ಮೂವಿ ಮಾಫಿಯಾ ಗೂಂಡಾಗಳಿಗಿಂತ ನಂಗೆ ಮುಂಬೈ ಪೊಲೀಸರ ಭಯ: ಕಂಗನಾ

First Published | Aug 31, 2020, 12:47 PM IST

ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಕಂಗನಾ ರಣಾವತ್‌ ಮುಂದಾಗಿದ್ದಾರೆ. ಕಂಗನಾ ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳು ಸ್ವಜನಪಕ್ಷಪಾತ, ಮೂವಿ ಮಾಫಿಯಾ ಮತ್ತು ಡ್ರಗ್ಸ್ ದಂಧೆಯಲ್ಲಿ ತೊಡಗಿರುವುದಾಗಿ ಆರೋಪಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕ ರಾಮ್ ಕದಮ್,  ಕಂಗನಾರಿಗೆ  ಪೊಲೀಸ್ ರಕ್ಷಣೆ ನೀಡುವಂತೆ ಮಹಾರಾಷ್ಟ್ರ ಸರ್ಕಾರವನ್ನು ಇತ್ತೀಚೆಗೆ ಆಗ್ರಹಿಸಿದ್ದರು. ಆದರೆ, ಪೊಲೀಸ್ ರಕ್ಷಣೆ ನೀಡದಿದ್ದಾಗ ಕಂಗನಾ ಮಹಾರಾಷ್ಟ್ರ ಸರ್ಕಾರವನ್ನು ಗುರಿಯಾಗಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಂಗನಾ, ರಾಮ್ ಕದಮ್‌ಗೆ ಧನ್ಯವಾದ ಅರ್ಪಿಸಿದ್ದು, ಮುಂಬೈ ಪೊಲೀಸರಿಂದ ರಕ್ಷಣೆಯನ್ನು ತೆಗೆದುಕೊಳ್ಳಲು ಸಹ ನಿರಾಕರಿಸಿದ್ದಾರೆ.

ಕಂಗನಾ ಬಾಲಿವುಡ್‌ನ ಅನೇಕ ಸೆಲೆಬ್ರೆಟಿಗಳ ವಿರುದ್ಧ ಡ್ರಗ್ಸ್‌ ದಂಧೆ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಈ ಸಮಯದಲ್ಲಿ ಮೂವಿ ಮಾಫಿಯಾ ಗೂಂಡಾಗಳಿಗಿಂತ ನಾನು ಮುಂಬೈ ಪೊಲೀಸರಿಗೆ ಹೆದರುತ್ತೇನೆ ಎಂದು ಕಂಗನಾ ಟ್ವೀಟಿಸಿದ್ದಾರೆ.
Tap to resize

ಕಂಗನಾಳ ಈ ಟ್ವೀಟ್‌ ಸಖತ್‌ ವೈರಲ್‌ ಆಗುತ್ತಿದೆ.
'ನನ್ನ ಪರ ಮಾತನಾಡಿದ್ದಕ್ಕಾಗಿಧನ್ಯವಾದಗಳು ಸರ್. ಚಲನಚಿತ್ರ ಮಾಫಿಯಾದ ಗೂಂಡಾಗಳಿಗಿಂತ ನಾನು ಮುಂಬೈ ಪೊಲೀಸರಿಗೆ ಹೆದರುತ್ತಿದ್ದೇನೆ. ಮುಂಬೈನಲ್ಲಿ ನಾನು ಇದ್ದಾಗ ಹಿಮಾಚಲ ಪ್ರದೇಶದ ಪೊಲೀಸರು ರಕ್ಷಣೆ ಕೊಟ್ಟಿದ್ದರು ಅಥವಾಕೇಂದ್ರದಿಂದ ನೇರವಾಗಿ ರಕ್ಷಣೆ ಸಿಕ್ಕಿತ್ತು. ಮುಂಬೈ ಪೊಲೀಸ್‌ ಬೇಡ ದಯವಿಟ್ಟು,' ಎಂದು ಬಿಜೆಪಿ ಮುಖಂಡ ರಾಮ್ ಕದಮ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ ಮಣಿಕರ್ಣಿಕಾ ನಟಿ.
ಕಂಗನಾ ರಣಾವತ್ಬಾಲಿವುಡ್‌ನ ಡ್ರಗ್ ಮಾಫಿಯಾ ಮತ್ತು ನೆಕ್ಸಸ್ ಅನ್ನು ಬಹಿರಂಗಪಡಿಸುವಲ್ಲಿ ನಿರತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ರಕ್ಷಣೆ ಬೇಕು.ಮಹಾರಾಷ್ಟ್ರ ಸರ್ಕಾರ ಅವರಿಗೆ ಇನ್ನೂ ಯಾವುದೇ ಭದ್ರತೆ ನೀಡಿಲ್ಲ ಎಂದು ಈ ಮೊದಲು ರಾಮ್ ಕದಮ್ ಟ್ವೀಟ್‌ ಮಾಡಿದ್ದರು.
ಸುಶಾಂತ್ ಸಿಂಗ್ ಆತ್ಮಹತ್ಯೆ ನಂತರ ಮಾಧ್ಯಮದಲ್ಲಿ ಸಿಕ್ಕಪಾಟ್ಟೆ ಸುದ್ದಿಯಾಗುತ್ತಿರುವ ಕಂಗನಾ, ಹಲವು ಕಾರಣಗಳಿಂದ ಟ್ರೆಂಡ್‌ನಲ್ಲಿದ್ದಾರೆ. ಅವರ ಹೇಳಿಕೆಗಳಿಂದ ಹಲವು ಇಲಿಗಳು ಬಿಲ ಸೇರುವಂತೆ ಮಾಡಿದೆ.
ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಸರಕಾರ ನಡೆಸುತ್ತಿದ್ದರೀತಿಗೆ ಹಲವರಿಂದ ವಿರೋಧ ವ್ಯಕ್ತವಾಗುತ್ತಿದೆ.
ಆಗಸ್ಟ್ 26 ರಂದು ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೆ ಡ್ರಗ್ ಲಿಂಕ್ ಸಿಕ್ಕಿದ ನಂತರ, ಚಿತ್ರೋದ್ಯಮದಲ್ಲಿ ಹರಡಿರುವ ಡ್ರಗ್ ಮಾಫಿಯಾವನ್ನು ಬಹಿರಂಗಪಡಿಸುವ ಘೋಷಣೆ ಮಾಡಿ ಕಂಗನಾ ಹಲವಾರು ಟ್ವೀಟ್‌ಗಳನ್ನು ಮಾಡಿದ್ದಾರೆ.
'ನಾನು ನಾರ್ಕೊಟಿಕ್ಸ್ ಬ್ಯೂರೋಗೆ ಸಹಾಯ ಮಾಡಲು ಬಯಸುತ್ತೇನೆ, ಆದರೆ ನನಗೆ ಕೇಂದ್ರ ಸರ್ಕಾರದಿಂದ ರಕ್ಷಣೆ ಬೇಕು' ನಾನು ನನ್ನ ವೃತ್ತಿ ಜೀವನವನ್ನು ಮಾತ್ರವಲ್ಲದೇ ವೈಯಕ್ತಿಕ ಜೀವನವನ್ನು ಸಹ ಪಣಕ್ಕಿಡಬೇಕಾಗುತ್ತದೆ. ಸುಶಾಂತ್ ಕೆಲವು ಕೊಳಕು ರಹಸ್ಯಗಳನ್ನು ತಿಳಿದುಕೊಂಡಿದ್ದ ಎಂಬುದು ಸ್ಪಷ್ಟ, ಅದು ಅವನ ಹತ್ಯೆಗೆ ಕಾರಣವಾಯಿತು. ಎಂದು ನಟಿ ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದರು.

Latest Videos

click me!