ಎರಡು ದಶಕಗಳಿಂತ ಹೆಚ್ಚು ಕಾಲದಿಂದ ಚಿತ್ರ ರಸಿಕರನ್ನುರಂಜಿಸಿಸುತ್ತಿರುವ ಶಾರುಖ್ ಖಾನ್ ಐಕಾನ್ ಆಗಿ ಬೆಳೆದಿದ್ದಾರೆ.
ಬಾಲಿವುಡ್ ಬಾದ್‌ಷಾ ಎಂದೇ ಕರೆಯಲ್ಪಡುವ ಶಾರುಖ್ ರೊಮ್ಯಾಂಟಿಕ್ ಹೀರೋ ಎಂದೇ ಖ್ಯಾತಿ ಪಡೆದವರು.
ಕಿಂಗ್ ಖಾನ್ ಪರ್ಸನಲ್ ಲೈಫ್‌ಗೆ ಸಂಬಂಧಿಸಿದ ಕೆಲವು ರಹಸ್ಯಗಳು ಇಲ್ಲಿವೆ.
ಶಾರುಖ್ ಅಭಿಮಾನಿಗಳು ಅವರ ಬಗ್ಗೆ ಎಲ್ಲವನ್ನೂ ತಿಳಿದಿದ್ದಾರೆ ಎಂದು ಭಾವಿಸಿದರೆ, ಅದು ತಪ್ಪು. ಏಕೆಂದರೆ ಶಾರುಖ್‌ಗೆ ಸಂಬಂಧಿಸಿದ ಕೆಲವು ವಿಷಯಗಳು ಎಲ್ಲರಿಗೂ ಗೊತ್ತಿಲ್ಲ. ಶಾರುಖ್ ಖಾನ್ ಕೂಡ ಇವುಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ .
ಶಾರುಖ್ ಖಾನ್ ಅವರ ಅಕ್ಕ ಅವರೊಂದಿಗೆ ವಾಸಿಸುತ್ತಿದ್ದಾರೆ. ಅವರ ಹೆಸರು ಶೆಹ್ನಾಜ್ ಲಾಲರುಖ್ ಖಾನ್ ಯಾವಾಗಲೂ ಲೈಮ್‌ಲೈಟ್‌ನಿಂದ ದೂರವಿರಲು ಬಯಸುತ್ತಾರೆ. ಶೆಹನಾಜ್ ಶಾರುಖ್‌ಗಿಂತ ಐದು ವರ್ಷ ಹಿರಿಯ ಅವಿವಾಹಿತೆ.
ಶಾರುಖ್ ಸೋಪ್ ಬಳಸುವುದಿಲ್ಲ. ಹೌದು, ಸೂಪರ್‌ಸ್ಟಾರ್ ಸೋಪ್ ಉಪಯೋಗಿಸುವುದೇ ಇಲ್ಲ. ಬಾತ್‌ರೂಮ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆಯುತ್ತಾರೆ, ಕೆಲವೊಮ್ಮೆ ಗಂಟೆಗಳು ಕಾಲ ಅಲ್ಲೇ ಕಾಲ ಕಳೆಯುವ. ಶಾರುಖ್ ಬಾತ್ರೂಮ್ ಸಿಂಗರ್.
ನಟನ ತಂದೆ ತಾಜ್ ಮೊಹಮ್ಮದ್ ಖಾನ್ ಬಾಯಿಯ ಕ್ಯಾನ್ಸರ್‌ನಿಂದ ನಿಧನರಾದರು. ಮೊದಲು ಬಾಯಿಯಲ್ಲಿ ಕಾಣಿಸಿಕೊಂಡ ಗುಳ್ಳೆ ನಂತರ ಕ್ಯಾನ್ಸರ್ ಆಗಿ ಬೆಳೆಯಿತು.
ಶಾರುಖ್ ಖಾನ್ ಸಂಖ್ಯಾಶಾಸ್ತ್ರವನ್ನು ನಂಬಿದ್ದಾರೆ. ಅವನ ಎಲ್ಲಾ ಫೋನ್ ಸಂಖ್ಯೆಗಳು ಮತ್ತು ಕಾರ್ ನಂಬರ್ ಪ್ಲೇಟ್‌ಗಳು ಐದು ಮತ್ತು ಎಂಟರ ಕಾಂಬಿನೇಷನ್ ಹೊಂದಿವೆ. ಅವರು ಬೇರೆ ಯಾವುದೇ ಸಂಖ್ಯೆ ಬಳಸುವುದಿಲ್ಲ. ಮುಂಬೈನ ಬಾಂದ್ರಾ ವೆಸ್ಟ್ ಬಳಿ 555 ನಂಬರ್ ಪ್ಲೇಟ್ ಹೊಂದಿರುವ ಯಾವುದೇ ಹೈ-ಎಂಡ್ ಕಾರನ್ನು ನಿಮಗೆ ಕಾಣಿಸಿದರೆ ಆ ಕಾರು ಖಂಡಿತ ಕಿಂಗ್ ಖಾನ್‌ಗೆ ಸೇರಿದಾಗಿರುತ್ತದೆ.
ಜನರ ಮುಂದೆ ಬಟ್ಟೆ ತೆಗೆಯಲು ಶಾರುಖ್ ಇಷ್ಟಪಡುವುದಿಲ್ಲ. ಬಹುಶಃ, ಅದಕ್ಕಾಗಿಯೇ ಮನ್ನತ್‌ನ ಅವರ ಈಜುಕೊಳದಲ್ಲಿ ಸ್ವೀಮಿಂಗ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಅಲ್ಲದೆ, ಸಿನಮಾದಲ್ಲಿ ಶರ್ಟ್ ತೆಗೆಯವ ಸೀನ್ ಮಾಡಲು ಶಾರುಖ್‌ಗೆ ಕಂಫರ್ಟಬಲ್ ಅನಿಸುವುದಿಲ್ಲ.