High Budget Cinema: ಭಾರತೀಯ ಸಿನಿಮಾ ಇತಿಹಾಸದ ಅತೀ ದೊಡ್ಡ ಬಜೆಟ್‌ ಸಿನಿಮಾಗಳಿವು

Published : Sep 08, 2022, 04:20 PM IST

ಇತ್ತೀಚಿನ ದಿನಗಳಲ್ಲಿ  ಸೆಪ್ಟೆಂಬರ್ 9 ರಂದು ಬಿಡುಗಡೆಯಾಗುತ್ತಿರುವ ಬ್ರಹ್ಮಾಸ್ತ್ರ (Brahmastra) ಚಿತ್ರದ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಒಂದೆಡೆ ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ (Ranbir Kapoor) ಅಭಿನಯದ  ಚಿತ್ರ ಬಾಯ್ಕಾಟ್ ಟ್ರೆಂಡ್‌ ಎದುರಿಸುತ್ತಿದೆ. ಮತ್ತೊಂದೆಡೆ ಸಿನಿಮಾದ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ. ಅಯನ್ ಮುಖರ್ಜಿ ನಿರ್ದೇಶನದ ಈ ಚಿತ್ರವನ್ನು ಸುಮಾರು 410 ಕೋಟಿ ಬಜೆಟ್‌ನಲ್ಲಿ ಸಿದ್ಧಪಡಿಸಲಾಗಿದೆ .ವರದಿಗಳ ಪ್ರಕಾರ, ಈ ಚಿತ್ರ ಅತ್ಯಂತ ದುಬಾರಿ ಚಿತ್ರಗಳ ಪಟ್ಟಿಯಲ್ಲಿದೆ. ಬ್ರಹ್ಮಾಸ್ತ್ರದ ಹೊರತಾಗಿ, ಇನ್ನೂ ಕೆಲವು ಚಿತ್ರಗಳ ಬಜೆಟ್ ದೊಡ್ಡದಾಗಿದೆ. ಭಾರತೀಯ ಚಿತ್ರರಂಗದ  ದುಬಾರಿ ಚಿತ್ರಗಳ ಬಗ್ಗೆ ಮಾಹಿತಿ ಇಲ್ಲಿದೆ.

PREV
19
High Budget Cinema: ಭಾರತೀಯ ಸಿನಿಮಾ ಇತಿಹಾಸದ ಅತೀ ದೊಡ್ಡ ಬಜೆಟ್‌ ಸಿನಿಮಾಗಳಿವು

ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾದ ಬ್ರಹ್ಮಾಸ್ತ್ರ ಚಿತ್ರಕ್ಕಾಗಿ ಜನ ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಅದ್ಧೂರಿ ಬಜೆಟ್‌ನಲ್ಲಿ ಚಿತ್ರ ತಯಾರಾಗಿದ್ದರೆ, ಸುಧಾರಿತ ತಂತ್ರಜ್ಞಾನ ಮತ್ತು ವಿಎಫ್‌ಎಕ್ಸ್ ಅನ್ನು ಅದರಲ್ಲಿ ಬಳಸಲಾಗಿದೆ. ಮೊದಲ ದಿನವೇ ಸುಮಾರು 30 ರಿಂದ 35 ಕೋಟಿ ಗಳಿಕೆ ಮಾಡಲಿದೆ ಎನ್ನುತ್ತಾರೆ ವಿಮರ್ಶಕರು.

29

ಮಣಿರತ್ನಂ ಅಭಿನಯದ ಪೊನ್ನಯನ್ ಸೆಲ್ವನ್ 1 ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಐಶ್ವರ್ಯ ರೈ ಬಚ್ಚನ್ ಸೇರಿದಂತೆ ದಕ್ಷಿಣದ ಹಲವು ಸೂಪರ್ ಸ್ಟಾರ್‌ಗಳು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ ಸುಮಾರು 500 ಕೋಟಿ ರೂ. ದುಬಾರಿ ಚಿತ್ರಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ. ಚಿತ್ರ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿದೆ.

39

ಆಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರ ಚಿತ್ರ  ಥಗ್ಸ್ ಆಫ್ ಹಿಂದೂಸ್ತಾನ್ ಕೂಡ ದುಬಾರಿ ಚಿತ್ರಗಳಲ್ಲಿ ಎಣಿಸಲ್ಪಟ್ಟಿದೆ. 2018 ರಲ್ಲಿ ಬಂದ ಚಿತ್ರದ ಬಜೆಟ್ ಸುಮಾರು 300 ಕೋಟಿ ಮತ್ತು ದೊಡ್ಡ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ಫ್ಲಾಪ್ ಎಂದು ಸಾಬೀತಾಯಿತು.

49

2017 ರಲ್ಲಿ, ಪ್ರಭಾಸ್, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ ಅವರ ಚಿತ್ರ ಬಾಹುಬಲಿ ದಿ ಕನ್‌ಕ್ಲೂಷನ್ ಕೂಡ ದುಬಾರಿ ಚಿತ್ರಗಳ ಪಟ್ಟಿಯಲ್ಲಿ ಸೇರಿದೆ. ವರದಿಗಳ ಪ್ರಕಾರ, ಈ ಚಿತ್ರವನ್ನು ಸುಮಾರು 250 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಚಿತ್ರವು ಬ್ಲಾಕ್ ಬಸ್ಟರ್ ಎಂದು ಸಾಬೀತಾಯಿತು.

59

ಮಾರ್ಚ್ 2022 ರಲ್ಲಿ ತೆರೆಕಂಡ ಪೂಜಾ ಹೆಗ್ಡೆ ಮತ್ತು ಪ್ರಭಾಸ್ ಅಭಿನಯದ ಚಿತ್ರ ರಾಧೆ ಶ್ಯಾಮ್ ಪ್ರೇಕ್ಷಕರಿಗೆ ಉತ್ತಮ ರೀತಿಯಲ್ಲಿ ಸಿಗಲಿಲ್ಲ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಎಂದು ಸಾಬೀತಾಯಿತು. ಆದಾಗ್ಯೂ, ಚಿತ್ರದ ಬಜೆಟ್ ಗಣನೀಯವಾಗಿತ್ತು. ವರದಿಗಳ ಪ್ರಕಾರ, ಚಿತ್ರವನ್ನು ಸುಮಾರು 300-350 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.


 

69

ಈ ವರ್ಷದ ಮಾರ್ಚ್‌ನಲ್ಲಿ ಬಿಡುಗಡೆಯಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಅವರ ಚಿತ್ರ  ಆರ್‌ಆರ್‌ಆರ್ ಕೂಡ ದುಬಾರಿ ಚಿತ್ರಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ವರದಿಗಳ ಪ್ರಕಾರ ಚಿತ್ರದ ಬಜೆಟ್ ಸುಮಾರು 450 ಕೋಟಿ ರೂ.
 


 

79

ಅದೇ ಸಮಯದಲ್ಲಿ, 2018 ರಲ್ಲಿ ಬಂದ ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಚಿತ್ರ 2.0 ರ ಬಜೆಟ್ ಕೂಡ ದೊಡ್ಡ ಬಜೆಟ್‌ನ ಸಿನಿಮಾವಾಗಿತ್ತು. ವರದಿಗಳ ಪ್ರಕಾರ, ಚಿತ್ರದ ಬಜೆಟ್ 500-570 ಕೋಟಿಗಳ ನಡುವೆ ಇತ್ತು.


 

89

ರಣವೀರ್ ಸಿಂಗ್-ದೀಪಿಕಾ ಪಡುಕೋಣೆ ಅವರ ಚಿತ್ರ 83, ಡಿಸೆಂಬರ್ 2021 ರಲ್ಲಿ ಬಿಡುಗಡೆಯಾಯಿತು, ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ವ್ಯಾಪಾರ ಮಾಡಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಸುಮಾರು 270 ಕೋಟಿ ಬಜೆಟ್‌ನಲ್ಲಿ ಚಿತ್ರವನ್ನು ಸಿದ್ಧಪಡಿಸಲಾಗಿದೆ.

99

2019 ರಲ್ಲಿ ಬಂದ ಸೌತ್ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯದ ಸಾಹೋ ಚಿತ್ರದ ಬಜೆಟ್ ಕೂಡ ದೊಡಡ್ದಾಗಿತ್ತು, ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿದ ಈ ಚಿತ್ರದ ಬಜೆಟ್ 350 ಕೋಟಿ ರೂಪಾಯಿಗಳು.

click me!

Recommended Stories