ಬಾಲಿವುಡ್‌ನಲ್ಲೂ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಹೋಳಿ ಹಬ್ಬದಂದು ಕಂಗನಾ ರಣಾವತ್ ಕೂಡ ಬಣ್ಣಗಳ ಜೊತೆ ಸಖತ್ ಎಂಜಾಯ್ ಮಾಡಿದ್ದಾರೆ.
ಕಂಗನಾ ಅವರ ಹೋಳಿ ವಿಡಿಯೋವೊಂದು ಹೊರಬಿದ್ದಿದ್ದು, ಕೈಯಲ್ಲಿ ಬಣ್ಣದ ತಟ್ಟೆ ಹಿಡಿದುಕೊಂಡು ಜನರ ಹಿಂದೆ ಓಡುತ್ತಿರುವುದನ್ನು ಕಾಣಬಹುದು. ಈ ವೀಡಿಯೋ ಕಂಗನಾರ ಮುಂದಿನ ಸಿನಿಮಾ ಚಂದ್ರಮುಖಿ ಸೆಟ್‌ನಿಂದ ಬಂದಿದೆ.
ಸ್ವತಃ ಈ ವೀಡಿಯೊವನ್ನು ಕಂಗನಾ ಹಂಚಿಕೊಂಡಿದ್ದು , 'ಚಂದ್ರಮುಖಿ ಸೆಟ್‌ನಲ್ಲಿ ಇಂದು ಬೆಳಗ್ಗೆ ಹೋಳಿ' ಎಂದು ಬರೆದಿದ್ದಾರೆ. ಈ ವೇಳೆ ಕಂಗನಾ ಬಿಳಿ ಬಣ್ಣದ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಕಪ್ಪು ಕನ್ನಡಕ ಹಾಕಿಕೊಂಡಿದ್ದಾರೆ.
ಕಂಗನಾ ಕೈಯಲ್ಲಿ ವಿವಿಧ ಬಣ್ಣಗಳನ್ನು ತುಂಬಿರುವ ಪ್ಲೇಟ್ ಇದೆ ಮತ್ತು ಜನರ ಹಿಂದೆ ಓಡಿ ಕಂಗನಾ ಬಣ್ಣವನ್ನು ಎಲ್ಲರಿಗೂ ಹಚ್ಚಿದ್ದಾರೆ: ಚಿತ್ರದ ತಂಡದ ಪ್ರತಿಯೊಬ್ಬ ಸದಸ್ಯರ ಹಿಂದೆ ಓಡುತ್ತಿರುವ ಕಂಗನಾರಿಂದ ತಪ್ಪಿಸಿಕೊಳ್ಳಲು ಜನರು ಪ್ರಯತ್ನಿಸುತ್ತಾರೆ.
ಈ ದಿನಗಳಲ್ಲಿ ಕಂಗನಾ 'ಚಂದ್ರಮುಖಿ 2' ಚಿತ್ರದ ಚಿತ್ರೀಕರಣದಲ್ಲಿದ್ದಾರೆ . ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ನೃತ್ಯ ಮಾಡುವ ನರ್ತಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಂದ್ರಮುಖಿ 2 ಚಿತ್ರದಲ್ಲಿ ಕಂಗನಾ ರಾಘವ್ ಲಾರೆನ್ಸ್ ಎದುರು ಕಾಣಿಸಿಕೊಳ್ಳಲಿದ್ದಾರೆ.ಚಂದ್ರಮುಖಿ 2' 2005 ರಲ್ಲಿ ಬಿಡುಗಡೆಯಾದ ರಜನಿಕಾಂತ್ ಅವರ ಹಾರರ್-ಕಾಮಿಡಿ 'ಚಂದ್ರಮುಖಿ' ಯ ಮುಂದುವರಿದ ಭಾಗ.
ಇದಲ್ಲದೆ ಕಂಗನಾ ರಣಾವತ್ ಅವರು 'ಎಮರ್ಜೆನ್ಸಿ' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಶ್ರೇಯಸ್ ತಲ್ಪಾಡೆ, ಅನುಪಮ್ ಖೇರ್ ಮತ್ತು ಮಿಲಿಂದ್ ಸೋಮನ್ ಸಹ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಮರ್ಜೆನ್ಸಿ ಕಂಗನಾ ಅವರು ಕೆಲಸ ಮಾಡುತ್ತಿರುವ 3ನೇ ಬಯೋಪಿಕ್ ಚಿತ್ರ. ಮೊದಲು ರಾಣಿ ಲಕ್ಷ್ಮೀಬಾಯಿ ಆಧಾರಿತ ಮಣಿಕರ್ಣಿಕಾ ಚಿತ್ರ ಮತ್ತು ನಂತರ ಅವರು ಜೆ ಜಯಲಲಿತಾ ಅವರ ಜೀವನಚರಿತ್ರೆ ತಲೈವಿಯಲ್ಲಿ ಕಾಣಿಸಿಕೊಂಡಿದ್ದಾರೆ.