ಕಾರ್ತಿಕ್ ಆರ್ಯನ್ ಅವರು ಭೂಲ್ ಭುಲೈಯ್ಯ 3 ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಅವರ ಪಾತ್ರ ರೂಹ್ ಬಾಬಾ ಅಭಿಮಾನಿಗಳಿಗೆ ಇಷ್ಟವಾಗಿದೆ. ವಿದ್ಯಾ ಬಾಲನ್ ಅವರನ್ನು ಕಪಿಲ್ ಶೋನಲ್ಲಿ ಕಾಲೆಳೆದ ನಂತರ, ಕಾರ್ತಿಕ್ ತಮ್ಮ ಡೇಟಿಂಗ್ ಬದುಕಿನ ಬಗ್ಗೆ ಸುದ್ದಿಯಲ್ಲಿದ್ದಾರೆ. ಮ್ಯಾಶೇಬಲ್ ಇಂಡಿಯಾ ಜೊತೆಗಿನ ಸಂದರ್ಶನದಲ್ಲಿ ಕಾರ್ತಿಕ್ ತಮ್ಮ ಸಂಬಂಧದ ಸ್ಥಿತಿಯನ್ನು ಖಾತ್ರಿಪಡಿಸಿದ್ದಾರೆ.
ನಾನು ಸಿಂಗಲ್, ಯಾರಿಗೂ ಲೈವ್ ಲೊಕೇಶನ್ ಕಳಿಸಬೇಕಾಗಿಲ್ಲ. ನಾನು ಇದೀಗ ಯಾವುದೇ ಡೇಟಿಂಗ್ ಆಪ್ಗಳಲ್ಲಿಯೂ ಇಲ್ಲ. ಚಂದು ಚಾಂಪಿಯನ್ಗೆ ತಯಾರಿ ಮತ್ತು ಶೂಟಿಂಗ್ ನಡೆಯುತ್ತಿರುವುದರಿಂದ ಇದ್ಯಾವುದಕ್ಕೂ ನನಗೆ ಸಮಯ ಸಿಕ್ಕಿಲ್ಲ ಎಂದು ನೇರವಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ನಾನು ಸಿನಿನಾ ಇಂಡಸ್ಟ್ರಿಗೆ ಬಂದ ಮೇಲೆ ಕಳೆದೆರಡು ವರ್ಷಗಳ ಕಾಲ ಕಟ್ಟುನಿಟ್ಟಿನ ಜೀವನಕ್ರಮ ಪಾಲಿಸಬೇಕಾಯಿತು. ಆಗ ನಾನು ಈಜು ಕಲಿಯುತ್ತಿದ್ದೆ. ಭೂಲ್ ಭುಲೈಯ್ಯ 3 ಶೂಟಿಂಗ್ ಮುಗಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲು ಸಮಯ ಇಲ್ಲದೇ ಬ್ಯುಸಿಯಾಗಿದ್ದೆ ಎಂದರು.
ಇತ್ತೀಚೆಗೆ ಭೂಲ್ ಭುಲೈಯ್ಯ 3 ಚಿತ್ರತಂಡ ಕಪಿಲ್ ಶೋನಲ್ಲಿ ಭಾಗವಹಿಸಿತ್ತು. ನಟಿ ವಿದ್ಯಾ ಬಾಲನ್ ಮಾತನಾಡುತ್ತಾ, 'ಶೂಟಿಂಗ್ ಸಮಯದಲ್ಲಿ ಕಾರ್ತಿಕ್ ಯಾವಾಗಲೂ ಫೋನ್ನಲ್ಲೇ ಇರುತ್ತಿದ್ದರು. ಆಗ 'ಮೀ ಟೂ, ಮೀ ಟೂ' ಅಂತ ಕೇಳಿಸುತ್ತಿತ್ತು. ಅದು ಯಾರ ಹೆಸರು? ಎಂದು ಕೇಳಿದರು.
ಅನೀಸ್ ಬಜ್ಮೀ ನಿರ್ದೇಶನದ ಭೂಲ್ ಭುಲೈಯ್ಯ 3 ಚಿತ್ರದಲ್ಲಿ ತ್ರಿಪ್ತಿ ಡಿಮ್ರಿ, ಮಾಧುರಿ ದೀಕ್ಷಿತ್, ರಾಜ್ಪಾಲ್ ಯಾದವ್, ಶ್ವೇತಾ ತಿವಾರಿ ಮತ್ತು ವಿಜಯ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವು ಈಗಾಗಲೇ 123.5 ಕೋಟಿ ರೂಪಾಯಿ ಆದಾಯ ಗಳಿಸಿದೆ.