Hrithik Roshan ಹಂಚಿ ಕೊಂಡ ಹಾಟ್ ಬೆಡಗಿಯ ಫೋಟೋ ಯಾರದ್ದು

First Published | Jun 3, 2022, 4:57 PM IST

ಹೃತಿಕ್‌ ರೋಷನ್‌ (Hrithik Roshan) ಈ ದಿನಗಳಲ್ಲಿ ತಮ್ಮ ಲವ್‌ ಲೈಫ್‌ನಿಂದ ಸುದ್ದಿಯಲ್ಲಿದ್ದಾರೆ. ಅವರು ತಮ್ಮ ರೂಮರ್ಡ್‌ ಗರ್ಲ್‌ಫ್ರೆಂಡ್‌  ಸಾಬಾ ಅವರ ಕೈ ಹಿಡಿದು ನಡೆದ ಫೋಟೋಗಳು ಸಖತ್‌ ವೈರಲ್‌ ಆಗಿದೆ. ಇದರ ನಡುವೆ ಹೃತಿಕ್‌  ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌. ನಟನ ಹಾಟ್‌ ಹುಡುಗಿಯ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ. ಅಷ್ಟಕ್ಕೂ ಹೃತಿಕ್ ರೋಷನ್ ಹಂಚಿ ಕೊಂಡ ಹಾಟ್ ಬೆಡಗಿಯ ಫೋಟೋ ಯಾರು? ಇಲ್ಲಿದೆ. 

ಬಾಲಿವುಡ್‌ನ ಖ್ಯಾತ ರೋಷನ್ ಕುಟುಂಬದ ಮತ್ತೊಬ್ಬ ಸದಸ್ಯ ಚಿತ್ರರಂಗಕ್ಕೆ ಕಾಲಿಡಲಿದ್ದಾರೆ. ಇವರು ಸಂಗೀತಗಾರ ರಾಜೇಶ್ ರೋಷನ್  ಅವರ ಮಗಳು ಮತ್ತು ಹೃತಿಕ್ ರೋಷನ್ ಸೋದರಸಂಬಂಧಿ ಪಶ್ಮಿನಾ ರೋಷನ್. 

2003 ರಲ್ಲಿ ಬಂದ ಶಾಹಿದ್ ಕಪೂರ್ ಅವರ ಇಷ್ಕ್ ವಿಷ್ಕ್ ಚಿತ್ರದ ಸೀಕ್ವೆಲ್‌ನೊಂದಿಗೆ ಪಶ್ಮಿನಾ ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಪಶ್ಮಿನಾ ಈ ಬಗ್ಗೆ ಕೆಲವು ದಿನಗಳ ಹಿಂದೆ  ಇನ್‌ಸ್ಟಾಗ್ರಾಮ್‌ನಲ್ಲಿ  ತಮ್ಮ ಬಾಲಿವುಡ್‌ ಪ್ರವೇಶದ ಬಗ್ಗೆ ತಿಳಿಸಿದ್ದಾರೆ. 

Tap to resize

'ವರ್ಷಗಳ ತಪಸ್ಸು ಮತ್ತು ಕಠಿಣ ಪರಿಶ್ರಮ ಈಗ ಪೂರ್ಣಗೊಳ್ಳಲಿದೆ ಎಂದು ತೋರುತ್ತದೆ. ನನ್ನ ಮೊದಲ ಪರದೆಯ ಅನುಭವವನ್ನು ನಿಮಗೆ ತರಲು ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಉತ್ಸುಕನಾಗಿದ್ದೇನೆ. ಸಂಬಂಧಗಳನ್ನು ಅಪ್ಲಿಕೇಶನ್‌ಗಳಲ್ಲಿ ಕಾಣಬಹುದು ಮತ್ತು ಚಾಟ್‌ನಲ್ಲಿ ಕಳೆದುಹೋಗಬಹುದು, ಪ್ರೀತಿಗೆ ಅಪ್‌ಗ್ರೇಡ್ ಅಗತ್ಯವಿದೆ ಎಂದು ನಿಮಗೆ ತಿಳಿದಿದೆಯೇ. ಇಷ್ಕ್ ವಿಷ್ಕ್ ರಿಬೌಂಡ್. ಈಗ ಮುಂದುವರೆಯಲು ಸಮಯ' ಎಂದು ಫೋಟೋ ಹಂಚಿಕೊಂಡು ಬರೆದಿದ್ದರು.

ಈಗ ಪಶ್ಮಿನಾ ರೋಷನ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ  'ನೀವು ಪ್ರೀತಿಯನ್ನು ನಂಬುತ್ತೀರಿ ಮತ್ತು ನಾವು  ಪ್ರೀತಿಯನ್ನು ನಂಬುತ್ತೇವೆ  ಮತ್ತು ಈಗ ಪ್ಯಾರ್ ಇಷ್ಕ್ ವಿಷ್ಕ್ ರಿಬೌಂಡ್‌ನಿಂದ ಅಪ್‌ಗ್ರೇಡ್' ಆಗುತ್ತದೆ ಎಂದು ಬರೆದಿದ್ದಾರೆ 

ಪಶ್ಮಿನಾ ಪ್ರಸಿದ್ಧ ಸಂಗೀತಗಾರ ರಾಜೇಶ್ ರೋಷನ್ ಅವರ ಮಗಳು. ರಾಜೇಶ್ ರೋಷನ್ ಅನೇಕ  ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಈಗ ಅವರ ಮಗಳು ಕೂಡ ಇಂಡಸ್ಟ್ರಿಯಲ್ಲಿ ತನ್ನ talent ತೋರಿಸಲು ರೆಡಿಯಾಗಿದ್ದಾರೆ.

ಪಶ್ಮಿನಾ ರೋಷನ್ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾರೆ ಮತ್ತು ನಾದಿರಾ ಬಬ್ಬರ್ ಅವರಿಂದ ನಟನಾ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ ಇಂಗ್ಲಿಷ್ ನಾಟಕದ ಭಾಗವೂ ಆಗಿದ್ದಾರೆ. 

ಪಶ್ಮಿನಾ ರೋಷನ್ ಜೊತೆಗೆ ಜಿಬ್ರಾನ್ ಖಾನ್, ರೋಹಿತ್ ಸರ್ಫ್ ಮತ್ತು ನೈಲಾ ಗ್ರೆವಾಲ್ ಇಷ್ಕ್ ವಿಷ್ಕ್‌ನ ಸೀಕ್ವೆಲ್‌ನಲ್ಲಿ ಇರುತ್ತಾರೆ. ಸಾಮಾಜಿಕ ಮಾಧ್ಯಮದ ಸುತ್ತ ಹೆಣೆದಿರುವ ಇಷ್ಕ್ ವಿಷ್ಕ್ ರೀಬೌಂಡ್ ಕಥೆಯು ಆ್ಯಪ್ ಮೂಲಕ ಹೇಗೆ ಸಂಬಂಧಗಳನ್ನು ಕಂಡುಕೊಳ್ಳುತ್ತದೆ ಮತ್ತು ಕಳೆದುಕೊಳ್ಳುತ್ತದೆ ಎಂಬುದನ್ನು ತೋರಿಸುತ್ತದೆ.

 ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಪಶ್ಮಿನಾ ತಮ್ಮ ಹಲವು ಮಾದಕ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪಶ್ಮಿನಾ ರೋಷನ್‌ಗೆ ಪ್ರಯಾಣ ಮಾಡುವುದು ತುಂಬಾ ಇಷ್ಟ. ಅವಕಾಶ ಸಿಕ್ಕ ತಕ್ಷಣ ಲಾಂಗ್ ಟ್ರಿಪ್ ಹೋಗುತ್ತಾರೆ. ಅವರಿಗೆ ಪ್ರಕೃತಿಯ ಮೇಲೆ ಅಪಾರ ಪ್ರೀತಿ.

ಪಶ್ಮಿನಾ ರೋಷನ್ ತನ್ನ ಸೋದರ ಸಂಬಂಧಿ ಹೃತಿಕ್ ರೋಷನ್ ಜೊತೆಗೆ ವಿಶೇಷ ಬಾಂಧವ್ಯವನ್ನು ಹೊಂದಿದ್ದಾರೆ. ಆಕೆ ತನ್ನ ಸಹೋದರನಿಂದಲೂ ನಟನೆಯ ಸಲಹೆಗಳನ್ನು ತೆಗೆದುಕೊಳ್ಳುತ್ತಾರೆ.

Latest Videos

click me!