ಬಹುಭಾಷಾ ನಟ ಆರ್. ಮಾಧವನ್(R.Madhavan) ಅವರ 16 ವರ್ಷದ ಮಗ ವೇದಾಂತ್(Vedaant) ಇತ್ತೀಚೆಗೆ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಮಹಾರಾಷ್ಟ್ರಕ್ಕೆ ಏಳು ಪದಕಗಳನ್ನು ಗೆದ್ದು ಹೆಮ್ಮೆ ತಂದಿದ್ದಾರೆ.
212
ಬೆಂಗಳೂರಿನಲ್ಲಿ ನಡೆದ ಜೂನಿಯರ್ ರಾಷ್ಟ್ರೀಯ ಅಕ್ವಾಟಿಕ್ ಚಾಂಪಿಯನ್‌ಶಿಪ್‌ನಲ್ಲಿ ವೇದಾಂತ್ ಏಳು ಪದಕಗಳನ್ನು ಗೆದ್ದಿದ್ದಾರೆ.
312
ವರದಿಗಳ ಪ್ರಕಾರ 16 ವರ್ಷದ ಬಾಲಕ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ನಡೆದ ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ಮನೆಗೆ ತಂದಿದ್ದಾನೆ. ಅವರು ಸ್ಪರ್ಧೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.
412
800 ಮೀಟರ್ ಫ್ರೀಸ್ಟೈಲ್ ಈಜು, 1500 ಫ್ರೀಸ್ಟೈಲ್ ಈಜು, 4×100 ಫ್ರೀಸ್ಟೈಲ್ ರಿಲೇ ಮತ್ತು 4×200 ಫ್ರೀಸ್ಟೈಲ್ ರಿಲೇ ಸ್ಪರ್ಧೆಗಳಲ್ಲಿ ಬೆಳ್ಳಿ ಗೆದ್ದರು.
512
ಅವರು 100 ಮೀಟರ್ ಫ್ರೀಸ್ಟೈಲ್ ಈಜು, 200 ಮೀಟರ್ ಫ್ರೀಸ್ಟೈಲ್ ಈಜು ಮತ್ತು 400 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಗಳಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ ಎಂದು ದಿ ಬ್ರಿಡ್ಜ್ ವರದಿ ಮಾಡಿದೆ.
612
ಮಾಧವನ್ ಯಾವಾಗಲೂ ತಮ್ಮ ಮಗನ ಪ್ರಯತ್ನಗಳನ್ನು ಬೆಂಬಲಿಸಿ ಶ್ಲಾಘಿಸುತ್ತಾರೆ. ಈ ವರ್ಷದ ಆರಂಭದಲ್ಲಿ ಮ್ಯಾಡಿ ತನ್ನ ತಂಡದೊಂದಿಗೆ ತನ್ನ ಮಗನ ಫೋಟೋ ಹಂಚಿಕೊಂಡಿದ್ದರು. ದೊಡ್ಡ ಗೆಲುವಿಗಾಗಿ ಅವರನ್ನು ಅಭಿನಂದಿಸಿದ್ದಾರೆ.
712
ಆಗಸ್ಟ್‌ನಲ್ಲಿ ವೇದಾಂತ್ ಅವರ 16 ನೇ ಹುಟ್ಟುಹಬ್ಬದಂದು, ಮ್ಯಾಡಿ ತನ್ನನ್ನು ಹೆಮ್ಮೆಯ ತಂದೆ ಎಂದು ಕರೆದಿದ್ದರು. ಅವರು ತಮ್ಮ ಸಾಮಾಜಿಕ ಮಾಧ್ಯಮ ಎಕೌಂಟ್‌ಗಳಲ್ಲಿ ಫೋಸ್ಟ್ ಶೇರ್ ಮಾಡಿದ್ದರು.
812
ನಾನು ಉತ್ತಮವಾದ ಎಲ್ಲದರಲ್ಲೂ ನನ್ನನ್ನು ಸೋಲಿಸಿದ್ದಕ್ಕಾಗಿ ಧನ್ಯವಾದಗಳು. ಇನ್ನೂ ನನ್ನನ್ನು ಅಸೂಯೆಪಡುವಂತೆ ಮಾಡಿದೆ. ನನ್ನ ಹೃದಯವು ಹೆಮ್ಮೆಯಿಂದ ಉಬ್ಬುತ್ತದೆ. ನಿನ್ನಿಂದ ತುಂಬಾ ಕಲಿಯಬೇಕು. 16 ನೇ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲು ಬಯಸುತ್ತೇನೆ ಎಂದಿದ್ದಾರೆ.
912
ಹಲವಾರು ಸಂದರ್ಭಗಳಲ್ಲಿ, ಮಾಧವನ್ ಈಜು ಕೌಶಲ್ಯದಲ್ಲಿ ತಮ್ಮ ಮಗನ ವಿವಿಧ ಸಾಧನೆಗಳ ಬಗ್ಗೆ ಉತ್ಸಾಹದಿಂದ ನಟ ಫೋಟೋ ವಿಡಿಯೋ ಹಂಚಿಕೊಂಡಿದ್ದಾರೆ.
1012
ಕೆಲಸದ ವಿಚಾರದಲ್ಲಿ ನಟನು 2018 ರಲ್ಲಿ ಶಾರುಖ್ ಖಾನ್ ಅವರ ಝೀರೋ ಮತ್ತು 2020 ರಲ್ಲಿ ಅಮೆಜಾನ್ ಪ್ರೈಮ್ ವೀಡಿಯೊದ ನಿಶಬ್ಧಮ್ನಲ್ಲಿ ಕೊನೆಯದಾಗಿ ಕಾಣಿಸಿಕೊಂಡರು.
1112
ಅವರು ಮುಂದಿನ ರಾಕೆಟ್ರಿ: ದಿ ನಂಬಿ ಎಫೆಕ್ಟ್ನಲ್ಲಿ ಅವರು ಬರೆದು ನಿರ್ದೇಶಿಸಿದ ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
1212
ಈ ಹಿಂದೆ ಆರ್ಯನ್ ಖಾನ್ ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆದಾಗ ಆರ್ಯನ್ ಹಾಗೂ ವೇದಾಂತ್‌ನನ್ನು ಹೋಲಿಸಿ ನೆಟ್ಟಿಗರು ಟ್ರೋಲ್ ಮಾಡಿದ್ದರು