ಅಷ್ಟಕ್ಕೂ, ಹಿರೋಯಿನ್‌ ಸಿನಿಮಾದಲ್ಲಿ ಕರೀನಾ ನ್ಯೂಡ್‌ ಸೀನ್‌ ಮಾಡಿದ್ದೇಕೆ?

First Published | Sep 29, 2021, 7:01 PM IST

ಇತ್ತೀಚಿಗೆ  ಕರೀನಾ ಕಪೂರ್ (Kareena Kapoor) ಪತಿ ಸೈಫ್ ಅಲಿ ಖಾನ್ (Saif Ali Khan) ಮತ್ತು ಇಬ್ಬರು ಮಕ್ಕಳಾದ ತೈಮೂರ್(Taimur) ಮತ್ತು ಜೆಹ್ (Jeh) ಜೊತೆ ಹಾಲಿಡೇಗಾಗಿ ಮಾಲ್ಡೀವ್ಸ್ ಹೋಗಿದ್ದರು.  ಸೆಪ್ಟೆಂಬರ್ 21 ರಂದು ತನ್ನ ಜನ್ಮದಿನವನ್ನು  ನಟಿ ಮಾಲ್ಡೀವ್ಸ್‌ನಲ್ಲಿ  ಸೆಲೆಬ್ರೆಟ್‌ ಮಾಡಿಕೊಂಡರು. ಆ ಸಮಯದಲ್ಲಿ ಅವರು ಹಂಚಿಕೊಂಡಿರುವ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿವೆ. ಈ ನಡುವೆ  ಕರೀನಾಳ ಹಳೆಯ ಸಂದರ್ಶನವೊಂದು  ಹೊರಬಿದ್ದಿದೆ, ಅದರಲ್ಲಿ ಅವರು ಬಾಲಿವುಡ್ ಜರ್ನಿ (Bollywood Journey), ಹೋರಾಟ ಮತ್ತು ಸಾಧನೆಗಳ ಕುರಿತು ಮಾತನಾಡಿದರು. ಈ ಸಮಯದಲ್ಲಿ, ಅವರು ತಮ್ಮ ಸಿನಿಮಾ ಹಿರೋಯಿನ್‌ (Heroine) ಚಿತ್ರದಲ್ಲಿ ಅವರು ಮಾಡಿರುವ ನಗ್ನ ದೃಶ್ಯಗಳ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ ಐಶ್ವರ್ಯಾ ರೈ (Aishwarya Rai) ಅವರನ್ನು ಮೊದಲು ಆಯ್ಕೆ ಮಾಡಲಾಗಿತ್ತು. ಆದರೆ ಅವರ ಪ್ರೆಗ್ನೆಂಸಿಯ (Pregnancy)  ಕಾರಣದಿಂದಾಗಿ ಅವರು ಸಿನಿಮಾವನ್ನು ತೊರೆದರು ಮತ್ತು ನಂತರ ಕರೀನಾ ಈ ಸಿನಿಮಾದ ನಟಿಯಾದರು. ಈ ಚಿತ್ರದಲ್ಲಿ ಕರೀನಾ ಕಪೂರ್ ತನ್ನ ನ್ಯೂಡ್ ದೃಶ್ಯಗಳ ಬಗ್ಗೆ ಹೇಳಿದ್ದೇನು? ಕೆಳಗೆ ಓದಿ.

ಕರೀನಾ ಕಪೂರ್ ತನ್ನ ವೃತ್ತಿಜೀವನದಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿದ್ದರೂ ಆವರು ಬಿಕಿನಿ (Bikini) ಮತ್ತು ನಗ್ನ (Naked)ವಾಗಿ ಯಾವುದೇ ಚಿತ್ರದಲ್ಲಿ ದೃಶ್ಯಗಳನ್ನು ನೀಡಿರಲಿಲ್ಲ. ಆದರೆ ಮಧುರ್ ಭಂಡಾರ್ಕರ್ ಅವರ ಹಿರೋಯಿನ್‌ ಸಿನಿಮಾಕ್ಕಾಗಿ ಅವರು ನಗ್ನ ದೃಶ್ಯಗಳನ್ನು ನೀಡಿದರು.

ಆದಾಗ್ಯೂ, ಕರೀನಾ ಕಪೂರ್ ಅವರನ್ನು ಪರದೆಯ ಮೇಲೆ ನಗ್ನ ಸ್ಥಿತಿಯಲ್ಲಿ ನೋಡಿದ ನಂತರ ಸಾಕಷ್ಟು ಟೀಕೆಗೊಳಗಾದರು. ಈ ದೃಶ್ಯದಿಂದಾಗಿ, ಅವಳು ಸಾಕಷ್ಟು ಅವಮಾನವನ್ನು ಎದುರಿಸಬೇಕಾಯಿತು. ಇದರ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಮಾತಾನಾಡಿದ್ದಾರೆ. 

Tap to resize

'ನನ್ನ ಅಭಿನಯಕ್ಕೆ ಅದಕ್ಕೆ ಸಿಗಬೇಕಾದ ಸರಿಯಾದ ಹಕ್ಕು ಸಿಗಲಿಲ್ಲ. ನನ್ನ ಪಾತ್ರಕ್ಕಾಗಿ ನಾನು ಎಲ್ಲವನ್ನೂ ನೀಡಿದ್ದೇನೆ' ಎಂದು ಕರೀನಾ ಕಪೂರ್  ಚಾಟ್ ಶೋನಲ್ಲಿ ಅನುಪಮಾ ಚೋಪ್ರಾ ಜೊತೆ ಮಾತನಾಡುವಾಗ ಹೇಳಿದ್ದರು. 

'ಪ್ರೇಕ್ಷಕರು ನನ್ನನ್ನು ಅಂತಹ ಪಾತ್ರದಲ್ಲಿ ನೋಡಲು ಸಿದ್ಧರಿರಲಿಲ್ಲ. ಇದು ಸ್ವಲ್ಪ negative ಆಗಿತ್ತು, ಈ ಕಾರಣದಿಂದಾಗಿ ಎಲ್ಲರಿಗೂ ಸ್ವಲ್ಪ ಅನ್‌ಕಂಫರ್ಟಬಲ್‌ ಫೀಲ್‌ ಆಯಿತು. ಮಧುರ್ ಭಂಡಾರ್ಕರ್ ಸಿನಿಮಾ ಮಾಡಿದ ರೀತಿ ಎಲ್ಲರಿಗೂ ಅನ್‌ಕಂಫರ್ಟಬಲ್‌ ಆಯಿತು,'  ಎಂದು ನಿರ್ದೇಶಕರ ಮೇಲೆಯೇ ಆರೋಪಿಸಿದರು ಬಾಲಿವುಡ್ ಬೇಬೋ.

'ಈ ದೃಶ್ಯದಲ್ಲಿ ನಾನು ನನ್ನ ನೂರು ಪ್ರತಿಶತವನ್ನು ನೀಡಿದ್ದೆ. ಇದು ನಿಜವಾಗಿಯೂ ನನ್ನ 5 ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಜನರು ಏನು ಹೇಳುತ್ತಾರೆ, ಚಿತ್ರದಲ್ಲಿ ಏನೇ ಇರಲಿ ಮತ್ತು ನಾನು ಏನೇ ಮಾಡಿದರೂ ನನಗೆ ಹೆಮ್ಮೆ (Proud) ಇದೆ' ಎಂದು ಪಾತ್ರದ ಬಗ್ಗೆ ತನ್ನ ಭಾವನೆಯನ್ನು ಕರೀನಾ ಹೇಳಿಕೊಂಡಿದ್ದರು. 
 

ಹೌದು, ಈ ಚಿತ್ರಕ್ಕಾಗಿ ನಾನು ನ್ಯೂಡ್ ಆಗಿದ್ದೆ. ಸಿನಿಮಾಗೆ ಬೇಕಾಗಿದ್ದು  ಎಲ್ಲವನ್ನೂ ನಾನು ಮಾಡಿದ್ದೇನೆ, ಆದರೆ ಅದು ಭಯ ಹುಟ್ಟಿಸಿತು ಎಂದ ನಟಿ ಅದನ್ನು ಮಾಡಿದ ನಂತರ ಅವರು ತುಂಬಾ ಹೆದರಿದ್ದರು ಎಂಬುದನ್ನು ಸಹ ಕರೀನಾ ಕಪೂರ್ ರಿವೀಲ್‌ ಮಾಡಿದ್ದರು.

ಈ ವರ್ಷ ಫೆಬ್ರವರಿಯಲ್ಲಿ ಕರೀನಾ ಕಪೂರ್ ತಮ್ಮ ಎರಡನೇ ಮಗನಿಗೆ ಜನ್ಮ ನೀಡಿದ್ದಾರೆ. ಒಂದು ತಿಂಗಳ ಹಿಂದೆ, ಅವರು ತನ್ನ ಪ್ರೆಗ್ನೆಂಸಿಗೆ ಸಂಬಂಧಿಸಿದ ಪುಸ್ತಕವನ್ನು ಬರೆದಿದ್ದಾರೆ ಮತ್ತು   ಪುಸ್ತಕದ ಮೂಲಕ ಅವರು ತನ್ನ ಕಿರಿಯ ಮಗನ ಹೆಸರನ್ನು ಬಹಿರಂಗಪಡಿಸಿದರು. 

ಇತ್ತೀಚೆಗೆ, ಕರೀನಾ ಕಪೂರ್ ಮುಂಬರುವ ಚಿತ್ರ ಲಾಲಸಿಂಗ್ ಚಡ್ಡಾ ಚಿತ್ರದ ಉಳಿದ ಚಿತ್ರೀಕರಣವನ್ನು ಮುಗಿಸಿದರು. ಆಕೆ ಅಮೀರ್ ಖಾನ್ ಜೊತೆ ಮುಂಬೈಯ ವಿವಿಧ ಸ್ಥಳಗಳಲ್ಲಿ ಶೂಟಿಂಗ್‌ ಮಾಡುತ್ತಿದ್ದರು. ಈ ಚಿತ್ರದ ಹೊರತಾಗಿ, ಪ್ರಸ್ತುತ ಅವರಿಗೆ ಬೇರೆ ಯಾವುದೇ ಸಿನಿಮಾ ಆಫರ್ ಇಲ್ಲ.

Latest Videos

click me!