಿತ್ರಿಕರಿಸಿಲ್ಲ ಬದಲಿಗೆ ಬಾತ್‌ಟಬ್‌ನಲ್ಲಿ ಶೂಟ್‌ ಮಾಡಲಾಯಿತಂತೆ.
undefined
1333 ಕೋಟಿ ರೂ.ಗಳ ಬಜೆಟ್‌ನಲ್ಲಿ ನಿರ್ಮಿಸಲಾದ 'ಟೈಟಾನಿಕ್' ಸಿನಿಮಾದ ಚಿತ್ರೀಕರಣವು ತಾರೆಯರಿಗೆ ಬಹಳ ಕಷ್ಟದ ಕೆಲಸವಾಗಿತ್ತು.
undefined
ಚಿತ್ರದ ಸ್ಟಾರ್‌ ಕಾಸ್ಟ್ ಮತ್ತು ಸಿಬ್ಬಂದಿ ಹಲವು ತಿಂಗಳ ಕಾಲ ನೀರೊಳಗಿನ ಚಿತ್ರೀಕರಣ ಮಾಡಬೇಕಾಯಿತು.
undefined
ಶೂಟಿಂಗ್ ಸಮಯದಲ್ಲಿ, ನಟರು ಮತ್ತು ಟೀಮ್‌ ಸದಸ್ಯರಲ್ಲಿ ಕೆಲವರು ಗಂಭೀರ ರೋಗಗಳನ್ನೂ ಅನುಭವಿಸಬೇಕಾಯಿತು.
undefined
ಚಿತ್ರದ ಶೂಟಿಂಗ್ ಸಮಯದಲ್ಲಿ ಕೇವಲ 3 ಅಡಿ ನೀರಿನಲ್ಲಿ ಟೈಟಾನಿಕ್ ಮುಳುಗಿತ್ತು.
undefined
ಆರ್‌ಎಮ್‌ಎಸ್ ಟೈಟಾನಿಕ್ ಮುಳುಗಿದ ನಿಜವಾದ ಘಟನೆಯನ್ನು ಆಧರಿಸಿದ್ದು, ಇದುರೋಮ್ಯಾಂಟಿಕ್-ಡ್ರಾಮ ಫಿಲ್ಮಂ.
undefined
ಬ್ರಿಟಿಷ್ ಪ್ರಯಾಣಿಕರ ಹಡಗು ಟೈಟಾನಿಕ್ ಆ ಸಮಯದಲ್ಲಿ ವಿಶ್ವದ ಅತಿದೊಡ್ಡ ಹಡಗು ಎಂದು ಪ್ರಸಿದ್ಧವಾಗಿದ್ದು, ಅದು ಎಂದಿಗೂ ಮುಳುಗದ ಹಡಗು ಎಂದು ಹೇಳಲಾಗುತ್ತಿತ್ತು.
undefined
ಆದರೆ ಏಪ್ರಿಲ್ 10, 1912 ರಂದು ಪ್ರಾರಂಭವಾದ ಮೊದಲ ಸಮುದ್ರಯಾನದಲ್ಲಿ, ಟೈಟಾನಿಕ್ ಅಪಘಾತಕ್ಕೆ ಸಿಲುಕಿದ ನಂತರ ಉತ್ತರ ಅಟ್ಲಾಂಟಿಕ್ ಸಮುದ್ರದಲ್ಲಿ ಮುಳುಗಿ, ಹಡಗಿನ ಮೇಲಿಟ್ಟಿದ್ದ ನಂಬಿಕೆಯನ್ನು ಸುಳ್ಳಾಗಿಸಿತು.
undefined
ಈ ಅಪಘಾತದಲ್ಲಿ 1513 ಜನರು ಅಸುನೀಗಿದರು. ಜುಲೈ 27, 1987ರಂದು 75 ವರ್ಷಗಳ ನಂತರ ಹಡಗಿನ ಮೊದಲ ಭಗ್ನಾವಶೇಷವನ್ನು ಸಮುದ್ರದಿಂದ ಹೊರ ತೆಗೆಯಲಾಯಿತು.
undefined
click me!