ಕಂಗನಾಗೆ ಈಜಿಪ್ತ್‌ನ ಮುಸ್ಲಿಂ ಬಾಯ್‌ಫ್ರೆಂಡ್: ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

Published : Aug 18, 2021, 04:50 PM ISTUpdated : Aug 18, 2021, 05:07 PM IST

ಬಾಲಿವುಡ್ ಕ್ವೀನ್ ಕಂಗನಾಗೆ ಈಜಿಪ್ತ್ ಬಾಯ್‌ಫ್ರೆಂಡ್ ಕಂಗನಾಗೆ ಮುಸ್ಲಿಂ ಬಾಯ್‌ಫ್ರೆಂಡ್ ಇದ್ದಾನೆ ಎಂದ ನಿರ್ದೇಶಕ

PREV
17
ಕಂಗನಾಗೆ ಈಜಿಪ್ತ್‌ನ ಮುಸ್ಲಿಂ ಬಾಯ್‌ಫ್ರೆಂಡ್: ಸೀಕ್ರೆಟ್ ಬಿಚ್ಚಿಟ್ಟ ನಿರ್ದೇಶಕ

ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಬೋಲ್ಡ್ & ಸಿಂಗಲ್ ಅಂತ ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆಗೆ ಬಾಲಿವುಡ್ ನಿರ್ದೇಶಕ ಕಮಲ್ ಆರ್ ಖಾನ್ ಹೇಳಿರೋ ಹೇಳಿಕೆಯಿಂದ ಕಂಗನಾ ಬೋಲ್ಡ್ ಓಕೆ, ಇನ್ನೂ ಸಿಂಗಲ್ಲಾ ಅನ್ನೋ ಬಗ್ಗೆ ಸಂಶಯ ಹುಟ್ಟುವಂತಾಗಿದೆ.

27
Kangana Ranaut

ವಿವಾದಾತ್ಮಕ ಹೇಳಿಕೆ ನೀಡುವುದಕ್ಕೇ ಫೇಮಸ್ ಆಗಿರೋ ಕಮಲ್ ಸಿನಿಮಾ ಬಗ್ಗೆ, ಸೆಲೆಬ್ರಿಟಿಗಳ ಬಗ್ಗೆ, ಬಾಲಿವುಡ್ ಸ್ಟಾರ್‌ಗಳ ಭವಿಷ್ಯದ ಬಗ್ಗೆ ಆಗಾ ಮಾತನಾಡುತ್ತಿರುತ್ತಾರೆ. ಈಗ ಕಮಲ್ ನಟಿ ಕಂಗನಾ ರಣಾವತ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

37

ತಡರಾತ್ರಿ ಕಂಗನಾ ಪರ್ಸನಲ್ ಲೈಫ್ ಬಗ್ಗೆ ಟ್ವೀಟ್ ಮಾಡಿದ್ದು, ಸ್ವಲ್ಪ ಹೊತ್ತಲ್ಲಿ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಎಷ್ಟೇ ಬೇಗ ಟ್ವಿಟ್ ಡಿಲೀಟ್ ಮಾಡಿದ್ದರೂ ಕೆಲವೊಂದು ಸ್ಕ್ರೀನ್ ಶಾಟ್‌ಗಳು ಸೋಷಿಯಲ್ ಮಿಡಿಯಾದಲ್ಲಿ ಇಗಾಗಲೇ ವೈರಲ್ ಆಗಿದೆ.

47
Kangana

ಕಂಗನಾ ಹಾಗೂ ಇಮ್ರಾನ್ ಸಂಬಂಧವನ್ನು ಲವ್ ಜಿಹಾದ್ ಎಂದಿರುವ ಕಮಲ್, ಅಕ್ಕ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಟ್ವೀಟ್‌ನಲ್ಲಿ ಕಂಗನಾ ರಣಾವತ್ ಅವರ ಫೋಟೋಗಳೂ ಇದ್ದವು

57
Kangana

ಯುವಕನ ಕೆನ್ನೆಗೆ ಕಂಗನಾ ಮುತ್ತಿಡುತ್ತಿರುವ ಫೋಟೋ ಹಾಗೂ ಆತನನ್ನು ತಲ್ಲೀನಳಾಗಿ ತಬ್ಬಿಕೊಂಡಿರುವ ಫೋಟೋಗಳನ್ನು ಕಮಲ್ ಟ್ವೀಟ್ ಮಾಡಿದ್ದರು

67
Kangana

 ಕಂಗನಾ ಇತ್ತೀಚೆಗೆ ರಿಜ್ವಾನ್ ಎಂದು ಕರೆದಿರುವ ಹುಡುಗನಿಗೆ ಸ್ಪೆಷಲ್ ಬರ್ತ್‌ಡೇ ವಿಶ್ ಮಾಡಿದ್ದು, ಬಹಳಷ್ಟು ದೀರ್ಘ ಪತ್ರ ಕೂಡಾ ಬರೆದಿದ್ದಾರೆ.

77
Kangana

ಬರ್ತ್‌ಡೇ ವಿಶ್ ಮಾಡಿದ್ದ ಕಂಗನಾ ತಾನೇ ಕೇಕ್ ತಿನ್ನಿಸಿ ಕೆನ್ನೆಗೆ ಮುತ್ತಿಡುತ್ತಿರುವ ಫೋಟೊ ವೈರಲ್ ಆಗಿತ್ತು. ಧಾಕಡ್ ಸಿನಿಮಾ ಶೂಟಿಂಗ್ ಮುಗಿಸಿರುವ ನಟಿ ಫ್ಯಾಮಿಲಿ ಜೊತೆಗೆ ಸಮಯ ಕಳೆದಿದ್ದಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories