ಚಾಚಿ 420ಯಲ್ಲಿ ಜಾರಿದ Kamal Haasan ಸೆರಗು, ಸಹಾಯಕ ನಿರ್ದೇಶಕನಿಗೆ ಫಚೀತಿ!

First Published | Jun 3, 2022, 5:17 PM IST

ದಕ್ಷಿಣದ ಸೂಪರ್ ಸ್ಟಾರ್ ಕಮಲ್ ಹಾಸನ್ (Kamal Haasan) ಅಭಿನಯದ 'ವಿಕ್ರಮ್' ಚಿತ್ರ ಜೂನ್ 3 ರಂದು ಬಿಡುಗಡೆಯಾಗಲಿದೆ. ಸದ್ಯ ಈ ಸಿನಿಮಾದ ಪ್ರಚಾರದಲ್ಲಿ ಅವರು ಬ್ಯುಸಿಯಾಗಿದ್ದಾರೆ. ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ (Kapil Sharma) ಅವರ ‘ದಿ ಕಪಿಲ್ ಶರ್ಮಾ ಶೋ' ಕಾರ್ಯಕ್ರಮಕ್ಕೆ ಕಮಲ್ ಹಾಸನ್ ಆಗಮಿಸಿದ್ದರು. ಈ ಕಾರ್ಯಕ್ರಮದ ವೇಳೆ  ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ಕೆಲವು ತಮಾಷೆಯ ಕಥೆಗಳನ್ನು ಹಂಚಿಕೊಂಡಿದ್ದಾರೆ
 

Kamal Haasan

ಕಪಿಲ್ ಶರ್ಮಾ ಅವರು ಕಮಲ್ ಹಾಸನ್ ಬಳಿ ಸೂಪರ್‌ಹಿಟ್ ಚಿತ್ರ 'ಚಾಚಿ 420' ಬಗ್ಗೆ ಕೇಳಿದರು. ಕಮಲ್ ಹಾಸನ್ ಈ ಸಿನಿಮಾದಲ್ಲಿ ಹೆಂಗಸಿನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು.

‘ಚಾಚಿ 420 ಆಗಿ ಶೂಟಿಂಗ್ ಮಾಡುವಾಗ ಯಾರಿಗಾದರೂ ನಿಮ್ಮ ಮೇಲೆ ಪ್ರೀತಿ ಮೂಡಿದೆಯಾ’ಎಂದು ಕಾಮಿಡಿಯನ್‌ ಕಪಿಲ್‌ಶರ್ಮಾ (Kapil Sharma) ಕಮಲ್‌ ಹಾಸನ್‌ ಅವರಿಗೆ ಕೇಳಿದರು. ಅದಕ್ಕೆ ಕಮಲ್ ಹಾಸನ್ ಆ ಸಮಯದ ಒಂದು ಫನ್ನಿ ಘಟನೆಯನ್ನು (Funny Incident) ನೆನಪಿಸಿಕೊಂಡರು. 

Tap to resize

'ಸಹಾಯಕ ನಿರ್ದೇಶಕರು ನನಗೆ ಡೈಲಾಗ್ ಹೇಳಲು ಬರುತ್ತಿದ್ದಾಗ ನಾನು  ನೋಡಿದರೆ ಅವರು ನಡುಗುತ್ತಿದ್ದರು. ಏಕೆಂದರೆ ನನ್ನ ಸೀರೆಯ ಸೆರಗು ಯಾವಾಗಲೂ ಜಾರಿ ಬೀಳುತ್ತಿತ್ತು' ಎಂದು ಕಮಲ್‌ ಹಾಸ್ಯ ಅವರು ಎಂದು ತಮಾಷೆಯ ಘಟನೆಯನ್ನು ಹೇಳಿದರು.  

Image: PR Agency

ಕಮಲ್ ಹಾಸನ್ ಅವರ ಚಿತ್ರ ಚಾಚಿ 420 1997 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅವರಲ್ಲದೆ, ಟಬು (Tabu), ಅಮರೀಶ್ ಪುರಿ, ಪರೇಶ್ ರಾವಲ್, ಆಯೇಶಾ ಜುಲ್ಕಾ, ಓಂಪುರಿ (Om Puri) ಮತ್ತು ಫಾತಿಮಾ ಸನಾ ಶೇಖ್ ಬಾಲ ಕಲಾವಿದರಾಗಿ ಕಾಣಿಸಿಕೊಂಡಿದ್ದಾರೆ.

ಕಮಲ್ ಹಾಸನ್ ಅವರ ಮುಂದಿನ ಸಿನಿಮಾ ವಿಕ್ರಮ್‌ (Vikram)  ಜೂನ್ 3 ರಂದು ಬಿಡುಗಡೆಯಾಗಿದೆ. ಕಮಲ್ ಹಾಸನ್ ಅವರ 'ವಿಕ್ರಮ್' ಚಿತ್ರದಲ್ಲಿ ವಿಜಯ್ ಸೇತುಪತಿ (Vijay Sethupati) ಮತ್ತು ಫರ್ಹಾದ್ ಫಾಜಿಲ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಈ ಚಿತ್ರದಲ್ಲಿ ಕಮಲ್ ಹಾಸನ್ ಆಕ್ಷನ್ (Action) ಅವತಾರದಲ್ಲಿ (Role) ಕಾಣಿಸಿಕೊಳ್ಳಲಿದ್ದಾರೆ. ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ (Social Media) ಸದ್ದು ಮಾಡುತ್ತಿದೆ. ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹವಾ ಮೂಡಿಸಲಿದೆ ಮತ್ತು ಈ  ಚಿತ್ರ 200 ಕೋಟಿಗೂ ಹೆಚ್ಚು ಗಳಿಸಬಹುದು ಎನ್ನುತ್ತಾರೆ ಜನ.

Latest Videos

click me!