ಡಿವೋರ್ಸ್ ವದಂತಿ ನಿಜವಾ? ಕೋರ್ಟ್ ಮೆಟ್ಟಿಲೇರಿದ್ರಾ ಸಮಂತಾ-ನಾಗ ಚೈತನ್ಯ ?

Published : Sep 11, 2021, 03:14 PM ISTUpdated : Sep 11, 2021, 03:33 PM IST

ಸೌತ್‌ನ ಪಾಪ್ಯುಲರ್ ಜೋಡಿಯ ದಾಂಪತ್ಯ ಜೀವನ ಸ್ಟಾಪ್ ? ಕಾಲಿವುಡ್‌ನ ಕ್ಯೂಟ್ ಜೋಡಿಯ ವಿಚ್ಛೇದನೆ ವದಂತಿ ನಿಜವಾಯ್ತಾ ? ಕೋರ್ಟ್ ಮೆಟ್ಟಿಲೇರಿದ್ರಾ ಸಮಂತಾ-ನಾಗಚೈತನ್ಯ ?  

PREV
111
ಡಿವೋರ್ಸ್ ವದಂತಿ ನಿಜವಾ? ಕೋರ್ಟ್ ಮೆಟ್ಟಿಲೇರಿದ್ರಾ ಸಮಂತಾ-ನಾಗ ಚೈತನ್ಯ ?

ಸೌತ್‌ನ ಸ್ಟಾರ್ ಜೋಡಿಗಳಲ್ಲಿ ಒಂದಾದ ನಾಗಚೈತನ್ಯ ಹಾಗೂ ಸಮಂತಾ ರುಥ್‌ಪ್ರಭು ವಿವಾವ ವಿಚ್ಛೇದನೆ ಬಗ್ಗೆ ಕಳೆದೊಂದು ವಾರದಿಂದ ಸುದ್ದಿಯಾಗುತ್ತಲೇ ಇದೆ. ಟಾಲಿವುಡ್‌ನಲ್ಲಿ ಬಹುಬೇಡಿಕೆಯಲ್ಲಿರುವ ಸ್ಟಾರ್ ಕಪಲ್ ದಾಂಪತ್ಯ ಬಿರುಕಿನ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಈ ಬಗ್ಗೆ ವದಂತಿ ಮಾತ್ರ ಜೋರಾಗಿಯೇ ಇದೆ

211

ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ಪ್ರಮುಖ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಸಮಂತಾ ವೆಬ್ ಸಿರೀಸ್ ಮೂಲಕ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

311

ಇತ್ತ ನಾಗಚೈತನ್ಯ ಅವರೂ ಹಿಂದಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ದಾಂಪತ್ಯ ಜೀವನ ಚೆನ್ನಾಗಿದ್ದು, ಔದ್ಯೋಗಿಕವಾಗಿಯೂ ಇಬ್ಬರೂ ಸಕ್ಸಸ್‌ಫುಲ್ ಆಗಿ ಸಾಗುತ್ತಿದ್ದಾರೆ.

411

ಇಬ್ಬರೂ ಫ್ಯಾಮಿಲಿ ಲೈಫ್ ಹಾಗೂ ಕೆರಿಯರ್ ಎರಡನ್ನೂ ಸಮನಾಗಿ ತೂಗಿಸಿಕೊಂಡು ಬಂದಿದ್ದಾರೆ. ಫ್ಯಾಮಿಲಿ ಫಂಕ್ಷನ್‌ಗಳಲ್ಲಿಯೂ ಇಬ್ಬರೂ ಜೊತೆಯಾಗಿ ಎಲ್ಲರೊಂದಿಗೆ ಬೆರೆಯುತ್ತಾರೆ.

511

ಯಾವುದೇ ಆರೋಪ, ಬಿರುಕು ಒಂಚು ಚಿಕ್ಕ ಸೂಚನೆಯನ್ನೂ ನೀಡದಿರುವ ಜೋಡಿಯ ಬಗ್ಗೆ ಈಗ ವಿಚ್ಛೇದನೆ ಮಾತು ಕೇಳಿ ಬಂದಿರುವುದು ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

611

ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ವಿಚ್ಛೇದನದ ವದಂತಿಗಳು ಈಗ ಬಹಳ ದಿನಗಳಿಂದ ಹೆಚ್ಚೆಚ್ಚು ಸುದ್ದಿ ಮಾಡುತ್ತಿದೆ. ಸಮಂತಾ ಅಕ್ಕಿನೇನಿ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಿಂದ 'ಅಕ್ಕಿನೇನಿ'ಯನ್ನು ಕೈಬಿಟ್ಟ ನಂತರ ಈ ಸುದ್ದಿ ಮತ್ತಷ್ಟು ಪುಷ್ಟಿ ಪಡೆದಿದೆ.

711

ಮಾವ ನಾಗಾರ್ಜುನ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಗೂ ನಟಿ ಗೈರುಹಾಜರಾಗಿದ್ದರು. ಇದು ವದಂತಿಗಳಿಗೆ ಇನ್ನಷ್ಟು ಸಾಕ್ಷಿ ಕೊಟ್ಟಂತಿತ್ತು. ಸಾಕ್ಷಿ ಪೋಸ್ಟ್ ಪ್ರಕಟಿಸಿದ ಇತ್ತೀಚಿನ ವರದಿಗಳ ಪ್ರಕಾರ, ಇವರಿಬ್ಬರು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮದುವೆ ಸಲಹೆಗಾರರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. 

811

ಇಬ್ಬರೂ ಈ ವಿಷಯವನ್ನು ಕೌಟುಂಬಿಕ ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ಅನೇಕ ವರದಿಗಳು ಹೇಳುತ್ತವೆ. ಆದರೂ ವಿಚ್ಛೇದನ ವದಂತಿಗಳ ಬಗ್ಗೆ ಎರಡೂ ಪಕ್ಷಗಳಿಂದ ಅಧಿಕೃತ ದೃಢೀಕರಣವಿಲ್ಲ.

911

ಅನುಪಮಾ ಚೋಪ್ರಾ ಜೊತೆಗಿನ ಮಾತುಕತೆಯಲ್ಲಿ ನಟಿ ಯಾವುದೇ ಮಾತುಬಿಟ್ಟುಕೊಟ್ಟಿಲ್ಲ. ಬದಲಾಗಿ 11 ವರ್ಷಗಳಲ್ಲಿ ವಿರಾಮ ತೆಗೆದುಕೊಳ್ಳದ ಕಾರಣ ವಿರಾಮಕ್ಕೆ ಹೋಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.

1011

ಕೆಲಸದ ವಿಚಾರದಲ್ಲಿ ಸಮಂತಾ ಅಕ್ಕಿನೇನಿ ಕೊನೆಯದಾಗಿ ದಿ ಫ್ಯಾಮಿಲಿ ಮ್ಯಾನ್ 2 ರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ತಮ್ಮ ಮುಂಬರುವ ಚಿತ್ರ ಶಕುಂತಲಂನ ಚಿತ್ರೀಕರಣವನ್ನು ಮುಗಿಸಿದರು.

 

1111

ಅವರು ಇತ್ತೀಚೆಗೆ ಲೂಯಿ ವಿಟಾನ್ ಗಾಗಿ ಕೆಲವು ಹಾಟ್ ಫೋಟೋ ಅಪ್ ಮಾಡಿದ್ದರು. ಮತ್ತೊಂದೆಡೆ ನಾಗ ಚೈತನ್ಯ ಅಮೀರ್ ಖಾನ್ ಜೊತೆ ಲಾಲ್ ಸಿಂಗ್ ಚಡ್ಡಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಸಾಯಿ ಪಲ್ಲವಿ ಜೊತೆ ಲವ್ ಸ್ಟೋರಿ 2021 ಎಂಬ ಸಿನಿಮಾ ಕೂಡಾ ಮಾಡಿದ್ದಾರೆ

click me!

Recommended Stories