ಕೊರೋನಾದಿಂದ ಚೇತರಿಸಿಕೊಂಡ ಬೇಬೋ Christmas ಪಾರ್ಟಿಯಲ್ಲಿ!

Suvarna News   | Asianet News
Published : Dec 27, 2021, 06:41 PM IST

ಕರೀನಾ ಕಪೂರ್  (Kareena Kapoor) ಮತ್ತು ಅಮೃತಾ ಅರೋರಾ (Amrita Arora) ಇತ್ತೀಚೆಗೆ ಕರೋನಾಗೆ ತುತ್ತಾಗಿದ್ದರು. ಆದರೆ ಈಗ ಸಂಪೂರ್ಣ ಚೇತರಿಸಿಕೊಂಡಿದ್ದು, ಮತ್ತೆ ಪಾರ್ಟಿ ಶುರು ಮಾಡಿಕೊಂಡಿದ್ದಾರೆ. ಕರಿಷ್ಮಾ ಕಪೂರ್ (Karisma Kapoor) ಕ್ರಿಸ್‌ಮಸ್ (Christmas 2021) ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದರು. ಪತಿ ಸೈಫ್ ಅಲಿ ಖಾನ್ (Saif Ali Khan) ಮತ್ತು ಮಗ ತೈಮೂರ್ ಅಲಿ ಖಾನ್ (Taimur Ali Khan) ಅವರೊಂದಿಗೆ ಕರೀನಾ ಈ ಪಾರ್ಟಿಗೆ ಆಗಮಿಸಿದರು. ಅದೇ ಸಮಯದಲ್ಲಿ, ಅಮೃತಾ ಅರೋರಾ ಕೂಡ ಪತಿ ಶಕೀಲ್ ಲಡಾಕ್ ಜೊತೆ ಕಾಣಿಸಿಕೊಂಡರು. ಮಲೈಕಾ ಅರೋರಾ  (Malaika Arora)  ಕರಿಷ್ಮಾ ಅವರ ಮನೆಯ ಹೊರಗೆ ಕಾಣಿಸಿಕೊಂಡರು. ಇದರ ಫೋಟೋಗಳು ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕರಿಷ್ಮಾ ಕಪೂರ್ ಅವರ ಡಿನ್ನರ್ ಪಾರ್ಟಿಗೆ ಆಗಮಿಸಿದ ಸೆಲೆಬ್ರಿಟಿಗಳ ಫೋಟೋಗಳು ಇಲ್ಲಿವೆ ನೋಡಿ.

PREV
110
ಕೊರೋನಾದಿಂದ ಚೇತರಿಸಿಕೊಂಡ ಬೇಬೋ Christmas ಪಾರ್ಟಿಯಲ್ಲಿ!

ಕರೀನಾ ಕಪೂರ್ ಅಮೃತಾ ಅರೋರಾ ಅವರು ಕರಿಷ್ಮಾ ಕಪೂರ್ ಪಾರ್ಟಿಯಲ್ಲಿ ಹಾಜರಾಗಿದ್ದರು. ಈ ಸಮಯದ ಕರೀನಾ ಕಪೂರ್ ಮತ್ತು ಅಮೃತಾ ಅರೋರಾ ಅವರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿವೆ.

210

ಈ ಫೋಟೋದಲ್ಲಿ ಕರೀನಾ ಹಾಗೂ ಅಮೃತಾ ಇಬ್ಬರೂ ಪೋಸ್ ಕೊಡುತ್ತಿರುವುದು ಕಂಡು ಬಂದಿದೆ. ಕರೀನಾ ಕಪ್ಪು ಆಫ್ ಶೋಲ್ಡರ್ ಟಾಪ್ ಮತ್ತು ಲೈಟ್ ಕಲರ್ ಪ್ಯಾಂಟ್ ಧರಿಸಿದ್ದರೆ, ಅಮೃತಾ ಪಿಂಕ್‌ ಬಣ್ಣದ ಫರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

310

ಸೈಫ್ ಅಲಿ ಖಾನ್‌ ಸಹ ಪತ್ನಿ ಕರೀನಾ ಕಪೂರ್ ಅಕ್ಕನ ಮನೆಯ ಪಾರ್ಟಿಯಲ್ಲಿ ಕಾಣಿಸಿಕೊಂಡರು.ಈ ಸಮಯದಲ್ಲಿ, ಸೈಫ್ ತನ್ನ ಹೆಂಡತಿಯ ಉಡುಗೆಗೆ ಮ್ಯಾಚ್‌ ಆಗುವ ಬಣ್ಣದ ಬಟ್ಟೆಗಳನ್ನು ಧರಿಸಿದ್ದರು.


 

410

ತೈಮೂರ್ ಅಲಿ ಖಾನ್ ಕೂಡ ಅಪ್ಪ ಅಮ್ಮನ ಜೊತೆ ಪಾರ್ಟಿ ಮಾಡಲು ದೊಡ್ಡಮ್ಮ ಕರಿಷ್ಮಾ ಕಪೂರ್ ಅವರ ಮನೆಗೆ ಆಗಮಿಸಿದ್ದ. ಈ ಫೋಟೋಗಳಲ್ಲಿ, ತೈಮೂರ್ ತಿಳಿ ಬಣ್ಣದ ಶರ್ಟ್ ಮತ್ತು ಮುಖಕ್ಕೆ ಮಾಸ್ಕ್‌ ಧರಿಸಿದ್ದರೂ ಮುದ್ದಾಗಿ ಕಾಣಿಸುತ್ತಿದ್ದ.

510

ಬಹಳ ಹೊತ್ತಿನ ನಂತರ ಛಾಯಾಗ್ರಾಹಕರ ಮುಂದೆ ಬಂದ ಕರೀನಾ-ಸೈಫ್  ಜೋಡಿ ಕ್ಯಾಮೆರಾಮನ್ ಗೆ ಪೋಸ್ ಕೂಡ ಕೊಟ್ಟಿತು. ಕರೀನಾ ಕಪೂರ್ ಖಾನ್  ಕೋವಿಡ್ -19 ಟೆಸ್ಟ್‌ ರಿಸೆಲ್ಟ್ ನೆಗೆಟಿವ್ ಬಂದಿದ್ದು. ಕ್ರಿಸ್‌ಮಸ್‌ ಸಮಯಕ್ಕೆ ಸರಿಯಾಗಿ  ಅವರು ತಮ್ಮ ಕ್ವಾರಂಟೈನ್‌ ಅವಧಿಯನ್ನು ಮುಗಿಸಿದ್ದಾರೆ.

 

610

ಈ ಸಂದರ್ಭದಲ್ಲಿ ಮಲೈಕಾ ಅರೋರಾ ಬ್ರೈಟ್‌ ಗ್ರೀನ್‌ ಹಾಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡರು. ಮಲೈಕಾ ಅರೋರಾ ಅವರು ಕೂದಲು ಕಟ್ಟದೆ ಹಾಗೇ ಬಿಟ್ಟಿದ್ದರು ಮತ್ತು ನ್ಯೂಡ್‌  ನಗ್ನ ಮೇಕಪಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

710

ಮಲೈಕಾ ಅರೋರಾ ಅವರ ಬಾಯ್‌ಫ್ರೆಂಡ್‌ ಅರ್ಜುನ್ ಕಪೂರ್ ಜೊತೆ ಕರಿಷ್ಮಾ ಕಪೂರ್ ಮನೆ ಪಾರ್ಟಿಗೆ  ತಲುಪಿದ್ದಾರೆ. ಈ ವೇಳೆ ಅರ್ಜುನ್ ಬ್ಲ್ಯಾಕ್‌ ಕಲರ್‌ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಮಾಸ್ಕ್ ಕೂಡ ಹಾಕಿಕೊಂಡಿದ್ದರು.

810

ಅಮೃತಾ ಅರೋರಾ ತನ್ನ ಪತಿ ಶಕೀಲ್ ಲಡಾಕ್ ಜೊತೆಗೆ ಕ್ಯಾಮೆರಾಮನ್‌ಗೆ ಪೋಸ್ ನೀಡಿದರು. ಅಮೃತಾ ಅರೋರಾ ಅವರು ಬಹಳ ದಿನಗಳಿಂದ ಸಿನಿಮಾಗಳಿಂದ ದೂರವಾಗಿ ಕೌಟುಂಬಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.

910

ಅಮೃತಾ ಅರೋರಾ  ಕರಿಷ್ಮಾರ ಪಾರ್ಟಿಗೆ ಗುಲಾಬಿ ಬಣ್ಣದ ಫರ್‌ ಔಟ್ ಫಿಟ್‌ ಧರಿಸಿದ್ದರು. ಛಾಯಾಗ್ರಾಹಕರಿಗೆ ಪೋಸ್ ನೀಡಿದ ಅಮೃತಾ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.


 

1010

ಕರಿಷ್ಮಾ ಕಪೂರ್ ತಮ್ಮ ಕಸಿನ್‌  ನತಾಶಾ ನಂದಾ ಅವರನ್ನು ಸಹ ಪಾರ್ಟಿಗೆ ಆಹ್ವಾನಿಸಿದ್ದರು. ಪಾಪರಾಜಿಗಳು  ನತಾಶಾ ಅವರ ಫೋಟೋಗಳನ್ನು ಕ್ಲಿಕ್ ಮಾಡಲು ಬಯಸಿದ ತಕ್ಷಣ, ಅವರು ತಮ್ಮ ಸಂಪೂರ್ಣ ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡರು.

Read more Photos on
click me!

Recommended Stories