ಎರಡು ತಿಂಗಳ ಹಿಂದೆ ಎರಡನೇ ಮಗನಿಗೆ ಜನ್ಮ ನೀಡಿದ ನಂತರ ಒಂದು ತಿಂಗಳು ವಿಶ್ರಾಂತಿ ಪಡೆದಿದ್ದಾರೆ ಬೇಬೋ. ಮತ್ತೆ ಕೆಲಸ ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಪ್ರೆಗ್ನೆಂಸಿ ತೂಕ ಇಳಿಸಿ ಕೊಳ್ಳಲು ಸಾಕಷ್ಟು ಕಷ್ಟ ಪಡುತ್ತಿದ್ದಾರೆ.
ತನ್ನ ಸ್ಮಾರ್ಟ್ ವಾಚ್‌ನಲ್ಲಿ ಎಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತಿದ್ದಾರೆ ಎಂದು ಶೇರ್ ಮಾಡಿಕೊಂಡಿದ್ದಾರೆ.ಲಾಕ್‌ಡೌನ್ ಎಂದರೆ ಎಲ್ಲಾ ಕೆಲಸನವನ್ನು ಬಿಡಬೇಕು ಎಂದಲ್ಲ ಎಂದು ಫೋಟೋ ಜೊತೆ ಬರೆದಿದ್ದಾರೆಕರೀನಾ.
40ನೇ ವಯಸ್ಸಿನಲ್ಲೂ ಫೀಟ್ ಆಗಿರುವ ಕರೀನಾರ ರಹಸ್ಯ ಆರೋಗ್ಯಕರ ಲೈಫ್‌ಸ್ಟೈಲ್ ಜೊತೆ ಬ್ಯಾಲೆನ್ಸ್‌ಡ್ ಡಯಟ್.
ದಿನವನ್ನು ವಾಕಿಂಗ್‌ನೊಂದಿಗೆ ಪ್ರಾರಂಭಿಸುವ ನಟಿಪ್ರತಿದಿನ 30 ನಿಮಿಷ ನಡೆಯುತ್ತಾರೆ. ಇದು ಎನರ್ಜಿ ಹೆಚ್ಚಿಸಿ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳುತ್ತಾರೆ.
ವಾರದಲ್ಲಿ 3 ರಿಂದ 4 ಬಾರಿ 45 ನಿಮಿಷ ಸೇಷನ್‌ನ ಪಿಲೆಟ್ ಎಕ್ಸ್‌ರ್ಸೈಜ್ ಮಾಡುತ್ತಾರೆ. ಜೊತೆ ಫುಲ್ ಬಾಡಿ ವರ್ಕೌಟ್ ಮಾಡುತ್ತಾರೆ.
ಜಿಮ್ ಟ್ರೈನರ್ ನಮ್ರತಾ ಪ್ರಕಾರ, ಆಸಕ್ತಿಕಾಪಾಡಿಕೊಳ್ಳಲು ಪ್ರತಿದಿನ ವಿಭಿನ್ನ ವ್ಯಾಯಾಮಗಳನ್ನು ಮಾಡುತ್ತಾರೆ. ಬಹಳ ಸಮಯದಿಂದ ಕರೀನಾರ ಟ್ರೈನರ್ ಆಗಿರುವ ನಮ್ರತಾರ ಪ್ರತಿ ತಿಂಗಳ ಫೀಸ್40,000 ರೂ.
ಕರೀನಾ ಕಪೂರ್ ಅವರ ಫಿಟ್ನೆಸ್ ಮತ್ತು ಜಿಮ್ ತರಬೇತುದಾರ ನಮ್ರತಾ ಪುರೋಹಿತ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕರೀನಾ ಕ್ರ್ಯಾಶ್ ಡಯಟಿಂಗ್ ಬದಲಿಗೆ ಸರಿಯಾದ ಮತ್ತು ನಿಧಾನ ಪ್ರಕ್ರಿಯೆಗಳನ್ನು ಅನುಸರಿಸಿದ್ದಾರೆ.ಕರೀನಾ ಫೀಟ್ ಆಗಿರಲು ಆಹಾರ ತಜ್ಞ ಮತ್ತು ಪೌಷ್ಟಿಕತಜ್ಞ ರುಜುತಾ ದಿವೇಕರ್ ಸಹ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಕರೀನಾ ಕಪೂರ್ ಲಂಚ್ ಮತ್ತು ಡಿನ್ನರ್‌ನಲ್ಲಿ ಬೇಳೆ ಮತ್ತು ತರಕಾರಿ ಸೂಪ್ ಇರುತ್ತದೆ. ಉಪಹಾರದಲ್ಲಿ ಹಾಲು ಮತ್ತು ಫ್ರೆಶ್ ಫ್ರೂಟ್ ಜ್ಯೂಸ್, ಪರೋಟಾ, ಉಪ್ಮಾ, ಇಡ್ಲಿ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ತಿಂಡಿಗೆ ಬ್ರೌನ್ ಬ್ರೆಡ್ ಮತ್ತು ಸ್ಯಾಂಡ್‌ವಿಚ್ ಊಟಕ್ಕೆ 2 ರೋಟಿ,ದಾಲ್, ಹಸಿರು ಸಲಾಡ್ ಮತ್ತು ತರಕಾರಿ ಸೂಪ್ ಹಾಗೂ ರಾತ್ರಿ ಊಟಕ್ಕೆ ರೋಟಿ, ಬ್ರೌನ್ ರೈಸ್, ಮೊಸರು ಮತ್ತು ತರಕಾರಿ ಸೂಪ್ ತೆಗೆದುಕೊಳ್ಳುತ್ತಾರೆ.
ರುಜುತಾ ನಟಿಗೆ ದಿನಕ್ಕೆ 2 ಕಪ್ ಕಾಫಿ ಮಾತ್ರ ಕುಡಿಯಲು ಸೂಚಿಸುತ್ತಾರೆ.ವಾರದಲ್ಲಿ ಒಂದು ದಿನ ಚೀಟ್ ಮೀಲ್ ಮಾಡುವ ಅವರು ಆಹಾರಕ್ಕಿಂತ ಲೈಫ್‌ಸ್ಟೈಲ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ.
ಕರೀನಾ ಲಾಲ್ ಸಿಂಗ್ ಚಾಧಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ ಬೇಬೊ.