ಕನ್ನಡ ಕಿರುತೆರೆಯ ಖ್ಯಾತ ನಟ ನಿನಾದ್ ಇತ್ತೀಚಿಗಷ್ಟೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ನಟ ನಿನಾದ್ ಬಹುಕಾಲದ ಗೆಳತಿ ರಮ್ಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬೆಂಗಳೂರಿನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ನಿನಾದ್ ಪ್ರೇಯಸಿ ರಮ್ಯಾಗೆ ಮಾಂಗಲ್ಯ ಧಾರಣೆ ಮಾಡಿದರು.
ನಿನಾದ್ ಮತ್ತು ರಮ್ಯಾ ಮದುವೆ ಮೇ 20 ರಂದು ಬೆಂಗಳೂರಿನಲ್ಲಿ ನೆರವೇರಿತು. ಈ ಮದುವೆ ಸಮಾರಂಭದಲ್ಲಿ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆ ಗಣ್ಯರು ಹಾಜರಿದ್ದರು. ನವ ಜೋಡಿಗೆ ಶುಭಹಾರೈಸಿದ್ದರು. ನಿನಾದ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದೀಗ ಮದುವೆ ಬಳಿಕ ನಿನಾದ್ ಮಾಡಿಸಿರುವ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪತ್ನಿ ರಮ್ಯಾ ಜೊತೆ ನಿನಾದ್ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ನಿನಾದ್ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲಾತಣದಲ್ಲಿ ಶೇರ್ ಮಾಡಿದ್ದಾರೆ.
ಬಿಳಿ ಬಣ್ಣದ ಶೇರ್ವಾನಿಯಲ್ಲಿ ನಿನಾದ್ ಕಂಗೊಳಿಸುತ್ತಿದ್ದರೆ ನೀಲಿ ಬಣ್ಣದ ಸೀರಿಯಲ್ಲಿ ರಮ್ಯಾ ಮಿಂಚಿದ್ದಾರೆ. ಇಬ್ಬರು ತರಹೇವಾರಿ ಪೋಸ್ ಗಳನ್ನು ನೀಡಿದ್ದು ಫೋಟೋಗಳು ವೈರಲ್ ಆಗಿವೆ.
ಮದುವೆಯಲ್ಲಿ ನಟ ನಿನಾದ್ ಬಿಳಿ ಬಣ್ಣದ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ರಮ್ಯಾ ಸಹ ರಾಯಲ್ ಲುಕ್ ಲ್ಲಿ ಕಂಗೊಳಿಸುತ್ತಿದ್ದರು. ಅಂದಹಾಗೆ ನಟ ನಿನಾದ್ ತನ್ನ ಪ್ರೀತಿ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ.
ಅಂದಹಾಗೆ ನಿನಾದ್ ಪ್ರೀತಿಯ ವಿಚಾರವನ್ನು ಎಲ್ಲಿಯೂ ಬಹಿರಂಗ ಪಡಿಸಿರಲಿಲ್ಲ. ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ನಿನಾದ್ ಪ್ರೀತಿ ವಿಚಾರ ಬಹಿರಂಗ ಪಡಿಸಿದ್ದರು. ಈ ಬಗ್ಗೆ ನಿನಾದ್ ಸಾಮಾಜಿಕ ಜಾಲತಾಣದಲ್ಲಿ, 'ಎಲ್ಲರೊಟ್ಟಿಗೆ ಸಂತೋಷದ ವಿಚಾರವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಅವರ ಆಶೀರ್ವಾದ ಪಡೆದುಕೊಂಡು ರಮ್ಯಾ ಮತ್ತು ನಾನು ನಿಶ್ಚಿತಾರ್ಥ ಮಾಡಿಕೊಂಡಿದ್ದೀವಿ' ಎಂದು ಬರೆದಿದ್ದರು.
ninaad
ಕನ್ನಡ ಕಿರುತೆರೆಯ ಜನಪ್ರಿಯ ನಟನಾಗಿ ಹೊರಹೊಮ್ಮಿರುವ ನಿನಾದ್ ಸದ್ಯ ನಾಗಿನಿ-2 ನಲ್ಲಿ ನಟಿಸಿದ್ದರು. ಬಾಲಕಲಾವಿದನಾಗಿ ನಿನಾದ್ ಬಣ್ಣದ ಲೋಕದ ಜರ್ನಿ ಪ್ರಾರಂಭ ಮಾಡಿದರು.