ಪ್ರಸ್ತುತ ಆಲಿಯಾ ಭಟ್ ಜೊತೆ ಸೀರಿಯಸ್ ರಿಲೆಷನ್‌ಶಿಪ್‌ನಲ್ಲಿರುವ ರಣಬೀರ್ ಕಪೂರ್ಶೀಘ್ರದಲ್ಲೇ ಮದುವೆಯಾಗಲಿದ್ದಾರೆ.
ರಣಬೀರ್ ಕಪೂರ್ ತಮ್ಮ ವೈಯಕ್ತಿಕ ಜೀವನ ಮತ್ತು ಆಫೇರ್‌ಗಳಿಂದ ಸಾಕಷ್ಟು ಸುದ್ದಿಯಾಗಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆಯ ರಣಬೀರ್ ಲವ್‌ಸ್ಟೋರಿ ಎಲ್ಲರಿಗೂ ತಿಳಿದಿದೆ.
ಆದರೆ ರಣಬೀರ್‌ಗೆ ಒಮ್ಮೆ ದೆಹಲಿ ಮೂಲದ ಹುಡುಗಿ ಭಾರ್ತಿ ಮಲ್ಹೋತ್ರಾ ಜೊತೆ ಸಂಬಂಧವಿತ್ತು ಎಂಬುದು ಗೊತ್ತಾ?
ಕತ್ರಿನಾಳರಿಂದ ಬೇರ್ಪಟ್ಟ ಸಮಯದಲ್ಲಿ ರಣಬೀರ್ ಸಹೋದರಿ ರಿದ್ಧಿಮಾ ಕಪೂರ್ ರಣಬೀರ್ ಮತ್ತು ಭಾರತಿ ನಡುವೆ ಪ್ರೀತಿಗೆ ಕಾರಣವಾದರು. ಆದರಿದು ಸತ್ಯಕ್ಕೆ ದೂರವಾದದ್ದು ಎಂದಿದ್ದರು ಭಾರತಿ.
ರಣಬೀರ್ ಕಪೂರ್ ಅವರು ನೋ ಫಿಲ್ಟರ್ ವಿಥ್ ನೇಹಾ ಚಾಟ್ ಶೋನಲ್ಲಿ ಇದರ ಬಗ್ಗೆ ಮಾತಾನಾಡಿದ್ದರು.
'ಆರು ತಿಂಗಳ ಹಿಂದೆ ಮೀಡಿಯಾ ಭಾರತಿ ಮಲ್ಹೋತ್ರಾ ಎಂಬ ಈ ಹುಡುಗಿಯೊಂದಿಗೆ ನನ್ನನ್ನು ಲಿಂಕ್ ಮಾಡಿದೆ. ಆದರೆ ನನಗೆ ಇದರ ಬಗ್ಗೆ ತಿಳಿದಿಲ್ಲ, ನಾನು ಎಂದಿಗೂ ಅವರನ್ನು ಭೇಟಿಯಾಗಿಲ್ಲ. ಆ ಬಗ್ಗೆ ಮೀಡಿಯಾ ಅವಳನ್ನು ಸಂದರ್ಶನ ಮಾಡಲು ಹೋದಾಗ,ನೀವು ನನ್ನನ್ನು ಅವರೊಂದಿಗೆ ಲಿಂಕ್ ಮಾಡಲು ಹೇಗೆ ಸಾಧ್ಯ? ನಾನು ಅವರ ಫ್ಯಾನ್ ಕೂಡ ಅಲ್ಲ ಎಂದು ಹೇಳಿದ್ದಾಳೆ. ಇದು ಸಂಪೂರ್ಣವಾಗಿ ಆಧಾರ ರಹಿತ ಕಥೆ ಎಂದು ಹೇಳಿದ್ದರುರಣಬೀರ್ ಕಪೂರ್.